Spread the love
ಮಡಂತ್ಯಾರು: ಹೊಸ ಮನೆಗೆ ಅಳವಡಿಸಲು ತಂದಿರಿಸಲಾಗಿದ್ದ ದಾರಂದ ಬಿದ್ದು ಬಾಲಕಿ ಸಾವು
ಮಡಂತ್ಯಾರು: ಹೊಸ ಮನೆಗೆ ಅಳವಡಿಸಲು ತಂದಿರಿಸಲಾಗಿದ್ದ ದಾರಂದ ಬಿದ್ದು ಬಾಲಕಿ ಮೃತಪಟ್ಟ ಘಟನೆ ಪುತ್ತಿಲ ಗ್ರಾಮದ ಕುಂಡಡ್ಕ ಸಮೀಪದ ಕೇರ್ಯಾ ಕೊನಲೆಯಲ್ಲಿ ಸಂಭವಿಸಿದೆ.
ಕೊನಲೆ ನಿವಾಸಿ ಹಾರೀಸ್ ಮುಸ್ಲಿಯಾರ್ ಮತ್ತು ಅಸ್ಮಾ ದಂಪತಿಯ 4 ಹೆಣ್ಮಕ್ಕಳಲ್ಲಿ 3ನೆಯವಳಾಗಿದ್ದ, ಕೇರ್ಯಾ ಸರಕಾರಿ ಶಾಲೆಯ 1ನೇ ತರಗತಿಯ ವಿದ್ಯಾರ್ಥಿನಿ ಅಲ್ಫಿಯಾ (6) ಮೃತ ಬಾಲಕಿ.
ಮಗುವಿನ ತಂದೆ ಕುಂಡಡ್ಕದಲ್ಲಿ ನೂತನ ಮನೆಯನ್ನು ನಿರ್ಮಾಣ ಮಾಡುತ್ತಿದ್ದು, ಗುರುವಾರ ಮನೆಯ ಮುಖ್ಯ ದ್ವಾರಕ್ಕೆ ದಾರಂದ ಜೋಡಿಸಲಿತ್ತು. ಅದಕ್ಕಾಗಿ ಮನೆಯ ಪಕ್ಕದಲ್ಲಿ ದಾರಂದವನ್ನು ತಂದಿರಿಸಿದ್ದರು. ಬಾಲಕಿ ಆಟವಾಡುತ್ತಿದ್ದಾಗ ದಾರಂದ ಆಕೆಯ ತಲೆಗೆ ಬಿದ್ದು ಗಂಭೀರ ಗಾಯವಾಗಿತ್ತು. ಕೂಡಲೇ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಆಕೆ ಮೃತಪಟ್ಟಿದೆ. ಕೇರ್ಯ ಮಸೀದಿಯಲ್ಲಿ ಅಂತ್ಯ ಸಂಸ್ಕಾರ ನಡೆಯಿತು.
Spread the love