ಮಣಿಪಾಲ: ಆರ್ಥಿಕ ಸಮಸ್ಯೆಯಿಂದ ನೊಂದು ಟ್ಯಾಕ್ಸಿ ಡ್ರೈವರ್ ನೇಣಿಗೆ ಶರಣು
ಮಣಿಪಾಲ: ಆರ್ಥಿಕ ಸಮಸ್ಯೆಯಿಂದ ಹೌಸಿಂಗ್ ಲೋನ್ ಕಟ್ಟಲಾಗದೆ ನೊಂದು ಟ್ಯಾಕ್ಸಿ ಡ್ರೈವರ್ ಒರ್ವರು ಆತ್ಮಹತ್ಯೆಗೆ ಶರಣಾದ ಘಟನೆ ಮಣಿಪಾಲದ ಸುವಿಧಾ ಅಪಾರ್ಟ್ಮೆಂಟ್ ನಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.
ಮೃತ ವ್ಯಕ್ತಿಯನ್ನು ಕುಂದಾಪುರ ಮೂಲದ ರಾಘವೇಂದ್ರ ಎಂದು ಗುರುತಿಸಲಾಗಿದೆ.
ಮೃತ ರಾಘವೇಂದ್ರ ಅವರು ಬ್ಯಾಂಕೊಂದರಲ್ಲಿ ಹೌಸಿಂಗ್ ಲೋನ್ ಮಾಡಿದ್ದು ಆರ್ಥಿಕ ಸಮಸ್ಯೆಯಿಂದ ಅದನ್ನು ಕಟ್ಟಲಾಗಿದೆ ಮಾನಸಿಕವಾಗಿ ನೊಂದು ಮನೆಯಲ್ಲಿಯೇ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ರಾಘವೇಂದ್ರ ಪತ್ನಿ ಹಾಗೂ ಎರಡನೇ ಮತ್ತು ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿರುವ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ