Home Mangalorean News Kannada News ಮಗನೊಂದಿಗೆ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ : ಪತಿ ವಿರುದ್ಧ ಪತ್ನಿ ದೂರು

ಮಗನೊಂದಿಗೆ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ : ಪತಿ ವಿರುದ್ಧ ಪತ್ನಿ ದೂರು

Spread the love

ಮಗನೊಂದಿಗೆ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ : ಪತಿ ವಿರುದ್ಧ ಪತ್ನಿ ದೂರು

ಉಡುಪಿ: ತನ್ನ ಮಗನೊಂದಿಗೆ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಗೋಪಾಲಕೃಷ್ಣ ರೈ ವಿರುದ್ಧ ಅವರ ಪತ್ನಿ, ಮಂಗಳೂರು ಪಾವೂರಿನ ಅಶ್ವಿನಿ ಜಿ.ರೈ(38) ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಶ್ವಿನಿ ಜಿ ರೈ ಅವರು ಸುಮಾರು 12 ವರ್ಷದ ಹಿಂದೆ ಗೋಪಾಲಕೃಷ್ಣ ರೈ ಇವರೊಂದಿಗೆ ಮದುವೆಯಾಗಿದ್ದು ಅವರಿಗೆ 5 ವರ್ಷ ಪ್ರಾಯದ ಮನೀಷ್ ರೈ ಎಂಬ ಮಗನಿದ್ದು ಅವರೊಂದಿಗೆ ಮುಂಬಯಿಯ Shree shaswath complex Pleasant park Miraroad (E) Thane ಇಲ್ಲಿ ವಾಸವಾಗಿದ್ದು ಮುಂಬೈಯ ಫೈನಾನ್ಸ್ ನಲ್ಲಿ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು ಮುಂಬೈಯಲ್ಲಿ ಹೋಟೆಲ್ ವ್ಯವಹಾರ ಮಾಡಿಕೊಂಡಿದ್ದು ಆಗಾಗ ಊರಿಗೆ ಬಂದು ಹೋಗುತ್ತಿದ್ದರು.

ಫೆಬ್ರವರಿ 13ರಂದು ಕಟುಂಬದ ನೇಮೊತ್ಸವದ ಬಗ್ಗೆ ಅಶ್ವಿನಿ ಜಿ ರೈ ರವರು ಮಗ ಹಾಗೂ ಗೋಪಾಲ ಕೃಷ್ಣ ರೈ ಅವರೊಂದಿಗೆ ಹೊರಟು ಫೆಬ್ರವರಿ 14ರಂದು ತಲುಪಿದ್ದು, ಫೆಬ್ರವರಿ 15ರಂದು ಅಶ್ವಿನಿ ಜಿ ರೈ ಅವರು ತನ್ನ ಮನೆಗೆ ಗೋಪಾಲಕೃಷ್ಣ ರೈ ಹಾಗೂ ಮಗನೊಂದಿಗೆ ಬಂದು ರಾತ್ರಿ ಊಟ ಮಾಡಿ ಪಾವೂರು ಗ್ರಾಮದ ಪಾವೂರು ಗುತ್ತು ಮನೆಯ ಗದ್ದೆಯಲ್ಲಿ ನಡೆಯುವ ನೇಮೊತ್ಸವಕ್ಕೆ ಆರೋಪಿ ಹಾಗು ಮಗನೊಂದಿಗೆ ಹೋಗಿ ನೇಮೊತ್ಸವ ನೋಡುತ್ತಿರುವಾಗ ಫೆಬ್ರವರಿ 16ರಂದು ಬೆಳಗಿನ ಜಾವ 00:20 ಗಂಟೆ ಸುಮಾರಿಗೆ ತನ್ನ ಕಾರು ನಂಬ್ರ MH-04-DR-6026 ನೇದರಲ್ಲಿ ಅಶ್ವಿನಿ ಜಿ ರೈ ರವರ ಮಗನನ್ನು ಕರೆದುಕೊಂಡು ಹೋಗಿದ್ದು ಅಶ್ವಿನಿ ಜಿ ರೈ ರವರ ಮಗ ಮತ್ತು ಗೋಪಾಲಕೃಷ್ಣ ವಾಪಾಸ್ ಬಾರದೇ ಇರುವುದರಿಂದ ಅಶ್ವಿನಿ ಜಿ ರೈ ರವರು ಗಾಬರಿಗೊಂಡು 04:00 ಗಂಟೆಗೆ ಆರೋಪಿಗೆ ಫೋನ್ ಕರೆ ಮಾಡಿದಾಗ ಎತ್ತದೆ ಇದ್ದು ಮನೆಯವರೊಂದಿಗೆ ವಿಚಾರಿಸಿ ನಂತರ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಆರೋಪಿ ಮತ್ತು ಮಗ ಕಾಣೆಯಾದ ಬಗ್ಗೆ ದೂರು ನೀಡಿದ್ದು ಅದರಂತೆ ಪ್ರಕರಣ ದಾಖಲಾಗಿತ್ತು.

ಬಳಿಕ ಇವರ ಕಾರು ನೇತ್ರಾವತಿ ಹೊಳೆಯ ಸೇತುವೆಯ ಮಧ್ಯದಲ್ಲಿ ಪತ್ತೆಯಾಗಿದ್ದು, ಇವರಿಬ್ಬರು ಈ ಸೇತುವೆಯಿಂದ ನದಿಗೆ ಹಾರಿದ್ದರೆನ್ನಲಾಗಿದೆ. ಫೆ. 28ರಂದು ಇವರಿಬ್ಬರ ಮೃತದೇಹ ಕಾಪು ಪೋಲೀಸ್ ಠಾಣೆ ವ್ಯಾಪ್ತಿಯ ಉದ್ಯಾವರ ಪಡುಕೆರೆ ಎಂಬಲ್ಲಿ ಸಮುದ್ರದಲ್ಲಿ ಪತ್ತೆಯಾಗಿತ್ತು.

ಗೋಪಾಲಕೃಷ್ಣ ರೈ ತನ್ನ ಮಗನನ್ನು ಅಪಹರಿಸಿ ತನ್ನ ಕಾರಿನಲ್ಲಿ ಕರೆದು ಕೊಂಡು ಹೋಗಿ, ನೇತ್ರಾವತಿ ಸೇತುವೆ ಮಧ್ಯದಲ್ಲಿ ಕಾರನ್ನು ನಿಲ್ಲಿಸಿ, ಮಗನನ್ನು ಹಿಡಿದುಕೊಂಡು ಹೊಳೆಗೆ ಹಾರಿ ಮಗನನ್ನು ಸಾಯಿಸಿ, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಶ್ವಿನಿ ಜಿ. ರೈ ಅವರು ಕಾಪು ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.


Spread the love

Exit mobile version