ಮಣಿಪಾಲ ಆಸ್ಪತ್ರೆಯಿಂದ ಪೇಜಾವರ ಸ್ವಾಮೀಜಿ  ಮಠಕ್ಕೆ ಸ್ಥಳಾಂತರ

Spread the love

ಮಣಿಪಾಲ ಆಸ್ಪತ್ರೆಯಿಂದ ಪೇಜಾವರ ಸ್ವಾಮೀಜಿ  ಮಠಕ್ಕೆ ಸ್ಥಳಾಂತರ

ಉಡುಪಿ: ಗಂಭೀರ ಅನಾರೋಗ್ಯದಲ್ಲಿರುವ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರನ್ನು ಅವರ ಕೊನೆಯಾಸೆಯಂತೆ ರಥಬೀದಿಯಲ್ಲಿರುವ ಪೇಜಾವರ ಮಠಕ್ಕೆ ಕರೆತರಲಾಯಿತು.

ಮಣಿಪಾಲದ ಕೆ ಎಮ್ ಸಿ ಆಸ್ಪತ್ರೆಯಿಂದ ವಿಶೇಷ ಅಂಬುಲೆನ್ಸ್ ಮೂಲಕ ವೆಂಟಿಲೇಟರ್ ವ್ಯವಸ್ಥೆಯೊಂದಿಗೆ ತರಲಾಯಿತು. ಈ ವೇಳೆ ಮಣಿಪಾಲ – ಉಡುಪಿ ಸಂಪೂರ್ಣ ಝೀರೊ ಟ್ರಾಫಿಕ್ ಮಾಡಲಾಗಿತ್ತು.

ತೀವ್ರ ಉಸಿರಾಟದ ಸಮಸ್ಯೆಯಿಂದ ಡಿ. 20ರಂದು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಸ್ವಾಮೀಜಿಗೆ ತಜ್ಞ ವೈದ್ಯರ ತಂಡ ಚಿಕಿತ್ಸೆಯನ್ನು ನೀಡಿತ್ತು. ಆದರೆ ಈವರೆಗೆ ಅವರ ಆರೋಗ್ಯದಲ್ಲಿ ಸುಧಾರಣೆ ಕಾಣದ ಹಾಗೂ ಆರೋಗ್ಯ ಸ್ಥಿತಿ ಕ್ಷಣಕ್ಷಣವೂ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಅವರ ಇಚ್ಛೆಯಂತೆ ಮಠಕ್ಕೆ ಸ್ಥಳಾಂತರಿಸುವ ನಿರ್ಧಾರ ಮಾಡಲಾಗಿತ್ತು.

ಅದರಂತೆ ಭಾನುವಾರ ಬೆಳಗ್ಗೆ ಬಿಗಿ ಪೊಲೀಸ್ ಭದ್ರತೆಯೊಂದಿಗೆ ವೈದ್ಯರನ್ನೊಳಗೊಂಡ ಕೃತಕ ಉಸಿರಾಟದ ವ್ಯವಸ್ಥೆ ಜೊತೆಗೆ ವಿಶೇಷ ಆಂಬುಲೆನ್ಸ್ ನಲ್ಲಿ ಮಠಕ್ಕೆ ಕರೆದುಕೊಂಡು ಹೋಗಲಾಯಿತು.

ಈ ಹಿನ್ನೆಲೆಯಲ್ಲಿ ಉಡುಪಿ ಪೇಜಾವರ ಮಠಕ್ಕೆ ಸಾರ್ವಜನಿಕ ಭೇಟಿ ನಿರ್ಬಂಧಿಸಲಾಗಿದೆ. ಮಠದ ಮುಖ್ಯ ದ್ವಾರವನ್ನು ಬಂದ್ ಮಾಡಲಾಗಿದೆ. ಮಠದ ಸುತ್ತ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.


Spread the love