ಮಕ್ಕಳಿಗೆ ಬದುಕಿನ ಶಿಕ್ಷಣ ಕಲಿಸಿ: ಉಮೇಶ್ ನಾಯ್ಕ್
ಉಡುಪಿ: ನಮ್ಮ ಶಿಕ್ಷಣ ಪದ್ಧತಿಯಲ್ಲಿ ಹೊಸತನ ಬೇಕಾಗಿದೆ, ವಿದ್ಯಾರ್ಥಿಗಳನ್ನು ತರಗತಿಯ ನಾಲ್ಕು ಗೋಡೆಗಳಿಂದ ಹೊರಗೆ ಕರೆದುಕೊಂಡು ಹೋಗಿ ಸಮಾಜದಲ್ಲಿ ಅವರಿಗೆ ಬದುಕಿನ ಶಿಕ್ಷಣ ಕೊಡಬೇಕಾಗಿರುಗುವುದು ಇಂದಿನ ಅಗತ್ಯವಾಗಿದೆ ಎಂದು ಬ್ರಹ್ಮಾವರ ರೋಯಲ್ ರೋಟರಿ ಸಂಸ್ಥೆಯ ಅಧ್ಯಕ್ಷ ಉಮೇಶ್ ನಾಯ್ಕ್ ನುಡಿದರು.
ಅವರು ಬ್ರಹ್ಮಾವರದ ನಿರ್ಮಲಾ ಆಂಗ್ಲ ಮಾಧ್ಯಮ ಶಾಲೆಯ ಬೆಳ್ಳಿ ಹಬ್ಬದ ಅಂಗವಾಗಿ ಬ್ರಹ್ಮಾವರ ಸ್ಕೌಟ್ಸ್ಗೈಡ್ಸ್ ಸ್ಥಳೀಯ ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಲಾದ ಉಡುಪಿ ಜಿಲ್ಲಾ ಮಟ್ಟದ ಎರಡು ದಿನಗಳ ಕಬ್, ಬುಲ್ಬುಲ್ ಉತ್ಸವದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಜಸ್ಲಿ ಡಿಸಿಲ್ವ ಮಾತನಾಡಿದರು. ಉಡುಪಿ ಜಿಲ್ಲಾ ಸಂಸ್ಥೆಯ ಮುಖ್ಯ ಆಯುಕ್ತರಾದ ಶಾಂತಾ ವಿ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು, ಕ್ಷೇತ್ರ ಶಿಕ್ಷಣಾಧಿಕಾರಿ ಮಧುಕರ್ ಕಾರ್ಯಕ್ರಮಕ್ಕೆ ಶುಭಕೋರಿದರು. ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಸ್ಕೌಟ್ ಆಯುಕ್ತ ಡಾ. ವಿಜಯೇಂದ್ರ ವಸಂತ್, ಜಿಲ್ಲಾ ಸಂಸ್ಥೆಯ ಪದಾಧಿಕಾರಿಗಳಾದ ಗುಣರತ್ನ, ಜಯಚಂದ್ರ, ಅನಂತ ಅಡಿಗ, ಡಾ. ಜಯರಾಮ್ ಶೆಟ್ಟಿಗಾರ್ ಉಮೇಶ್ ಪೈ, ಪ್ರಭಾಕರ ಆಚಾರ್ಯ, ನಿತಿನ್ ಅಮಿನ್, ಸುಮನ್ ಶೇಖರ್ ಮೊದಲಾದವರು ಉಪಸ್ಥಿತರಿದ್ದರು.
ಶಾರದಾ ಮತ್ತು ರಮಾ ಶೆಟ್ಟಿ ಕಾರ್ಯಕ್ರಮದಲ್ಲಿ ನಿರ್ವಹಿಸಿದರು. ಅನುರಾಧಾ ಸ್ವಾಗತಿಸಿದರು. ಎಲ್.ಟಿ. ಭಟ್ ಧನ್ಯವಾದ ಸಮರ್ಪಿಸಿದರು. ಈ ಸಂದರ್ಭದಲ್ಲಿ ಆಯೋಜಿಸಲಾದ ಜಾಥಾವನ್ನು ಬ್ರಹ್ಮಾವರದ ಸಾಮಾಜಿಕ ಕಾರ್ಯಕರ್ತ ದಯಾನಂದ ವಾರಂಬಳ್ಳಿ ಉದ್ಘಾಟಿಸಿದರು. ಕಬ್ ಬುಲೆ ಬುಲ್ ಉತ್ಸವದಲ್ಲಿ ಉಡುಪಿ ಜಿಲ್ಲೆಯ 38 ಶಾಲೆಗಳಿಂದ 346 ವಿದ್ಯಾರ್ಥಿಗಳು ಹಾಗೂ 48 ಶಿಕ್ಷಕರು ಹಾಗೂ ಜಿಲ್ಲಾ ಸಂಸ್ಥೆ ಹಾಗೂ ಸ್ಥಳೀಯ ಸಂಸ್ಥೆಯ ಪಧಾದಿಕಾರಿಗಳು ಪಾಲ್ಗೊಂಡಿದ್ದರು.