Home Mangalorean News Kannada News ಮಕ್ಕಳಲ್ಲಿ ಕೊಂಕಣಿ ಭಾಷೆಯ ಅಭಿಮಾನ ಬೆಳಸುವ ಕೆಲಸ ನಡೆಯಬೇಕು – ವಂ|ಪಾವ್ಲ್ ರೇಗೊ

ಮಕ್ಕಳಲ್ಲಿ ಕೊಂಕಣಿ ಭಾಷೆಯ ಅಭಿಮಾನ ಬೆಳಸುವ ಕೆಲಸ ನಡೆಯಬೇಕು – ವಂ|ಪಾವ್ಲ್ ರೇಗೊ

Spread the love

ಮಕ್ಕಳಲ್ಲಿ ಕೊಂಕಣಿ ಭಾಷೆಯ ಅಭಿಮಾನ ಬೆಳಸುವ ಕೆಲಸ ನಡೆಯಬೇಕು – ವಂ|ಪಾವ್ಲ್ ರೇಗೊ

ಉಡುಪಿ: ಕೊಂಕಣಿ ಭಾಷೆಯನ್ನು ಉಳಿಸಬೇಕಾದರೆ ನಾವು ಮೊದಲು ಕೊಂಕಣಿ ಭಾಷೆಯನ್ನು ಮಾತನಾಡುವವರಾಗಬೇಕು ಎಂದು ಪಾಂಬೂರು ಹೊಲಿಕ್ರೊಸ್ ಚರ್ಚಿನ ಧರ್ಮಗುರು ವಂ| ಪಾವ್ಲ್ ರೇಗೊ ಅಭಿಪ್ರಾಯಪಟ್ಟರು.

ಅವರು ಉದ್ಯಾವರ ಚರ್ಚ್ ಆವರಣದಲ್ಲಿ ನಿರಂತರ್ ಕೊಂಕಣಿ ನಾಟಕೋತ್ಸವದ ಎರಡನೇ ದಿನದ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಕೊಂಕಣಿ ನಾಟಕಗಳು ಇನ್ನಷ್ಟು ಜನಪ್ರೀಯತೆಯನ್ನು ಹೊಂದ ಬೇಕಾದರೆ ನಮ್ಮ ಮಕ್ಕಳಲ್ಲಿ ಕೊಂಕಣಿ ಭಾಷೆಯ ಬಗೆಗಿನ ಅಭಿಮಾನವನ್ನು ಹೆಚ್ಚಿಸಬೇಕಾಗಿದೆ. ಕೊಂಕಣಿ ಭಾಷೆಯ ಉಪಯೋಗ ಪ್ರತಿನಿತ್ಯ ಮಾಡುವುದರ ಮೂಲಕ ಅದನ್ನು ಉಳಿಸಲು ಪ್ರಯತ್ನಿಸಬೇಕು ಎಂದರು.

ಇನ್ನೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ ಉಡುಪಿ ಧರ್ಮಪ್ರಾಂತ್ಯದ ಉಜ್ವಾಡ್ ಪತ್ರಿಕೆಯ ಸಂಪಾದಕರಾದ ವಂ|ಚೇತನ್ ಲೋಬೊ ಮಾತನಾಡಿ ಕೊಂಕಣಿ ಭಾಷೆಯ ಅಭಿವೃದ್ಧಿಗೆ ನಿರಂತರ್ ಉದ್ಯಾವರ್ ಸಂಘಟನೆ ಮಾಡುತ್ತಿರುವ ಶ್ರಮವನ್ನು ಶ್ಲಾಘಿಸಿ ಪ್ರತಿಯೊಬ್ಬರು ಕೊಂಕಣಿ ಭಾಷೆಯ ಬೆಳವಣಿಗೆಯಲ್ಲಿ ಕೈಜೋಡಿಸಲು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಎರಡನೇ ದಿನದ ನಾಟಕ ಪ್ರಾಯೋಜಕರಾದ ಮೂಡುಬೆಳ್ಳೆ ಚಾರಿಟೇಬಲ್ ಟ್ರಸ್ಟ್ ಇದರ ಮುಖ್ಯಸ್ಥರಾದ ವಲೇರಿಯನ್ ಎಂ ಆಳ್ವ, ಸಂತ ಫ್ರಾನ್ಸಿಸ್ ಝೇವಿಯರ್ ಕನ್ನಡ ಮಾಧ್ಯಮ ಹೈಸ್ಕೂಲ್ ಉದ್ಯಾವರ ಇದರ ಮುಖ್ಯೋಪಾಧ್ಯಾಯಿನಿ ಸಿ|ವಿಲ್ಮಾ ಪಿಂಟೊ, ಉದ್ಯಾವರ ಚರ್ಚಿನ ಧರ್ಮಗುರು ವಂ|ಸ್ಟ್ಯಾನಿ ಬಿ ಲೋಬೊ, ನಿರಂತರ್ ಉದ್ಯಾವರ ಸಂಘಟನೆಯ ಕಾರ್ಯದರ್ಶಿ ಮೈಕಲ್ ಡಿಸೋಜಾ, ಸಂಚಾಲಕ ರೊನಾಲ್ಡ್ ಡಿಸೋಜಾ ಉಪಸ್ಥಿತರಿದ್ದರು.

ನಿರಂತರ್ ಉದ್ಯಾವರ ಸಂಘಟನೆಯ ಅಧ್ಯಕ್ಷ ಸ್ಟಿವನ್ ಕುಲಾಸೊ ಸ್ವಾಗತಿಸಿ, ಕೋಶಾಧಿಕಾರಿ ರೋಶನ್ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು, ಸುನೀಲ್ ಡಿಸೋಜಾ ಧನ್ಯವಾದವಿತ್ತರು.

ನಾಟಕದ ಪ್ರಾಯೋಜಕ ವಲೇರಿಯನ್ ಆಳ್ವ, ಅಂಕ್ವಾರ್ ಮೆಸ್ತ್ರಿ ನಾಟಕದ ನಿರ್ದೇಶಕ ಡೆನಿಸ್ ಮೊಂತೆರೊ ರವರಿಗೆ ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಅಂಕ್ವಾರ್ ಮೆಸ್ತ್ರಿ ನಾಟಕ ಪ್ರದರ್ಶನಗೊಂಡಿತು


Spread the love

Exit mobile version