ಮಂಗಳೂರು: ಹೆತ್ತವರಿಂದ ಬೇರ್ಪಟ್ಟ ಮಕ್ಕಳ ಪೋಷಕರ ಪತ್ತೆಗಾಗಿ ಮನವಿ

Spread the love

ಮಂಗಳೂರು: ಹೆತ್ತವರಿಂದ ಬೇರ್ಪಟ್ಟ ಮಕ್ಕಳ ಪೋಷಕರ ಪತ್ತೆಗಾಗಿ ಮನವಿ

ಮಂಗಳೂರು: ನಗರದಲ್ಲಿ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಹೆತ್ತವರಿಂದ ಬೇರ್ಪಟ್ಟ ಮಕ್ಕಳ ಪೋಷಕರ ಪತ್ತೆಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕಾ ಮನವಿ ಮಾಡಿದೆ.

ಮೊದಲ ಪ್ರಕರಣ: 2021 ಡಿಸೆಂಬರ್ 29 ರಂದು ಕಾರುಣ್ಯ (8) ಮತ್ತು ವೈಷ್ಣವಿ (7) ಎಂಬ ಎರಡು ಬಾಲಕಿಯರನ್ನು ಸಾರ್ವಜನಿಕರೊಬ್ಬರು ಮಕ್ಕಳ ಕಲ್ಯಾಣ ಸಮಿತಿಗೆ ತಂದೊಪ್ಪಿಸಿದ್ದು. ಪ್ರಸ್ತುತ ಬಾಲಕಿಯರನ್ನು ನಗರದ ಬಿಜೈ ಕಾಪಿಕಾಡ್, ಪ್ರಜ್ಞಾ ಚಿಣ್ಣರ ತಂಗುದಾಮಕ್ಕೆ ದಾಖಲಿಸಲಾಗಿದೆ.

ಬಾಲಕಿಯ ವಾರಿಸುದಾರರು 120 ದಿನಗಳೊಳಗೆ ಸೂಕ್ತ ದಾಖಲೆಗಳೊಂದಿಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಒಂದನೇ ಮಹಡಿ, ಜಿಲ್ಲಾಧಿಕಾರಿಗಳ ಕಚೇರಿ, ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು, ದೂರವಾಣಿ ಸಂಖ್ಯೆ 0824-2440004 ಸಂಪರ್ಕಿಸುವಂತೆ ಮಕ್ಕಳ ರಕ್ಷಣಾ ಘಟಕದ ಪ್ರಕಟಣೆ ತಿಳಿಸಿದೆ.

ಎರಡನೇ ಪ್ರಕರಣ: 2022 ಅಕ್ಟೋಬರ್ 6ರಂದು ಜಿಲ್ಲೆಯ ಉಳ್ಳಾಲ ತಾಲೂಕಿನ ಸೋಮೇಶ್ವರ ಗ್ರಾಮದ ಜಾಯ್ ಲ್ಯಾಂಡ್ ರೋಡ್, ಗೇರು ಸಂಶೋಧನ ಕೇಂದ್ರದ ಬಳಿ ಲಕ್ಷ್ಮಿ ನಿವಾಸದ ಹತ್ತಿರ ನವಜಾತ ಶಿಶು ಪತ್ತೆಯಾಗಿದ್ದು, ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಮಗುವಿನ ವಾರಿಸುದಾರರು 60 ದಿನಗಳೊಳಗೆ ಸೂಕ್ತ ದಾಖಲೆಗಳೊಂದಿಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಒಂದನೇ ಮಹಡಿ, ಜಿಲ್ಲಾಧಿಕಾರಿಗಳ ಕಚೇರಿ, ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು, ದೂರವಾಣಿ ಸಂಖ್ಯೆ 0824-2440004 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಮೂರನೇ ಪ್ರಕರಣ: 2024 ಫೆಬ್ರವರಿ 28ರಂದು ಜಿಲ್ಲೆಯ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂದೋಲ್ (15) ಎಂಬ ಬಾಲಕ ಪತ್ತೆಯಾಗಿದ್ದು, ಬೊಂದೇಲ್ ನಲ್ಲಿರುವ ಸರಕಾರಿ ಬಾಲಕರ ಬಾಲ ಮಂದಿರಕ್ಕೆ ದಾಖಲಿಸಲಾಗಿದೆ.

ಬಾಲಕನ ವಾರಿಸುದಾರರು 120 ದಿನಗಳೊಳಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಒಂದನೇ ಮಹಡಿ, ಜಿಲ್ಲಾಧಿಕಾರಿಗಳ ಕಚೇರಿ, ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು, ದೂರವಾಣಿ ಸಂಖ್ಯೆ 0824-2440004 ಸಂಪರ್ಕಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಪ್ರಕಟಣೆ ತಿಳಿಸಿದೆ.


Spread the love
Subscribe
Notify of

0 Comments
Inline Feedbacks
View all comments