ಮಂಗಳೂರು ಹೊಟೇಲ್ ಆಹಾರದಲ್ಲಿ ವಿಷಬಾಧೆ : ಸಮಗ್ರ ತನಿಖೆಯಾಗಲಿ : ಹರ್ಷಾದ್ ವರ್ಕಾಡಿ
ಮಂಗಳೂರು : ಮಂಗಳೂರಿನ ಹೊಟೇಲೊಂದರಲ್ಲಿ ಆಹಾರ ಸೇವಿಸಿದ ಮಂಜೇಶ್ವರ ಮೂಲದ ಆರು ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದ್ದರೂ ದಕ್ಷಿಣ ಕನ್ನಡ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಯಾವುದೇ ಕ್ರಮಗೈಗೊಂಡಿಲ್ಲವೆಂದು ಕಾಸರಗೋಡು ಜಿಲ್ಲಾ ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಆರೋಪಿಸಿದ್ದಾರೆ.
ಜೂ.22ರಂದು ರಾತ್ರಿ ನಗರದ ಬಂಟ್ಸ್ ಹಾಸ್ಟೆಲ್ ಸಮೀಪದ ಖಾಸಗೀ ಹೊಟೇಲೊಂದರಲ್ಲಿ ಆಹಾರ ಸೇವಿಸಿದ ಉಪ್ಪಳ ಸ್ವಿಸ್ ಗೋಲ್ಠ್ ಮಾಲಕ ಅಬ್ದುಲ್ ಖಾದರ್(54), ಪತ್ನಿ ಮೈಮೂನ(47),ಮಕ್ಕಳಾದ ಸಫೀನಾ(27),ಇವರ ಪುತ್ರಿ ಸಾಮಿನ್(2) ಸಂಬಂಧಿಕರಾದ ಹಫ್ನಾ(14), ಮೊಹಮ್ಮದ್ ಅನ್ವರ್(23) ಎಂಬಿವರು ವಿಷಬಾಧೆಗೊಳಗಾಗಿ ದೇರಳಕಟ್ಟೆಯ ಖಾಸಗೀ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಇದೆ ಹೊಟೇಲಿನಲ್ಲಿ ಆಹಾರ ಸೆವಿಸಿದ ಕುಂಬಳೆ ಶಿರಿಯಾ ಸಮೀನದ ಯುವಕರೂ ಆಸ್ಪತ್ರೆಗೆ ದಾಖಲಾದ ಬಗ್ಗೆಯೂ ಮಾಹಿತಿ ದೊರೆತಿದೆ. ದೇರಳಕಟ್ಟೆ ಆಸ್ಪತ್ರೆಗೆ ದಾಖಲಾದವರ ಪೈಕಿ ಹಫ್ನಾ(14)ರವರಿಗೆ ಇಂದು(ಜೂ.27) ಶಸ್ತ್ರಕ್ರಿಯೆ ನಡೆಯುತ್ತಿದೆ.
ಪ್ರಕರಣ ಗಂಭೀರವಾಗಿದ್ಥರೂ, ಘಟನೆ ನಡೆದು 5 ದಿವಸ ಕಳೆದರೂ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಇಲಾಖೆ ಯಾವುದೇ ಕ್ರಮಕೈಗೊಳ್ಳದಿರುವುದು ಖಂಡನೀಯವೆಂದು ಹರ್ಷಾದ್ ವರ್ಕಾಡಿ ತಿಳಿಸಿದ್ದು, ಕೂಡಲೆ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ. ಈ ಬಗ್ಗೆ ಅವರು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರ ಗಮನಕ್ಕೆ ತಂದಿದ್ದಾರೆ