ಮಂಗಳೂರು: ಹೆದ್ದಾರಿ ವಿಸ್ತರಣೆ – ಜ.16 ರಂದು ಪರಿಹಾರ ಪಾವತಿ
ಮಂಗಳೂರು: ರಾಷ್ಟ್ರೀಯ ಹೆದ್ದಾರಿ 169(13) ಸಾಣೂರು-ಬಿಕರ್ನಕಟ್ಟೆ ವಿಭಾಗದ ರಸ್ತೆ ಅಗಲೀಕರಣ/ನಿರ್ಮಾಣಕ್ಕಾಗಿ ಭೂಸ್ವಾಧೀನ ಪಡಿಸಲಾದ ಜಮೀನಿನ ಭೂಮಾಲೀಕರಿಗೆ ಪರಿಹಾರ ಪಾವತಿ ಹಾಗೂ ಕ್ಲೈಮ್‍ಗಳನ್ನು ಪಡೆಯುವ ಅದಾಲತ್ ಕಾರ್ಯಕ್ರಮ ಜ.16 ರಂದು ಬೆಳಿಗ್ಗೆ 11 ಗಂಟೆಗೆ ಗಂಜಿಮಠ ಗ್ರಾಮ ಪಂಚಾಯತ್ ಕಚೇರಿ ಹಾಗೂ ಜ.18 ರಂದು ಬೆಳಿಗ್ಗೆ 11 ಗಂಟೆಗೆ ಆಲಂಗಾರು ಮೂಡಬಿದ್ರೆ ಹೋಲಿ ರೋಸರಿ ಚರ್ಚ್ ಹಾಲ್‍ನಲ್ಲಿ ನಡೆಸಲಾಗುತ್ತದೆ.
ಭೂ ಸಂತ್ರಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಲು ಮಂಗಳೂರು ರಾಷ್ಟ್ರೀಯ ಹೆದ್ದಾರಿ ವಿಶೇಷ ಭೂಸ್ವಾಧೀನಾಧಿಕಾರಿ ಹಾಗೂ ಸಕ್ಷಮ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.