ಮಠದಲ್ಲಿ ಇಫ್ತಾರ್ ಆಚರಣೆಗೆ ವಿರೋಧ; ಪೇಜಾವರ ಸ್ವಾಮೀಯಿಂದ ಹಿಂದೂ ಧರ್ಮಕ್ಕೆ ಅವಮಾನ :ಪ್ರಮೋದ್ ಮುತಾಲಿಕ್
ಉಡುಪಿ: ಹಿಂದೂ ಸಂಘಟನೆಗಳು ರಸ್ತೆಗಳಲ್ಲಿ ಜೀವದ ಹಂಗು ತೊರೆದು ಗೋಕಳ್ಳರಿಂದ ಗೋವುಗಳ ರಕ್ಷಣೆ ಮಾಡುತ್ತಿದ್ದರೆ ಅದೇ ಗೋಭಕ್ಷರನ್ನು ದೇವಸ್ಥಾನದ ಒಳಗಡೆ ಕರೆದು ರಂಜಾನ್ ಉಪವಾಸ ಬಿಡಲು ಹಾಗೂ ಇಫ್ತಾರ್ ಆಚರಣೆ ನಡೆಸಲು ಅವಕಾಶ ನೀಡಿದ ಪೇಜಾವರ ಸ್ವಾಮೀಜಿಗಳ ನಡೆ ಖಂಡನೀಯ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಅವರು ಸೋಮವಾರ ಉಡುಪಿ ಶ್ರೀಕೃಷ್ಣ ಮಠಕ್ಕೆ ಆಗಮಿಸಿ ಪೇಜಾವರ ಶ್ರೀಗಳ ನಡುವೆ ಮಾತನಾಡಿದ ಬಳಿಕ ಮಾಧ್ಯಮಗಳ ಜೊತೆ ಮಾತಾಡಿದ ಅವರು ಎರಡು ದಿನದ ಹಿಂದೆ ಉಡುಪಿ ಜಗತ್ ಪ್ರಸಿದ್ದವಾದ ಶ್ರೀ ಕೃಷ್ಣನ ದೇವಸ್ಥಾನದಲ್ಲಿ ಮುಸ್ಲಿಂರ ಕೊನೆಯ ದಿನವಾದ ರಂಜಾನ್ ಉಪವಾಸದ ಇಫ್ತಾರ್ ಕೂಟವನ್ನು ಮಠದ ಆವರಣದಲ್ಲಿ ಪೇಜಾವರ ಶ್ರೀಗಳು ಮುಸ್ಲಿಂರನ್ನು ಆಹ್ವಾನಿಸಿ ಅವರಿಗೆ ಫಲ ನೀಡಿದ್ದು, ನಮ್ಮ ಹಿಂದು ಸಮಾಜಕ್ಕೆ ಅವಮಾನವಾಗಿದೆ. ಶ್ರೀಕೃಷ್ಣ ಗೋಪಾಲಕರಾಗಿದ್ದು ಗೋಭಕ್ಷರನ್ನು ಗೋಹಂತಕರನ್ನು ಮಠದ ಆವರಣದ ಒಳಗೆ ಕರೆದು ಅವರೊಂದಿಗೆ ಸೌಹಾರ್ದತೆಯ ಮಾತನಾಡುವುದು ಶೋಭೆತರುವಂತದಲ್ಲಿ. ಇಡೀ ಸಮಾಜಕ್ಕೆ ಇದು ಅವಮಾನದ ವಿಷಯವಾಗಿದೆ. ಈ ಕುರಿತು ಅವರೊಂದಿಗೆ ಚರ್ಚೆ ನಡೆಸುವ ಉದ್ದೇಶದಿಂದ ಇಲ್ಲಿಗೆ ನಾನು ಆಗಮಿಸಿದ್ದೇನೆ. ಪೇಜಾವರ ಸ್ವಾಮೀಜಿಗಳು ಕೇವಲ ಉಡುಪಿಗೆ ಮಾತ್ರ ಸೀಮಿತರಲ್ಲ ಬದಲಾಗಿ ಇಡೀ ದೇಶಕ್ಕೆ ಮಾರ್ಗದರ್ಶಕರಾಗಿದ್ದಾರೆ. ವಿಶ್ವ ಹಿಂದೂ ಪರಿಷತ್ ಇದರ ಮಾರ್ಗದರ್ಶಕರು ಕೂಡ ಹೌದು.
ನಾವು ಬೀದಿಯಲ್ಲಿ ನಿಂತು ರಸ್ತೆಗಳಲ್ಲಿ ಜೀವದ ಹಂಗು ತೊರೆದು ಗೋಕಳ್ಳರಿಂದ ಗೋವುಗಳ ರಕ್ಷಣೆ ಮಾಡುತ್ತಿದ್ದರೆ ಅದೇ ಗೋಭಕ್ಷರನ್ನು ದೇವಸ್ಥಾನದ ಒಳಗಡೆ ಕರೆದು ರಂಜಾನ್ ಉಪವಾಸ ಬಿಡಲು ಹಾಗೂ ಇಫ್ತಾರ್ ಆಚರಣೆ ನಡೆಸಲು ಅವಕಾಶ ನೀಡಿರುವುದು ಒಪ್ಪುವ ವಿಷಯವಲ್ಲ. ಈ ಬಗ್ಗೆ ಇಡೀ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಪ್ರತಿಭಟನೆಗಳು ನಡೆಯಬಾರದು ಎನ್ನುವ ಉದ್ದೇಶದಿಂದ ನನ್ನ ಎಲ್ಲಾ ಪ್ರವಾಸಗಳನ್ನು ರದ್ದುಪಡಿಸಿಕೊಂಡು ಇಲ್ಲಿಗೆ ಬಂದು ಪೇಜಾವರ ಸ್ವಾಮೀಜಿಗಳೊಂದಿಗೆ ಚರ್ಚೆ ನಡೆಸಿದ್ದೇನೆ. ಆದರೆ ಅವರು ಸಮರ್ಥನೆಯನ್ನು ಮಾಡಿಕೊಳ್ಳುತ್ತಿದ್ದಾರೆ ಇದಕ್ಕೆ ನಮ್ಮ ಒಪ್ಪಿಗೆಯಿಲ್ಲ. ಇನ್ನು ಮುಂದೆ ಏನು ಮಾಡಬೇಕು ಎನ್ನುವುದರ ಕುರಿತು ರಾಜ್ಯದ ಎಲ್ಲಾ ಪ್ರಮುಖರು ಬಂದಿದ್ದು ಒಟ್ಟಿಗೆ ಕೂತು ಚರ್ಚೆ ಮಾಡಿ ನಿರ್ಣಯ ಕೈಗೊಳ್ಳಲಿದ್ದೇವೆ ಎಂದರು.
ಸೌಹಾರ್ದ, ಸಹಿಷ್ಟುಣುತೆ ಎನ್ನುವುದು ಹಿಂದೂ ಧರ್ಮದ ಧ್ಯೇಯ ಇದನ್ನು ನಾವು ಮಾಡಬೇಕಾಗುತ್ತದೆ ಎಂದು ಸ್ವಾಮೀಜಿಯವರು ಹೇಳುತ್ತಾರೆ. ಅದನ್ನು ಅವರು ಇಲ್ಲಿಯವರೆಗೆ ಮಾಡಿಕೊಂಡು ಬಂದಿದ್ದಾರೆ ಅದಕ್ಕೆ ನಮ್ಮ ವಿರೋಧವಿಲ್ಲ ಆದರೆ ಮಠದ ಆವರಣದೊಳಗೆ ಬೇಡ. ಎಂದಾದರೂ ಮುಸ್ಲಿಂರ ಮಸೀದಿಯ ಆವರಣದಲ್ಲಿ ಗಣೇಶೋತ್ಸವ, ಯುಗಾದಿ ಸಂಕ್ರಮಣದ ಆಚರಣೆ ಮಾಡಿದ ಉದಾಹರಣೆಗಳಿಲ್ಲ. ಭಾರತ ಕ್ರಿಕೆಟ್ ಪಂದ್ಯದಲ್ಲಿ ಸೋತಾಗ ಕರ್ನಾಟಕ 32 ಕಡೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಘಟನೆಗಳು ನಡೆದಿವೆ. ಒಂದೊಂದು ಹಸುವನ್ನು ಉಳಿಸುವ ನಿಟ್ಟಿನಲ್ಲಿ ತಮ್ಮ ಮೇಲೆ ಕೇಸುಗಳನ್ನು ಹಾಕಿಕೊಂಡು ಜೀವದ ಹಂಗನ್ನು ತೊರೆದು ಕೆಲಸ ಮಾಡುವ ಕಾರ್ಯಕರ್ತರಿಗೆ ಇದರಿಂದ ನಿಜಕ್ಕೂ ನೋವಾಗಿದೆ. ಮಠದ ಆವರಣದ ಹೊರಗಡೆ ಮಾಡಿದರೆ ನಮ್ಮ ಅಭ್ಯಂತರವಿರಲಿಲ್ಲ ಆದರೆ ಅವರು ನಮ್ಮ ಮಾತಿಗೆ ಒಪ್ಪಿಲ್ಲ. ಇದು ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ ಮುಂದಿನ ಪರ್ಯಾಯದವರು ಇದನ್ನು ಮುಂದುವರೆಸಿಕೊಂಡು ಹೋದರೆ ಮುಂದೆ ಸಮಸ್ಯೆಗೆ ಕಾರಣವಾಗಲಿದೆ. ರಾಜಕೀಯದವರಿಗೆ ಆದರೆ ಇದು ದೊಡ್ಡ ವಿಷಯವಲ್ಲ ಏಕೆಂದರೆ ಅವರಿಗೆ ಬೇಕಾಗಿರುವುದು ಮತ ಬ್ಯಾಂಕ್ ರಾಜಕೀಯ ಆದರೆ ಇಲ್ಲಿ ಮತ ಇಲ್ಲ ಬದಲಾಗಿ ರಾಷ್ಟ್ರೀಯತೆ ಸಂಸ್ಕೃತಿಯ ಪ್ರಶ್ನೆ ಇದೆ ಆ ಹಿನ್ನಲೆಯಲ್ಲಿ ಸ್ವಾಮೀಜಿಯವರಲ್ಲಿ ನಮ್ಮ ನೋವನ್ನು ವ್ಯಕ್ತಪಡಿಸಿದ್ದೇವೆ ಆದರೆ ನಮ್ಮ ನೋವು ಹಾಗೆಯೇ ಉಳಿದಿದೆ ಎಂದರು.
ಅದರಲ್ಲೇನು ವಿಶೇಷತೆಯಿದೆ?????…. ಪೇಜಾವರ ಸ್ವಾಮೀಜಿಯಂಥವರು ಸೌಹಾರ್ದತೆಗೆ ಶ್ರಮಿಸಿದರೆ ಅದರ ನೇರ ಹೊಡೆತ ಬೀಳೋದು ಪ್ರಮೋದ್ ಮುತಾಲಿಕ್ ಗೆ… ತನ್ನ ಅಂಗಡಿ ಗೆ ಬೀಗ ಬಿದ್ದಾಗ ಅದನ್ನು ಸಹಿಸಿಕೊಳ್ಳಲು ಯಾರಿಗೆ ತಾನೇ ಸಧ್ಯ ಹೇಳಿ??? ಪ್ರಮೋದ್ ಮುತಾಲಿಕ್ ಹೈಫೈ ಜೀವನ ನಡೆಸುತ್ತಿರುವುದೇ ಹಿಂದುತ್ವದ ನಶೆ ಏರಿಸಿಕೊಂಡಿರುವ ಯುವಕರು ಹಾ……. ಈಗೀಗ ಸೌಹಾರ್ದತೆಯಿಂದಾಗಿ ಇಂಥವರಿಗೆ ಸಾಕಷ್ಟು ಹೊಡೆತ ಬೀಳ್ತಾ ಇದೆ….. ಸೊ ದಯವಿಟ್ಟು ಮಾಧ್ಯಮ ಮಿತ್ರರಿಗೆ ವಿನಂತಿ ಇಂತಹ ಸೊ ಕಾಲ್ಡ್ ದೇಶಭಕ್ತರಿಗೆ ಹೆಚ್ಚಿನ ಪ್ರಾಮುಖ್ಯತೆ ಹಾಗೂ ಬಿಟ್ಟಿ ಪ್ರಚಾರ ಕೊಡಬೇಡಿ …..ಪ್ರಚಾರಕ್ಕಾಗಿಯೇ ಬೇಕಾಬಿಟ್ಟಿ ಹೇಳಿಕೆ ಕೊಡೋದರಲ್ಲಿ ಪ್ರಮೋದ್ ಮುತಾಲಿಕ್ ಎತ್ತಿದ ಕೈ…..ಇಂಥವರನ್ನು ದೂರ ಇಡೀ ನಮ್ಮ ಅವಿಭಜಿತ ಜಿಲ್ಲೆಯಿಂದ…..