ಮಕ್ಕಳಿಗೆ ವೈಜ್ಙಾನಿಕ ವಿಚಾರಗಳಿಗೆ ವಿರುದ್ಧವಾಗಿ ಕಲಿಸುವುದಕ್ಕೆ ಅವಕಾಶವಿಲ್ಲ; ದಕ ಜಿಲ್ಲಾಧಿಕಾರಿ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರದಲ್ಲಿ “ಎಫಿಶಿಯಂಟ್ ಬ್ರೈನಿ” ಎಂಬ ಸಂಸ್ಥೆಯ ಮಕ್ಕಳಿಗೆ ಬುದ್ದಿ ಶಕ್ತಿಯನ್ನು ಮತ್ತು ಏಕಾಗ್ರತೆಯನ್ನು ಹೆಚ್ಚಿಸುವ ಹಾಗೂ ಇನ್ನಿತರ ಚಟುವಟಿಕೆಗಳ ಜೊತೆಗೆ ಮಕ್ಕಳಿಗೆ ಕಣ್ಣು ಕಟ್ಟಿ ಸ್ಪರ್ಶಿಸಿ, ಮೂಸಿ ಓದುವುದು ಇತ್ಯಾದಿ ಚಟುವಟಿಕೆಗಳನ್ನು ಮಾಡುವುದರ ಮೂಲಕ ವಂಚನೆ ಮಾಡುತ್ತಿರುವುದಾಗಿ ಆರೋಪಿಸಿ ನರೇಂದ್ರ ನಾಯಕ್ ಅಧ್ಯಕ್ಷರು ಎಫ್ ಐ ಆರ್ ಎ ಇವರು ದೂರು ಅರ್ಜಿಯನ್ನು ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಉಪನಿರ್ದೇಶಕರು (ಆಡಳಿತ), ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳೂರು ಇವರ ಮುಕಾಂತರ ಅಧಿಕಾರಿಗಳ ತಂಡದೊಂದಿಗೆ ಸ್ಥಳ ಪರಿಶೀಲನೆ ಮಾಡಿ ವರದಿ ಪಡೆದಿದ್ದಾರೆ.
ವರದಿಯನ್ನು ಪರಿಶೀಲಿಸಿದಾಗ, ಪೋಷಕರು ತಮ್ಮ ಮಕ್ಕಳನ್ನು ಸ್ವ-ಇಚ್ಚೆಯಿಂದ ಈ ಸಂಸ್ಥೆಗೆ ಸೇರಿಸಿರುವುದಾಗಿಯೂ ಇಲ್ಲಿ ಸಹ ಪಠ್ಯ ಚಟುವಟಿಕೆಗಳ ಜೊತೆಗೆ ಧ್ಯಾನ ಏಕಾಗ್ರತೆಯನ್ನು ಹೆಚ್ಚಿಸುವ ಚಟುವಟಿಕೆಗಳು, ಗುರುಹಿರಿಯರ ಬಗ್ಗೆ ಗೌರ ಮೂಡಿಸುವ, ಓದಿನಲ್ಲಿ ಆಸಕ್ತಿ ಮೂಡಿಸುವ ಇತ್ಯಾದಿ ಸಕಾರಾತ್ಮಕ ಚಟುವಟಿಕೆಗಳನ್ನು ನಡೆಸುತ್ತಿದ್ದು, ಈ ಕುರಿತು ಪೋಷಕರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸುವುದಾಗಿ ವರದಿಯಲ್ಲಿ ವ್ಯಕ್ತಪಡಿಸಿದ್ದಾರೆ.
ಆದರೆ ಮಕ್ಕಳಿಗೆ ಕಣ್ಣುಕಟ್ಟಿ, ಓದಿಸುವ, ಸ್ಪರ್ಶಿಸಿ ಮೂಸಿನೋಡಿ ಗುರ್ತಿಸುವುದು ಇದು ವೈಜ್ಙಾನಿಕ ವಿಚಾರಗಳಿಗೆ ವಿರುದ್ಧವಾಗಿರುವ ಅಂಶವಾಗಿರುತ್ತದೆ. ಆದ್ದರಿಂದ ವೈಜ್ಙಾನಿಕ ವಿಚಾರಗಳಿಗೆ ವಿರುದ್ದವಾಗಿರುವ ಕಣ್ಣುಕಟ್ಠಿ ಓದಿಸುವ, ಸ್ಪರ್ಶಿಸುವ ಇತ್ಯಾದಿ ಚಟುವಟಿಕೆಗಳನ್ನು ಒಪ್ಪಲು ಸಾಧ್ಯವಾಗದೇ ಇರುವುದರಿಂದ ಸದರಿ ತರಬೇತಿಯಲ್ಲಿನ ಈ ಚಟುವಟಿಕೆಗಳನ್ನು ಸ್ಥಗಿತಗೊಳಿಸುವಂತೆ ಆದೇಶದಲ್ಲಿ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.