ಮಕ್ಕಳ ಹೃದ್ರೋಗತಜ್ಞ ನಡೆಸಿದ ಅಪರೂಪದ ಸಾಧನೆ

Spread the love

ಪತ್ರಿಕಾ ಪ್ರಕಟಣೆ

ಮಂಗಳೂರು: ಏಳು ಜನ ಮಕ್ಕಳ ಹೃದಯದಲ್ಲಿ ಜನ್ಮತಃ ರಂದ್ರವಿರುವ ಅಂದರೆ ‘ವೆಂಟ್ರಿಕ್ಯುಲರ್ ಸೆಪ್ಟಲ್‍ದೋಷ’ ವಿದೆಯೆಂಬುದನ್ನು ಡಾ. ಪ್ರೇಮ್ ಆಳ್ವ, ಮಕ್ಕಳ ಹೃದ್ರೋಗ ತಜ್ಞರು ಪತ್ತೆಹಚ್ಚಿದರು. ಇದು ಹೃದಯದಲ್ಲಿ ಶುದ್ದ ಮತ್ತು ಅಶುದ್ದ ರಕ್ತವು ಮಿಶ್ರಣಗೊಳ್ಳುವ ಒಂದು ಸ್ಥಿತಿ. ಈ ಏಳು ಮಕ್ಕಳಿಗೆ ಪದೇ ಪದೇ ಶ್ವಾಸಕೋಶದ ಸೋಂಕು, ಆಟ ಆಡುವಾಗ ಉಸಿರಾಟದ ತೊಂದರೆ ಮತ್ತು ಇತರ ಮಕ್ಕಳಂತೆ ತಮ್ಮ ದಿನನಿತ್ಯದ ಕೆಲಸಗಳನ್ನು ಮಾಡಲು ಸಾದ್ಯವಾಗುತ್ತಿರಲಿಲ್ಲ.

image002aj-children-heart-patient-20160321-002 image003aj-children-heart-patient-20160321-003 image001aj-children-heart-patient-20160321-001

ಎ. ಜೆ. ಆಸ್ಪತ್ರೆಯಲ್ಲಿ ಎಕೋಕಾರ್ಡಿಯೋಗ್ರಾಮ್ ಮಾಡುವ ಮೂಲಕ ಈ ದೋಷಗಳನ್ನು ಪತ್ತೆಹಚ್ಚಲಾಯಿತು ಮತ್ತು ಕೆಲವು ಮಕ್ಕಳ ಹೃದಯದ ಎಡ ಭಾಗವು ಅಸಹಜವಾಗಿ ದೊಡ್ಡದಾಗಿದ್ದು ಹೃದಯದ ಒತ್ತಡವು ಹೆಚ್ಚಾಗಿತ್ತು. ಆದ್ದರಿಂದ ಈ ರಂದ್ರಗಳನ್ನು ತೆರೆದ ಹೃದಯ ಶಸ್ತ್ರಚಿಕಿತ್ಸೆಯಿಲ್ಲದೆ ಶುದ್ದರಕ್ತವನ್ನುಕೊಂಡು ಹೋಗುವ ಅಪಧಮನಿಯ ಮೂಲಕ ‘ಡಿವೈಸ್‍ಕ್ಲೋಷರ್‍ಆಫ್ ವಿಎಸ್‍ಡಿ’ತಂತ್ರಜ್ಞಾನವನ್ನು ಬಳಸಿ ಮುಚ್ಚಲು ನಿರ್ಧರಿಸಲಾಯಿತು. ಹೃದಯದ ರಂದ್ರದ ಗಾತ್ರ ಮತ್ತು ರಂದ್ರವನ್ನು ಮುಚ್ಚಲು ಬೇಕಾಗುವ ಸಾಧನದ ನಿಖರವಾದ ಗಾತ್ರವನ್ನು ಪತ್ತೆಹಚ್ಚುವುದು ಅತ್ಯಂತ ಕ್ಲಿಷ್ಟಕರವಾಗಿತ್ತು. ಡಾ. ಪ್ರೇಮ್ ಆಳ್ವರವರ ನಾಯಕತ್ವದಲ್ಲಿ ಅರಿವಳಿಕೆ ತಜ್ಞರಾದಡಾ. ಬಿ.ವಿ. ತಂತ್ರಿ ಮತ್ತುಡಾ. ಟ್ರೆವರ್ ಸಿಕ್ವೇರಾ ಇವರುಗಳ ಸಹಯೋಗದೊಂದಿಗೆ ಚಿಕಿತ್ಸೆಯನ್ನು ನೀಡಲಾಯಿತು.

ಈ ಚಿಕಿತ್ಸೆಗೆ ಒಳಗಾಗಿದ್ದ ಎಲ್ಲಾ 7 ಮಕ್ಕಳು ಆರೋಗ್ಯವಂತರಾಗಿದ್ದು ಮೂರು ದಿನಗಳ ಅವಧಿಯಲ್ಲೇ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಮೊತ್ತಮೊದಲ ಭಾರಿಗೆ ಮಂಗಳೂರಿನಲ್ಲಿ ಅಪಧಮನಿಯ ಮೂಲಕ ವಿ.ಎಸ್.ಡಿ.ಗಳನ್ನು ಎ.ಡಿ.ಒ. 1 ಸಾಧನಗಳನ್ನು ಉಪಯೋಗಿಸಿ ಮಾಡಲಾಯಿತು. ಮಂಗಳೂರಿನಲ್ಲಿಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾಕೇಂದ್ರವು ವಿಶೇಷವಾಗಿ ಮಕ್ಕಳ ಹೃದ್ರೋಗ ವಿಭಾಗವನ್ನು ಹೊಂದಿರುವ ಏಕೈಕ ಕೇಂದ್ರವಾಗಿದ್ದು ಇದೇರೀತಿಯ ಹೆಚ್ಚಿನಗುಣಮಟ್ಟದ ಸೇವೆಯನ್ನು ನೀಡಲುಆಶಿಸುತ್ತೇವೆಂದು ಡಾ. ಪ್ರೇಮ್ ಆಳ್ವರವರು ತಿಳಿಸಿದರು. ಈ ಎಲ್ಲಾ ಮಕ್ಕಳಿಗೆ ಅನೇಕ ಸರಕಾರಿಯೋಜನೆಗಳ ಮೂಲಕ ಉಚಿತವಾಗಿ ಚಿಕಿತ್ಸೆಯನ್ನು ನೀಡಲಾಗಿದೆ.


Spread the love