ಮಂಗಳೂರು: ಹೆಲ್ಮೆಟ್‌ನಿಂದ ಬಡಿದು ಕೆ.ಎಸ್.ಆರ್.ಟಿ.ಸಿ ‘ಅಶ್ವಮೇಧ’ ಬಸ್ಸಿನ ಗಾಜಿಗೆ ಹಾನಿ

Spread the love

ಮಂಗಳೂರು: ಹೆಲ್ಮೆಟ್‌ನಿಂದ ಬಡಿದು ಕೆ.ಎಸ್.ಆರ್.ಟಿ.ಸಿ ‘ಅಶ್ವಮೇಧ’ ಬಸ್ಸಿನ ಗಾಜಿಗೆ ಹಾನಿ

ಮಂಗಳೂರು: ದ್ವಿಚಕ್ರ ವಾಹನ ಅಡ್ಡ ಬಂದಿರುವ ವಿಚಾರವನ್ನು ಪ್ರಶ್ನಿಸಿದಕ್ಕಾಗಿ ಕೆಎಸ್ಸಾರ್ಟಿಸಿ ‘ಅಶ್ವಮೇಧ’ ಬಸ್‌ನ ಗಾಜಿಗೆ ಹೆಲ್ಮೆಟ್‌ನಿಂದ ಬಡಿದು ಹಾನಿಯನ್ನುಂಟು ಮಾಡಿರುವ ಘಟನೆ ನಗರದ ಅಳಪೆ ಎಂಬಲ್ಲಿ ರವಿವಾರ ಸಂಜೆ ನಡೆದಿರುವುದು ವರದಿಯಾಗಿದೆ.

ಮಂಗಳೂರಿನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಬಸ್‌ಗೆ ಅಳಪೆ ಬಳಿ ದ್ವಿಚಕ್ರ ವಾಹನ ಅಡ್ಡ ಬಂದಾಗ ಬಸ್‌ನ ಚಾಲಕ ಇದನ್ನು ಪ್ರಶ್ನಿಸಿದ ಎನ್ನಲಾಗಿದೆ.

ಈ ವೇಳೆ ಸಿಟ್ಟಿನಿಂದ ದ್ವಿಚಕ್ರ ವಾಹನ ಸವಾರ ಬಸ್‌ನ ಗಾಜಿಗೆ ಹೆಲ್ಮೆಟ್‌ನಿಂದ ಬಡಿದು ಪರಾರಿಯಾಗಿರುವುದಾಗಿ ತಿಳಿದು ಬಂದಿದೆ. ಬಸ್‌ ಚಾಲಕ ಅರುಣ್ ಎಂಬವರ ಕೈಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.

ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಕಂಕನಾಡಿ ಪೊಲೀಸರು ಬಸ್ಸುಚಾಲಕ ರನ್ನು ವಿಚಾರಿಸಿ, ಪ್ರಯಾಣಿಕರಿಗೆ ಬದಲಿ ವ್ಯವಸ್ಥೆ ಮಾಡಲಾಗಿರುತ್ತದೆ. ಬಸ್ಸು ಚಾಲಕ ಅರುಣ್ ರವರ ದೂರಿನಂತೆ ಸರ್ಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿ ಮತ್ತು ಸಾರ್ವಜನಿಕ ಆಸ್ತಿ ಹಾನಿ ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.ಆರೋಪಿತನ ಬಗ್ಗೆ ಮಾಹಿತಿ ತಿಳಿದು ಬಂದಿದ್ದು ಪತ್ತೆ ಕಾರ್ಯ ನಡೆಸಲಾಗುತ್ತಿದೆ.


Spread the love