Spread the love
ಮಂಗಳೂರು: ಹಿಂಸಾತ್ಮಕವಾಗಿ ದನ ಸಾಗಾಟ – ಐವರ ಬಂಧನ
ಮಂಗಳೂರು: ಮೂಡುಬಿದಿರೆ ಕಡೆಯಿಂದ ಕೈಕಂಬ ಕಡೆಗೆ ಟೆಂಪೋದಲ್ಲಿ ಮಾ.28ರಂದು 19 ದನಗಳನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿದ್ದುದನ್ನು ಸೂರಲ್ಪಾಡಿಯಲ್ಲಿ ಬಜಪೆ ಪೊಲೀಸರು ಪತ್ತೆ ಮಾಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಬಂಧಿಸಲಾಗಿದೆ.
ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ದುಗನಬೆಟ್ಟು ಹೌಸಿನ ಮೊಹಮ್ಮದ್ ತೌಸೀಫ್ (26), 62ನೇ ತೋಕೂರು ಗ್ರಾಮದ ನಡುಮನೆಯ ಆರಾಫತ್ ಅಲಿ (36), ಶಾಂತಿಗುಡ್ಡೆ ಹೌಸ್ನ ಮೊಹಮ್ಮದ್ ಅಫ್ರಿದ್ ಯಾನೆ ಅಪ್ಪಿ (27), ಮೂಡುಬಿದಿರೆ ಕೋಟೆಬಾಗಿಲಿನ ಅಬ್ದುಲ್ ನಜೀರ್ (31) ಹಾಗೂ ಬೆಳ್ತಂಗಡಿ ತಾಲೂಕಿನ ಕಾಶೀಪಟ್ಟ ಪೆರಂತಡ್ಕ ಫಾರೀಸ್ ಸಲ್ಮಾನ (26) ಬಂಧಿತರು. ಇನ್ನೂ ಕೆಲವರು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ.
Spread the love