ಮಟಪಾಡಿ: ಉಚಿತ ಕಣ್ಣಿನ ಪೊರೆ ತಪಾಸಣೆ ಹಾಗೂ ದಂತ ಚಿಕಿತ್ಸಾ ಶಿಬಿರ

Spread the love

ಮಟಪಾಡಿ: ಉಚಿತ ಕಣ್ಣಿನ ಪೊರೆ ತಪಾಸಣೆ ಹಾಗೂ ದಂತ ಚಿಕಿತ್ಸಾ ಶಿಬಿರ

ಬ್ರಹ್ಮಾವರ: ರೋಟರಿ ರೋಯಲ್ ಬ್ರಹ್ಮಾವರ, ಫ್ರೆಂಡ್ಸ್ ಮಟಪಾಡಿ ಯೂತ್ ಕ್ಲಬ್, ಜಂಟಿ ಆಶ್ರಯದಲ್ಲಿ ನೇತ್ರ ಜ್ಯೋತಿ ಚ್ಯಾರಿಟೇಬಲ್ ಟ್ರಸ್ಟ್ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಟಿ ಕಣ್ಣಿನ ಆಸ್ಪತ್ರೆ ಉಡುಪಿ, ಮಣಿಪಾಲ ದಂತ ವೈದ್ಯಕೀಯ ಕಾಲೇಜು ಇವರ ಸಹಯೋಗದೊಂದಿಗೆ ಸಮಗ್ರ ಉಚಿತ ಕಣ್ಣಿನ ಪೊರೆ ತಪಾಸಣೆ ಹಾಗೂ ದಂತ ಚಿಕಿತ್ಸಾ ಶಿಬಿರವು ಮಟಪಾಡಿ ಚಪ್ಟೇಗಾರ್ ಸಮುದಾಯ ಭವನದಲ್ಲಿ ಜರುಗಿತು.

ಕಾರ್ಯಕ್ರಮವನ್ನು ನೇತ್ರ ಜ್ಯೋತಿ ಚ್ಯಾರಿಟೇಬಲ್ ಟ್ರಸ್ಟ್ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಟಿ ಕಣ್ಣಿನ ಆಸ್ಪತ್ರೆ ಉಡುಪಿ ಇದರ ಮ್ಯಾನೇಜಿಂಗ್ ಡೈರಕ್ಟರ್ ನಾಡೋಜ ಡಾ|ಕೃಷ್ಣ ಪ್ರಸಾದ್ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ನೀಲಾವರ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಮಟಪಾಡಿ ವಿಶ್ವನಾಥ ಶೆಟ್ಟಿ ಶುಭ ಹಾರೈಸಿದರು.

ಸಭೆಯಲ್ಲಿ ಮಣಿಪಾಲ ದಂತ ಚಿಕಿತ್ಸಾಲಯದ ಡಾ|ನಿಶು, ಪ್ರಸಾದ್ ನೇತ್ರಾಲಯದ ಡಾ|ವಿಷ್ಣು, ರೋಟರಿ ರೋಯಲ್ಸ್ ಬ್ರಹ್ಮಾವರ ಅಧ್ಯಕ್ಷರಾದ ಅಭಿರಾಮ್ ನಾಯಕ್ ಹಾಗೂ ಫ್ರೆಂಡ್ಸ್ ಮಟಪಾಡಿ ಯೂತ್ ಕ್ಲಬ್ ಅಧ್ಯಕ್ಷರಾದ ಶರತ್ ನಾಯಕ್ ಉಪಸ್ಥೀತರಿದ್ದರು.

ಕಾರ್ಯಕ್ರಮದಲ್ಲಿ ನಾಡೋಜ ಡಾ|ಕೃಷ್ಣಪ್ರಸಾದ್ ಇವರಿಗೆ ಸನ್ಮಾನಿಸಲಾಯಿತು ಮತ್ತು ಮಣಿಪಾಲ ದಂತ ಚಿಕಿತ್ಸಾಲಯದ ಡಾ ಪೂಜಾ ದಂತ ಚಿಕಿತ್ಸೆಯ ಕುರಿತು ಮಾಹಿತಿ ನೀಡಿದರು.

ಉಚಿತ ಕಣ್ಣಿ್ನ ಪೊರೆ ತಪಾಸಣೆ ಹಾಗೂ ದಂತ ಚಿಕಿತ್ಸಾ ಶಿಬಿರದಲ್ಲಿ ನೂರಾರು ಮಂದಿ ಸದುಪಯೋಗ ಪಡೆದುಕೊಂಡರು.

ಯೂತ್ ಕ್ಲಬ್ ಸದಸ್ಯ ಪತ್ರಕರ್ತ ಚೇತನ್ ಪೂಜಾರಿ ಮಟಪಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶರೋನ್ ಸಿಕ್ವೇರಾ ಸನ್ಮಾನ ಪತ್ರ ವಾಚಿಸಿ, ಯೂತ್ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಸುಬ್ರಹ್ಮಣ್ಯ ಆಚಾರ್ಯ ವಂದಿಸಿದರು.


Spread the love