Spread the love
ಮಂಜುನಾಥ್ ಸಾಲ್ಯಾನ್ ಮೇಲಿನ ಕೇಸ್ ತಕ್ಷಣ ಹಿಂಪಡೆಯಲಿ : ಸುನೀಲ್ ನೇಜಾರ್ ಆಗ್ರಹ
ಉಡುಪಿ: ಮಲ್ಪೆ ಪ್ರತಿಭಟನಾ ಸಭೆಯಲ್ಲಿ ಭಾಷಣ ಮಾಡಿದ ಮಂಜುನಾಥ ಸಾಲ್ಯಾನ್ ವಿರುದ್ಧ ಪೊಲೀಸ್ ಇಲಾಖೆ ಸ್ವಯಂಪ್ರೇರಿತವಾಗಿ ದಾಖಲಿಸಿರುವ ಪ್ರಕರಣವನ್ನು ತಕ್ಷಣ ಹಿಂಪಡೆಯುವಂತೆ ಹಿಂದೂ ಯುವ ಸೇನೆ ಉಡುಪಿ ನಗರ ಅಧ್ಯಕ್ಷ ಸುನೀಲ್ ನೇಜಾರ್ ಆಗ್ರಹಿಸಿದ್ದಾರೆ.
ಮಲ್ಪೆ ಘಟನೆ ನಡೆದ ಬಳಿಕ ಪೊಲೀಸರು ನಿರಂತರವಾಗಿ ಕೇಸುಗಳನ್ನು ಹಾಕುವ ಮೂಲಕ ಹಿಂದೂ ಕಾರ್ಯಕರ್ತರನ್ನು ಹತ್ತಿಕ್ಕುವ ಪ್ರಯತ್ನವನ್ನು ಮಾಡುತ್ತಿರುವುದು ಖಂಡನೀಯ.
ಕಾಂಗ್ರೆಸ್ ಪಕ್ಷದ ಅಣತಿಯಂತೆ ಹಿಂದೂ ಕಾರ್ಯಕರ್ತರ ಮೇಲೆ ಕೇಸು ಹಾಕಿ ರಾಜ್ಯ ಸರ್ಕಾರವನ್ನು ಮೆಚ್ಚಿಸುವ ಕೆಲಸ ತಕ್ಷಣ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.
Spread the love