ಮಣಿಪಾಲ: ನಕಲಿ ವ್ಯಕ್ತಿಗಳು ಪರೀಕ್ಷೆಗೆ ಹಾಜರಾಗಿ ಮಣಿಪಾಲ ವಿಶ್ವವಿದ್ಯಾನಿಲಯಕ್ಕೆ ವಂಚನೆ

Spread the love

ಮಣಿಪಾಲ: ಕೌನ್ಸಿಲಿಂಗ್ ಪರೀಕ್ಷೆಗೆ ನಕಲಿ ವ್ಯಕ್ತಿಗಳು ಹಾಜರಾಗಿ ಮಣಿಪಾಲ ವಿಶ್ವವಿದ್ಯಾನಿಲಯಕ್ಕೆ ವಂಚಿಸಿದ ಘಟನೆ ಮಣಿಪಾಲ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

ಪ್ರಕರಣದ ಆಪಾದಿತ ಆನ್‌ಶೂಲ್‌ ಗ್ರೋವರ್ ತಂದೆ: ಗಿರೀಶ್‌ ಗ್ರೋವರ್‌, ವಾಸ: ನ್ಯೂ ಬಜಾರ್‌, ಟನೆಸಾರ್‌, ನಂದ್‌ಲಾಲ್‌‌, ಮೆಡಿಕೇರ್‌‌ ಹೋಮ್‌, ಕುರುಕ್ಷೇತ್ರ, ಹರ್ಯಾಣ, ಎಂಬವನು ಮಣಿಪಾಲ ಯುನಿವರ್ಸಿಟಿಯ ಗ್ರೂಪ್‌ 14ರಡಿ ಬರುವ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಜಿಯನ್ನು ಸಲ್ಲಿಸಿ ದಿನಾಂಕ 19.02.15ರಂದು ಆನ್‌ಲೈನ್‌ ಪರೀಕ್ಷೆಯನ್ನು ಬರೆದಿರುತ್ತಾನೆ ಹಾಗೂ ದಿನಾಂಕ 10.03.15ರಂದು ಕೌನ್ಸಿಲಿಂಗ್‌‌‌ಗೆ ಹಾಜರಾಗಿ ಎಮ್‌.ಡಿ ಸೀಟ್‌ನ್ನು ಆಯ್ಕೆ ಮಾಡಿ ದಿನಾಂಕ 20.05.15ರಂದು ಮೂಲ ದಾಖಲಾತಿಗಳನ್ನು ಹಾಜರುಪಡಿಸಿರುತ್ತಾನೆ. ದಾಖಲಾತಿ ಆದ ವಿದ್ಯಾರ್ಥಿಗಳ ಬಯೋಮೆಟ್ರಿಕ್‌/ಬೆರಳಚ್ಚು ಮತ್ತು ಪೋಟೋವನ್ನು ತಾಳೆ ನೋಡಿದಾಗ, ದಿನಾಂಕ 30.05.2015ರಂದು ಪ್ರೋವಿಶನಲ್‌ ದಾಖಲಾತಿ ಪಡೆದ ಆನ್‌ಶೂಲ್‌ ಗ್ರೋವರ್‌ ಎಂಬ ಆಭ್ಯರ್ಥಿಯ ಹಾಗೂ ದಿನಾಂಕ 10.03.15ರಂದು ಕೌನ್ಸಲಿಂಗ್‌‌‌ಗೆ ಹಾಜರಾದ ಆಭ್ಯರ್ಥಿಯ ಬಯೋಮೆಟ್ರಿಕ್‌/ಬೆರಳಚ್ಚು ಹಾಗೂ ಪೋಟೋಗಳು ತಾಳೆಯಾಗದೇ ಭಿನ್ನವಾಗಿದ್ದು, ಈ ಹಿಂದೆ ಪರೀಕ್ಷೆ ಬರೆದ, ಕೌನ್ಸಲಿಂಗ್‌‌ಗೆ ಹಾಜರಾದ ವ್ಯಕ್ತಿಯು ಬೇರೆಯಾಗಿದ್ದು, ಆನ್‌ಶೂಲ್‌ ಗ್ರೋವರ್‌‌ನ ಹೆಸರಿನಲ್ಲಿ ನಕಲಿ ವ್ಯಕ್ತಿಗಳು ಪರೀಕ್ಷೆ ಬರೆದು ಕೌನ್ಸಿಲಿಂಗ್‌‌ಗೆ ಹಾಜರಾಗಿ ಮಣಿಪಾಲ ಯುನಿವರ್ಸಿಟಿಗೆ ಮೋಸ ಮಾಡಿರುವುದಾಗಿದೆ.

ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಕರ್ನಾಟಕ ಎಜ್ಯುಕೇಶನ್‌ ಕಾಯಿದೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


Spread the love