Home Mangalorean News Kannada News ಮಂಜುನಾಥ್ ಶೆವಗೂರ್‍ಗೆ ಪಿ.ಎಚ್.ಡಿ. ಪದವಿ ಪ್ರದಾನ

ಮಂಜುನಾಥ್ ಶೆವಗೂರ್‍ಗೆ ಪಿ.ಎಚ್.ಡಿ. ಪದವಿ ಪ್ರದಾನ

Spread the love

ಮಂಜುನಾಥ್ ಶೆವಗೂರ್‍ಗೆ ಪಿ.ಎಚ್.ಡಿ. ಪದವಿ ಪ್ರದಾನ

ಮಂಗಳೂರು : ಮಂಜುನಾಥ್ ಶೆವಗೂರ್‍ರವರಿಗೆ ಸಾಲ್ಟ್ ಲೇಕ್ ಸಿಟಿ, ಅಮೇರಿಕದ ಯುಟ್ಹಾ ವಿಶ್ವವಿದ್ಯಾನಿಲಯವು ‘Enabling Big Memory with Emerging Technologies’ ಎಂಬ ಪ್ರಬಂಧಕ್ಕೆ ಡಾಕ್ಟರ್ ಆಫ್ ಫಿಲೋಸಫಿ ಇನ್ ಕಂಪ್ಯೂಟಿಂಗ್ (Ph.D.) ಪದವಿಯನ್ನು ನೀಡಿ ಗೌರವಿಸಿದೆ. ಈ ಪ್ರಬಂಧವನ್ನುಅವರು ಯುಟ್ಹಾ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಕಂಪ್ಯೂಟಿಂಗ್‍ನ ಪ್ರೊಫೆಸರ್ ಡಾ. ರಾಜೀವ್ ಬಾಲಸುಬ್ರಹ್ಮಣ್ಯಂ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ್ದಾರೆ.

ಈ ಘಟಕೋತ್ಸವ ಸಮಾರಂಭವು 5 ಮೇ, 2016 ರಂದು ಯುಟ್ಹಾದ ರಾಜ್ಯಪಾಲರಾದ ಗೇರಿ ಹೆರ್ಬರ್ಟ್, ವಿಶ್ವವಿದ್ಯಾನಿಲಯದ ವಿಭಾಗದ ಮುಖ್ಯಸ್ಥರು ಮತ್ತು ರೆಜಿಸ್ಟ್ರಾರ್ ಇವರ ಉಪಸ್ಥಿತಿಯಲ್ಲಿ ಜರುಗಿತು.

ಮಂಜುನಾಥ್ ಶೆವಗೂರ್‍ರವರು ಯುಟ್ಹಾ ವಿಶ್ವವಿದ್ಯಾನಿಲಯದಲ್ಲಿ ಎಂಎಸ್ ಇನ್ ಕಂಪ್ಯೂಟಿಂಗ್ (MS in Computing) ಪದವಿಯನ್ನು ಪಡೆದಿದ್ದು, ಚಿನ್ಮಯ ಶೈಕ್ಷಣಿಕ ಸಂಸ್ಥೆ, ಮಂಗಳೂರು, ಕೆನರಾ ಪಿ.ಯು. ಕಾಲೇಜು, ಮಂಗಳೂರು ಮತ್ತು ಆರ್‍ವಿ ಇಂಜಿನಿಯರಿಂಗ್ ಕಾಲೇಜು, ಬೆಂಗಳೂರಿನ ವಿದ್ಯಾರ್ಥಿಯಾಗಿದ್ದರು. ಇವರು ಮಂಗಳೂರಿನ ಪ್ರತಿಷ್ಠಿತ ಕಲಾವಿದ ಮನೆತನದ ಭಾರತಿ ಶೆವಗೂರ್ ಮತ್ತು ವಿಷ್ಣುದಾಸ್ ಕಾಮತ್ ಶೆವಗೂರ್ ಇವರ ಪುತ್ರ.

 


Spread the love

Exit mobile version