ಮಣಿಕಲ್ಲು ಅರ್ಭಕ-ಧಾರಕೇಶ್ವರಿ ದೇವಸ್ಥಾನದ ವಿಚಾರದಲ್ಲಿ ಕೊತ್ತಾಡಿ ಉದಯ್ ಕುಮಾರ್ ಅವರಿಂದ ನ್ಯಾಯಾಲಯ ಆದೇಶ ಉಲ್ಲಂಘನೆ ಕುರಿತು ಪ್ರಕಟಣೆ
ಮಣಿಕಲ್ಲು ಅರ್ಭಕ-ಧಾರಕೇಶ್ವರಿ ದೇವಸ್ಥಾನದ ಕೊತ್ತಾಡಿ ಉದಯ್ ಕುಮಾರ್ ರವರು ದೇವಸ್ಥಾನದ ಹಣಕಾಸಿನ ವಿಚಾರಕ್ಕೆ ಸಂಬಧಿಸಿದಂತೆ ಯಾವುದೇ ಲೆಕ್ಕಪತ್ರಗಳನ್ನು ನಿರ್ವಹಿಸದೇ ನ್ಯಾಯಾಲಯದ ಆದೇಶ ಪಾಲಿಸದೇ ಇರುವುದರ ಕುರಿತು ಶಂಕರ್ ಶೆಟ್ಟಿ ಎಂಬವರು ನೀಡಿರುವ ಮಾಧ್ಯಮ ಪ್ರಕಟಣೆಯನ್ನು ಯಥಾವತ್ತಾಗಿ ಪ್ರಕಟಿಸಲಾಗಿದೆ.
ಪ್ರಕಟಣೆಯ ವಿವರ
ಮಾನ್ಯ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಮತ್ತು ಪುಥಮ ದರ್ಜೆ ನ್ಯಾಯಿಕ ದಂಢಾಧಿಕಾರಿಯವರ ನ್ಯಾಯಾಲಯ ಇಲ್ಲಿನ ಅಸಲು ದಾವಾ ಸಂಖ್ಯೆ 262/2024 ರಂತೆ ಮಾನ್ಯ ನ್ಯಾಯಾಲಯದ ರಾಜಿ ಡಿಕ್ರಿಯಂತೆ ನಾನು ಮಣಿಕಲ್ಲು ಅರ್ಭಕ-ಧಾರಕೇಶ್ವರಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತಸರನಾಗಿ ಬಿಲ್ಲಾಡಿ ಮನೆಯ ಪಾರ್ವತಿ ಶೆಡ್ತಿಯವರ ಕವರಿನ ಪರವಾಗಿ ಆಡಳಿತ ನಡೆಸಿಕೊಂಡು ಬಂದಿರುತ್ತೇನೆ. ಮಾನ್ಯ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯ ಇಲ್ಲಿನ ಅಸಲು ದಾವಾ ಸಂಖ್ಯೆ 745/2023 ರಂತೆ ಮಾನ್ಯ ನ್ಯಾಯಾಲಯವು ಕುಂದಾಪುರದ ವಕೀಲರಾದ ಕೊತ್ತಾಡಿ ಉದಯ್ ಕುಮಾರ್ ರವರನ್ನು ವಾದಿ ಹಾಗೂ ಪ್ರತಿವಾದಿಯವರ ಒಮ್ಮತದ ನಿರ್ಧಾರದಂತೆ ಪ್ರಕರಣ ಇತ್ಯಾರ್ಥ ಆಗುವವರೆಗೆ ವಾ ರಾಜಿ ಆಗುವವರೆಗೆ ರಿಸಿವರ್ ಆಗಿ ನೇಮಕ ಮಾಡಿ ಆದೇಶಿಸಿರುತ್ತದೆ. ಸದ್ರಿ ಕೊತ್ತಾಡಿ ಉದಯ್ ಕುಮಾರ್ರವರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದು ದೇವಸ್ಥಾನದ ಅಭಿವೃದ್ಧಿಯ ಬಗ್ಗೆ, ನಮ್ಮ ಸಲಹೆ-ಸೂಚನೆಯನ್ನು ಧಿಕ್ಕರಿಸಿ ದೇವಸ್ಥಾನದ ಹಿತಾಸಕ್ತಿ ವಿರುದ್ಧವಾಗಿ ಕೆಲಸ ಮಾಡಿರುತ್ತಾರೆ. ಕೊತ್ತಾಡಿ ಉದಯ್ ಕುಮಾರ್ ರವರು ನಮ್ಮ ಗಮನಕ್ಕೆ ತಾರದೇ ದೇವಸ್ಥಾನದ ಹುಂಡಿಯನ್ನು ಒಡೆದ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತಂದಾಗ ಈ ಬಗ್ಗೆ ನ್ಯಾಯಾಲಯವು ಕೊತ್ತಾಡಿ ಉದಯ್ ಕುಮಾರ್ರವರಿಗೆ ಎಚ್ಚರಿಕೆಯನ್ನು ನೀಡಿ ಸೂಕ್ತ ನಿರ್ದೇಶನವನ್ನು ನೀಡಿರುತ್ತದೆ. ಮಾನ್ಯ ನ್ಯಾಯಾಲಯದಿಂದ ನಿಯುಕ್ತಿಗೊಂಡ ರಿಸಿವರ್ರವರು ದೇವಸ್ಥಾನದ ವಾರ್ಷಿಕ ಹಬ್ಬಕ್ಕೆ ಪೂರ್ವ ಭಾವಿಯಾಗಿ ಸಭೆಯನ್ನು 25.02.2025 ರಂದು ಸಂಜೆ 03:30 ಗಂಟೆಗೆ ನಿಗದಿಪಡಿಸಿ ಸಭೆಯ ನೋಟೀಸನ್ನು ನೀಡಿದ್ದು ಸದ್ರಿ ಸಭೆಗೆ ಈ ಹಿಂದೆ ದೇವಸ್ಥಾನಕ್ಕೆ ಸಂಭಂಧಪಡದ ಕೆಲವು ವ್ಯಕ್ತಿಗಳು ಬಂದು ಗಲಾಟೆ ಮಾಡಿದ ಬಗ್ಗೆ, ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇದ್ದು ಸದ್ರಿ ವ್ಯಕ್ತಿಗಳನ್ನು ಸಭೆಗೆ ಆಹ್ವಾನಿಸದಂತೆ ಮನವಿಯನ್ನು ನ್ಯಾಯಾಲಯದ ರಿಸಿವರ್ರವರಿಗೆ ನೋಂದಣಿ ಅಂಚೆ ಮೂಲಕ ನೀಡಿರುತ್ತೇವೆ ಆದರೂ ಸಹ ಸಭೆಯ ದಿನದಂದು ಸದ್ರಿ ವ್ಯಕ್ತಿಗಳು ಸಭೆಯಲ್ಲಿ ಹಾಜರಿದ್ದು ಈ ಬಗ್ಗೆ ನಾನು ಹಾಗೂ ಇತರರು ಆಕ್ಷೇಪವನ್ನು ತೆಗೆದು ಸದ್ರಿ ವ್ಯಕ್ತಿಗಳನ್ನು ಸಭೆಯಿಂದ ಹೊರಗಡೆ ಕಳುಹಿಸುವಂತೆ ರಿಸಿವರ್ ಆದ ಕೊತ್ತಾಡಿ ಉದಯ್ ಕುಮಾರ್ರವರಿಗೆ ಮನವಿ ಮಾಡಿದಾಗ ಅವರು ಸಿಟ್ಟಿಗೆದ್ದು ನನಗೆ ಅವ್ಯಾಚ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿ ಜೀವಬೆದರಿಕೆಯನ್ನು ಒಡ್ಡಿರುತ್ತಾರೆ. ನಾನು ಈ ಬಗ್ಗೆ, ಕೋಟ ಪೊಲೀಸ್ ಠಾಣೆಯಲ್ಲಿ ಕೊತ್ತಾಡಿ ಉದಯ್ ಕುಮಾರ್ ವಿರುದ್ಧ ದೂರನ್ನು ದಾಖಲಿಸಿರುತ್ತೇನೆ. ಕೊತ್ತಾಡಿ ಉದಯ್ ಕುಮಾರ್ ರವರು ನನ್ನ ಹಾಗೂ ನನ್ನ ಮಗ ಹಾಗೂ ಇತರರ ವಿರುದ್ಧ ಕೋಟ ಪೋಲಿಸು ಠಾಣೆಯಲ್ಲಿ ಸುಳ್ಳು ಕರ್ತವ್ಯ ಅಡ್ಡಿ ಪ್ರಕರಣವನ್ನು ದಾಖಲಿಸಿರುತ್ತಾರೆ. ಮಾನ್ಯ ನ್ಯಾಯಾಲಯದ ಅಸಲು ದಾವಾ ಸಂಖ್ಯೆ 262/2024 ರ ರಾಜಿ ಡಿಕ್ರಿಯಂತೆ ದೇವಕಿ ಶೆಡ್ತಿಯವರು ನೀಡಿದ ಸಾಮಾನ್ಯ ಮೊಕ್ಯಾರು ನಾಮೆಯ ಆಧಾರದ ಮೇಲೆ ನಾನು ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತಸರನಾಗಿದ್ದು ಈ ಬಗ್ಗೆ ತಿಳಿದ ಹಾಗೂ ವ್ಯತ್ತಿಯಲ್ಲಿ ವಕೀಲರಾಗಿ ಕಾನೂನಿನ ಅರಿವಿದ್ದ ಕೊತ್ತಾಡಿ ಉದಯ್ ಕುಮಾರ್ ನಾನು ದೇವಸ್ಥಾನಕ್ಕೆ ಸಂಭಂದಪಡದ ವ್ಯಕ್ತಿ ಹಾಗೂ ನನಗೂ ಮತ್ತು ದೇವಸ್ಥಾನಕ್ಕೂ ಸಂಬಂಧ ಇಲ್ಲ ಎಂದು ಹೇಳಿದ್ದು ನ್ಯಾಯಾಂಗ ನಿಂದನೆಯಾಗಿರುತ್ತದೆ.
ಕೊತ್ತಾಡಿ ಉದಯ್ ಕುಮಾರ್ರಯವರು ನ್ಯಾಯಾಲಯ ನೀಡಿದ ಕರ್ತವ್ಯವನ್ನು ಸರಿಯಾಗಿ ನಿಭಾಯಿಸುವಲ್ಲಿ ಸಂಪೂರ್ಣ ವಿಫಲರಾಗಿರುತ್ತಾರೆ. ದೇವಸ್ಥಾನದ ಹಣಕಾಸಿನ ವಿಚಾರಗಳನ್ನು ನೋಡಿಕೊಳ್ಳಲು, ದೇವಸ್ಥಾನದ ಅಭಿವೃದ್ಧಿಯ ಬಗ್ಗೆ, ಕಾರ್ಯನಿರ್ವಹಿಸಲು, ಹುಂಡಿಯನ್ನು ಒಡೆದು ಹಣವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲು ಮಾತ್ರವೇ ಅವರು ಅಧಿಕಾರಸ್ಥರಾಗಿದ್ದು ದೇವಸ್ಥಾನದ ಆಡಳಿತದಲ್ಲಿ ಯಾವುದೇ ಹಸ್ತಕ್ಷೇಪ ಮಾಡುವಂತಿಲ್ಲ. ಪ್ರತೀ ಮೂರು ತಿಂಗಳಿಗೊಮ್ಮೆ ವರದಿಯನ್ನು ತಯಾರಿಸಿ ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸುವ ಹೊಣೆಗಾರಿಕೆಯನ್ನು ಅವರು ಹೊಂದಿದ್ದು ಈವರೆಗೂ ನ್ಯಾಯಾಲಯದ ರಿಸಿವರ್ ರವರು ಯಾವುದೇ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿರುದಿಲ್ಲ. ಕೊತ್ತಾಡಿ ಉದಯ್ ಕುಮಾರ್ರರವರು ದೇವಸ್ಥಾನದ ಹಣಕಾಸಿನ ವಿಚಾರಕ್ಕೆ ಸಂಭಂಧಿಸಿದಂತೆ ಯಾವುದೇ ಲೆಕ್ಕಪತ್ರಗಳನ್ನು ಸರಿಯಾಗಿ ನಿರ್ವಹಿಸಿರುದಿಲ್ಲ. ಸದ್ರಿ ದೇವಸ್ಥಾನದಲ್ಲಿ ಅವ್ಯವಹಾರ ನಡೆದಿರುವ ಶಂಕೆ ಇದ್ದು ಈ ಬಗ್ಗೆ, ಹಾಗೂ ದೇವಸ್ಥಾನದ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ನಡೆಸಲು ನಿರ್ಧರಿಸಿರುತ್ತೇವೆ ಎಂದು ಶಂಕರ್ ಶೆಟ್ಟಿ ಅವರು ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿರುತ್ತಾರೆ.