Home Mangalorean News Kannada News ಮಣಿಪಾಲ ಅತ್ಯಾಚಾರ ಪ್ರಕರಣ ವಿಚಾರಣೆ ಜೂ 10ಕ್ಕೆ ಮುಂದೂಡಿಕೆ

ಮಣಿಪಾಲ ಅತ್ಯಾಚಾರ ಪ್ರಕರಣ ವಿಚಾರಣೆ ಜೂ 10ಕ್ಕೆ ಮುಂದೂಡಿಕೆ

Spread the love

ಉಡುಪಿ: ಮಣಿಪಾಲ ವೈದ್ಯಕೀಯ ವಿದ್ಯಾರ್ಥಿನಿ ಅಪಹರಣ ಹಾಗೂ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ವಿಚಾರಣೆಯನ್ನು ಜೂ. 10ಕ್ಕೆ ಮುಂದೂಡಲಾಗಿದೆ.
ಮಂಗಳವಾರ ನಡೆದ ವಿಚಾರಣೆ ವೇಳೆ ಆರೋಪಿ ಪರ 5 ಜನ ಸಾಕ್ಷಿದಾರರನ್ನು ವಿಚಾರಣೆ ನಡೆಸಲಾಯಿತು. ಮೂವರು ಆರೋಪಿಗಳ ಸಂಬಂಧಿ ಮಹಿಳೆಯರಾಗಿದ್ದು, ಇಬ್ಬರು ಆಟೋ ಚಾಲಕರಾಗಿದ್ದಾರೆ.
ಹಿಂದಿನ(ಮೇ 8) ವಿಚಾರಣೆ ವೇಳೆ ಆರೋಪಿಗಳ ಪರ ನಾಲ್ವರು ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರಾದರೂ ಆರೋಪಿಗಳ ಪರ ವಕೀಲರೇ ಸಾಕ್ಷಿದಾರರ ವಿಚಾರಣೆ ಬೇಡ ಎಂದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದ್ದರು. ವಿಚಾರಣೆ ಆಲಿಸಿದ ನ್ಯಾಯಾಧೀಶರು ಮುಂದಿನ ವಾದವಿವಾದವನ್ನು ಜೂ .10ಕ್ಕೆ ಮುಂದೂಡಿದ್ದಾರೆ. ವಿಚಾರಣೆ ವೇಳೆ ಸರ್ಕಾರಿ ವಕೀಲ ಪಿ.ಎಸ್. ಜಿತ್ತೂರಿ ಉಪಸ್ಥಿತರಿದ್ದರು.


Spread the love

Exit mobile version