ಮಂಗಳೂರು: ಹೊಸ ವರ್ಷದ ಆಚರಣೆಗೆಂದು ತರಿಸಿದ್ದ ಡ್ರಗ್ಸ್ ಪತ್ತೆ, ಮೂವರ ಬಂಧನ
ಮಂಗಳೂರು: ಹೊಸವರ್ಷದ ಆಚರಣೆಗೆಂದು ತರಿಸಿದ್ದ ಸುಮಾರು ರೂ 9 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ಕಾವೂರು ಪೊಲೀಸರು ವಶಕ್ಕೆ ಪಡೆದು ಮೂವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಉದ್ಯಾವರ ಸಂಪಿಗೆನಗರ ನಿವಾಸಿ ದೇವರಾಜ್ (37), ಉಡುಪಿ ಕಿನ್ನಿಮೂಲ್ಕಿ ನಿವಾಸಿ ಮೊಹಮ್ಮದ್ ಫರ್ವೆಜ್ ಉಮರ್ (25) ಮತ್ತು ಬ್ರಹ್ಮಗಿರಿ ನಿವಾಸಿ ಶೇಖ್ ತಹೀಮ್ (20) ಎಂದು ಗುರುತಿಸಲಾಗಿದೆ.
ಘಟನೆ ವಿವರ: ಡಿಸೆಂಬರ್ 18ರಂದು ಕೂಳೂರು ನದಿ ದಂಡೆಯಲ್ಲಿ ಮಾರಾಟಕ್ಕೆಂದು ತಂದಿದ್ದ ಸುಮಾರು 5 ಕೆ.ಜಿ ಗಾಂಜಾ, 100 ಗ್ರಾಂ ಎಮ್ ಡಿ ಎಮ್ ಎ, 7 ಗ್ರಾಂ ಶೋಕೆನ್, 17 ಗ್ರಾಂ ತೂಕದ 35 ಎಮ್ ಡಿ ಎಮ್ ಎ ಪಿಲ್ಸ್, 100 ಗ್ರಾಂ ಚರಸ್,05 ಗ್ರಾಮ್ ಹೈಡೋವಿಡ್ ಗಾಂಜಾ, 3 ಎಲ್.ಎನ್.ಡಿ ಸ್ಕಿಪ್ ಗಳು ಇವುಗಳ ಒಟ್ಟು ಮೌಲ್ಯ 9 ಲಕ್ಷ ರೂ ಗಳಾಗಿರುತ್ತವೆ. ಒಂದು ಹರಿತವಾದ ಚಾಕು, ತೂಕ ಮಾಪನಗಳು, ಪ್ಲಾಸ್ಟಿಕ್ ಕವರ್ ಗಳನ್ನು ಹಾಗೂ ಇದನ್ನು ಸಾಗಾಟ ಮಾಡಲು ಉಪಯೋಗಿಸಿದ ಹುಂಡೈ ಬಿ 10 ಕಾರ್ ನಂಬ್ರ ಕೆ.ಎ 19 ಎಮ್ ಎಫ್ 8591 ಮತ್ತು ಎಕ್ಸೆಸ್ 125 ನಂಬರ್ ಇಲ್ಲದ ಸ್ಕೂಟರ್ ಇವುಗಳನ್ನು ಡ್ರಗ್ಸ್ ಸ್ಟ್ರಾಡ್ ಹಾಗೂ ಕಾವೂರು ಪೊಲೀಸ್ ನವರು ವಶಪಡಿಸಿಕೊಂಡು ಕಾವೂರು ರಾಣಾ ಮೊ ನಂಬ್ರ 183/2024 ರಂತೆ ಪ್ರಕರಣ ದಾಖಲಾಗಿರುತ್ತದೆ.
ಈ ಆರೋಪಿಗಳಲ್ಲಿ ಪರ್ವೇಜ್ ಎಂಬಾತನು ಮೇಲೆ ಉಡಪಿ ಜಿಲ್ಲೆಯಲ್ಲಿ ಒಟ್ಟು 03 ಗಾಂಜಾ ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ. ಈ ಪ್ರಕರಣದಲ್ಲಿ ಇನ್ನು ಹೆಚ್ಚಿನ ಆರೋಪಿತರುಗಳನ್ನು ಪತ್ತೆ ಹಚ್ಚಲು ಬಾಕಿ ಇರುತ್ತದೆ.
ಈ ಕಾರ್ಯಾಚರಣೆಯನ್ನು ಅನುಪಮ್ ಅಗರವಾಲ್ ಪೊಲೀಸ್ ಆಯುಕ್ತರು, ಮಂಗಳೂರು ನಗರ ರವರ ನಿರ್ದೇಶನದಂತೆ ಪೊಲೀಸ್ ಉಪ-ಆಯುಕ್ತರು (ಕಾಸು) ಸಿದ್ಧಾರ್ಥ ಗೋಯಲ್ ಮತ್ತು ಪೊಲೀಸ್ ಉಪ ಆಯುಕ್ತರು (ಅಪರಾಧ ಮತ್ತು ಸಂಚಾರ) ರವಿಶಂಕರ ರವರ ಮಾರ್ಗದರ್ಶನದಲ್ಲಿ ಮಂಗಳೂರು ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀಕಾಂತ ಕೆ ರವರ ನೇತ್ರತ್ವದ ಡ್ರಗ್ಸ್ ತಂಡ ಮತ್ತು ಕಾವೂರು ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ರಾಘವೇಂದ್ರ ಬೈಂದೂರು ಪೊಲೀಸ್ ಉಪನಿರೀಕ್ಷಕರಾದ ಮಲ್ಲಿಕಾರ್ಜುನ ಬಿರಾದಾರ ರವರ, ಕಾರ್ಯಾಚರಣೆಯಲ್ಲಿ ಡ್ರಗ್ಸ್ ತಂಡದ ಸಿಬ್ಬಂದಿಗಳಾದ ಸುನೀಲ್, ಬಸವಾರಜ, ಅಶೋಕ, ಹಾಲೇಶ್, ಆನಂದ ಹಾಗೂ ಕಾವೂರು ಪೊಲೀಸ್ ಸಿಬ್ಬಂದಿಗಳಾದ ಪ್ರವೀಣ, ನಾಗರತ್ನ, ನಾಗರಾಜ, ಸುನಿಲ್, ಕಲ್ಲಪ್ಪ ಆರೋಪಿಗಳ ಮತ್ತು ಸೊತ್ತು ಪತ್ತೆ ಕಾರ್ಯದಲ್ಲಿ ಸಹಕರಿಸಿರುತ್ತಾರೆ.