Home Mangalorean News Kannada News ಮಕ್ಕಳ ಹಕ್ಕುಗಳ ಕುರಿತಾಗಿ ಮಾಹಿತಿ ಕಾರ್ಯಗಾರ

ಮಕ್ಕಳ ಹಕ್ಕುಗಳ ಕುರಿತಾಗಿ ಮಾಹಿತಿ ಕಾರ್ಯಗಾರ

Spread the love

ಮಕ್ಕಳ ಹಕ್ಕುಗಳ ಕುರಿತಾಗಿ ಮಾಹಿತಿ ಕಾರ್ಯಗಾರ

ಮ0ಗಳೂರು:- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಚೈಲ್ಡ್‍ಲೈನ್ 1098 ಇವರ ಸಹಯೋಗದಲ್ಲಿ ನವೆಂಬರ್ 14 ರಂದು ಮಕ್ಕಳ ಪಾಲನೆ ಮತ್ತು ಪೋಷಣೆ ಮಾಡುತ್ತಿರುವ ಸ್ವಯಂಸೇವಾ ಸಂಸ್ಥೆಗಳ ಮುಖ್ಯಸ್ಥರುಗಳಿಗೆ ಮಕ್ಕಳ ದಿನಾಚರಣೆಯ ಪ್ರಯುಕ್ತ ಮಕ್ಕಳ ಹಕ್ಕುಗಳ ಕುರಿತಾಗಿ ಮಾಹಿತಿ ಕಾರ್ಯಗಾರವನ್ನು “ಜಿಲ್ಲಾ ಬಾಲಭವನ ಕದ್ರಿ” ಮಂಗಳೂರು ಇಲ್ಲಿ ಹಮ್ಮಿಕೊಳ್ಳಲಾಯಿತು.

ತರಬೇತಿ ಕಾರ್ಯಗಾರವನ್ನು  ಸರ್ಕಾರಿ ಬಾಲಕರ ಬಾಲಮಂದಿರ ಬೋಂದೆಲ್ ಕುಮಾರ್ ದೀಕ್ಷಿತ್,  ಇವರು ಉದ್ಘಾಟಿಸಿದರು. ಅದ್ಯಕ್ಷೀಯ ಭಾಷಣವನ್ನು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಂಗಳೂರು ಸುಂದರ ಪೂಜಾರಿ ಇವರು ನೀಡಿದರು. ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕ ನುಡಿ ಹಾಗೂ ಸ್ವಾಗತವನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ  ಉಸ್ಮಾನ್ .ಎ, ನೀಡಿದರು. ರಕ್ಷಣಾಧಿಕಾರಿ (ಸಾಂಸ್ಥಿಕ) ಕುಮಾರ್ ಶೆಟ್ಟಿಗಾರ್,  ಇವರು ಕಾರ್ಯಕ್ರಮವನ್ನು ನಿರೂಪಿಸಿದರು.

 ತರಬೇತಿ ಕಾರ್ಯಗಾರದಲ್ಲಿ ‘ಚೈಲ್ಡ್‍ಲೈನ್ ಸೆ ದೋಸ್ತಿ ಸಪ್ತಾಹ’ ಗೆ ಚಾಲನೆ ನೀಡಲಾಯಿತು. ಮಕ್ಕಳ ಗ್ರಾಮಸಭೆ ಕುರಿತು ಬಿತ್ತಿಪತ್ರವನ್ನು ಬಿಡುಗಡೆ ಮಾಡಲಾಯಿತು. ಹಾಗೂ “ತಂಬಾಕು ಮುಕ್ತ ರಾಜ್ಯ” ಲೋಗೋ ವಿನ್ಯಾಸ ಸ್ಪರ್ದೆಯಲ್ಲಿ ಜಿಲ್ಲಾ ಮಟ್ಟದಲ್ಲಿ ವಿಜೇತರಾದ 5 ಮಕ್ಕಳನ್ನು ಸನ್ಮಾನಿಸಲಾಯಿತು.

ಈ ತರಬೇತಿ ಕಾರ್ಯಗಾರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಕೆ.ನಿಖೇಶ್ ಶೆಟ್ಟಿ, ನ್ಯಾಯಾವಾದಿ, ಇವರು ಆಗಮಿಸಿ ಮಕ್ಕಳ ಹಕ್ಕುಗಳ ಬಗ್ಗೆ, ರೆನ್ನಿ ಡಿಸೋಜ, ಅಧ್ಯಕ್ಷರು, ಮಕ್ಕಳ ಕಲ್ಯಾಣ ಸಮಿತಿ ಇವರು  ಮಕ್ಕಳ ಪಾಲನಾ ಪೋಷಣಾ ಸಂಸ್ಥೆಗಳ ಬಗ್ಗೆ, ಪ್ರೀತಮ್ ರೊಡಿಗ್ರಸ್, ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು, ಇವರು ಪೋಕ್ಸೋ ಕಾಯಿದೆ 2012 ರ ಬಗ್ಗೆ ಹಾಗೂ ಸಿಸ್ಟರ್ ಸೆಲಿನ್, ಶಾಂತಿ ಸಂದೇಶ ಟ್ರಸ್ಟ್, ಇವರು ಸಮಾಲೋಚನೆಯ ಕುರಿತಾಗಿ ಶಿಬಿರಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು.


Spread the love

Exit mobile version