ಮಂಗಳೂರು: ಮಹಾತ್ಮಾ ಗಾಂಧಿಯವರ 150 ಜನ್ಮದಿನೋತ್ಸವದ ಅಂಗವಾಗಿ ಭಾರತ ಸರಕಾರವು ದೇಶದಾದ್ಯಂತ 9 ಲಕ್ಷ ಶೌಚಾಲಯಗಳನ್ನು ಕಟ್ಟಲು ಪಣತೊಟ್ಟಿದ್ದು ಇದಕ್ಕಾಗಿ ಮೇ 4ರಿಂದ 8 ರವರೆಗೆ ಪ್ರತಿಯೊಂದು ಸ್ಥಳೀಯಾಡಳಿತ ಸಂಸ್ಥೆಗಳು ಸ್ವಚ್ಚ ಭಾರತ ಅಭಿಯಾನ ಸಪ್ತಾಹ ಆಯೋಜಿಸಿದೆ ಎಂದು ಮಂಗಳೂರು ಮಹಾ ನಗರಪಾಲಿಕೆಯ ಆಯುಕ್ತರಾದ ಹೆಬ್ಸಿಬಾ ರಾಣಿ ಕೊರ್ಲಪತಿ ಹೇಳಿದರು.
ಅವರು ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಸ್ವಚ್ಚ ಭಾರತ ಅಭಿಯಾನದಡಿ ಶೌಚಾಲಯ ನಿಮರ್ಾಣ ಭಾರತದ ಪ್ರಥಾನಮಂತ್ರಿ ನರೇಂದ್ರ ಮೋದಿಯವರ ಕನಸಿನ ಯೋಜನೆಯಾಗಿದ್ದು, ಈಗಾಗಲೇ ದೇಶದಾದ್ಯಂತ ಅತೀ ವೇಗದಲ್ಲ ನಡೆಯುತ್ತಿದೆ. ರಾಜ್ಯ ಸರಕಾರ ಕೂಡ ಈ ಕುರಿತು ಆದೇಶವನ್ನು ನೀಡಿದ್ದು ಶೌಚಾಲಯಗಳು ಇಲ್ಲದಲ್ಲಿ ನಿಮರ್ಾಣ ಮಾಡುವಂತೆ ಹೇಳಿದೆ. ಪಾಲಿಕೆಯ ಅಧಿಕಾರಿಗಳು ಪ್ರಸ್ತುತ ಇರುವ ಶೌಚಾಲಯಗಳನ್ನು ಸರಿಯಾದ ವ್ಯವಸ್ಥೆಯಲ್ಲಿ ಇದೆಯೋ ಇಲ್ಲವೋ ಎನ್ನುವುದನ್ನು ಪರೀಶಿಲಿಸಿ ರಿಪೇರಿ ಮಾಡಲಾಗುವುದು ಇದಕ್ಕಾಗಿ ಕೇಂದ್ರ ಸರಕಾರ ಅನುದಾನವನ್ನು ಒದಗಿಸಲಿದೆ ಎಂದರು.
ರಾಜ್ಯ ನಗರಾಭಿವೃದ್ದಿ ಇಲಾಖೆಯಿಂದ ಸಮುದಾಯ ಶೌಚಾಲಯಗಳನ್ನು ಕಟ್ಟಲು ಅನುದಾನವನ್ನು ನೀಡುತ್ತಿದ್ದು, ಇದಕ್ಕಾಗಿ ಫಲಾನುಭವಿಗಳ ಆಯ್ಕೆಯ ಪ್ರಕ್ರಿಯೆಯನ್ನು ಆರಂಭಿಸಲಾಗಿದ್ದು, ಅಜರ್ಿ ಪತ್ರಗಳನ್ನು ಆನ್ಲೈನ್ ಮೂಲಕ ಸಲ್ಲಿಸಬಹುದು. ಅಲ್ಲದೆ ನಗರಪಾಲಿಕೆಯ ಅಧಿಕಾರಿಗಳನ್ನು ಇದಕ್ಕಾಗಿ ನೇಮಿಸಲಾಗಿದೆ. 60 ಸ್ವಚ್ಚ ಭಾರತ ಅಧಿಕಾರಿಗಳು ಮತ್ತು 60 ಸಹಾಯಕರುಗಳನ್ನು ಅಜರ್ಿಗಳನ್ನು ಸ್ವೀಕರಿಸುವ ಕೆಲಸಕ್ಕಾಗಿ ನೇಮಿಸಲಾಗಿದೆ ಎಂದರು.
ಸ್ವಚ್ಚ ಭಾರತ ಅಭಿಯಾನ ಸಪ್ತಾಹದ ಯಶಸ್ಸಿಗಾಗಿ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ನೇಮಿಸಲಾಗಿದ್ದು, ಜಿಲ್ಲಾ ಆರೋಗ್ಯಧಿಕಾರಿ ಇದರ ನೋಡಲ್ ಅಧಿಕಾರಿಯಾಗಿದ್ದಾರೆ. ಅಜರ್ಿಗಳ ಸ್ವೀಕಾರಕ್ಕಾಗಿ ನೇಮಿಸಲಾದ ಅಧಿಕಾರಿಗಳಿಗೆ ತರಬೇತಿ ಕೂಡ ನೀಡಲಾಗುವುದು. ಅಲ್ಲದೆ ಈ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲು ಸಹಾಯವಾಣಿಯನ್ನು ಆರಂಭಿಸಲಾಗಿದ್ದು ಸಾರ್ವಜನಿಕರು +918244232666.
ಸಹಾಯಕ ಆಯುಕ್ತ ಗೋಕುಲ್ದಾಸ್ ನಾಯಕ್, ಡಿಎಚ್ಒ ಮಂಜಯ್ಯ ಈ ವೇಳೆ ಉಪಸ್ಥಿತರಿದ್ದರು.