ಮಣಿಪಾಲ ಪೊಲೀಸರಿಂದ ಡ್ರಗ್ ಪೆಡ್ಲರ್ ಬಂಧನ, ರೂ. 4.63 ಲಕ್ಷ ಮೌಲ್ಯದ ಮಾದಕ ವಸ್ತು ವಶ
ಉಡುಪಿ: ಮಣಿಪಾಲ ಪೊಲೀಸರು ಬುಧವಾರ ಒರ್ವ ವ್ಯಕ್ತಿಯನ್ನು ಬಂಧಿಸಿ ರೂ 4.63 ಲಕ್ಷ ಮೌಲ್ಯದ ನಿಷೇಧಿತ ಮಾದಕ ವಸ್ತುಗಳಾದ 54 ನಿಷೇದಿತ MDMA Ecstasy ಮಾತ್ರೆಗಳು, 30 ಗ್ರಾಂ ಬ್ರೌನ್ಶುಗರ್ ವಶಪಡಿಸಿಕೊಂಡಿದ್ದಾರೆ.
ಬಂಧಿತ ವ್ಯಕ್ತಿಯನ್ನು ಬ್ರಹ್ಮಾವರ ಫಜಲ್ ಎಂದು ಗುರುತಿಸಲಾಗಿದೆ.
ಬುಧವಾರ ಸಂಜೆ ಮಣಿಪಾಲ ಪೊಲೀಸ್ ಠಾಣಾ ಪಿ.ಐ, ಮಂಜುನಾಥ.ಎಮ್ ರವರಿಗೆ ಬಾತ್ಮಿದಾರರೊಬ್ಬರು ಕರೆ ಮಾಡಿ ಮಣಿಪಾಲದ ಆರ್.ಟಿ.ಒ ಕಚೇರಿ ರಸ್ತೆಯ ಎಂಡ್ಪಾಯಿಂಟ್ ಬಳಿ ಬ್ರಹ್ಮಾವರದ ಫಜಲ್ ಎಂಬವನು ನಿಷೇದಿತ ಮಾದಕ ವಸ್ತುಗಳನ್ನು ಬ್ರಹ್ಮಾವರದಿಂದ ಮಣಿಪಾಲಕ್ಕೆ ಮಾರಾಟ ಮಾಡಲು ಬಂದಿರುವುದಾಗಿ ನೀಡಿದ ಖಚಿತ ಮಾಹಿತಿಯಂತೆ ದಾಳಿ ನಡೆಸಿ ಆತನಿಂದ 2 ಮೊಬೈಲ್ಪೋನ್ಗಳು, 54 ನಿಷೇದಿತ MDMA Ecstasy ಮಾತ್ರೆಗಳು, 30 ಗ್ರಾಂ ಬ್ರೌನ್ಶುಗರ್, ಆಂದಾಜು ಮೌಲ್ಯ 4,63,600 ರೂಪಾಯಿಗಳು ಚುನಾವಣಾ ಗುರುತು ಚೀಟಿ, ಡೆಬಿಟ್ಕಾರ್ಡ್ಗಳು-2, Department of Post Indiaರವರ Annexure A ಇಂಟಿಮೇಶನ್ಸ್ಲಿಪ್ನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಫಜಲ್ ನನ್ನು ವಿಚಾರಣೆ ನಡೆಸಿದಾಗ ಆತ ಹಾಗೂ ತನ್ನ ಸ್ನೇಹಿತರಾದ ಉಡುಪಿಯ ಫರ್ಹಾನ್ ಮತ್ತು ಸಫಾ ಮೂವರು ಸೇರಿ ಕೆಲವು ಡ್ರಗ್ಸ್ ಮಾತ್ರೆ ಹಾಗೂ ಬ್ರೌನ್ಶುಗರ್ನ್ನು ಆನ್ಲೈನ್ನ್ನಲ್ಲಿ ಆರ್ಡರ್ನೀಡಿ ತನ್ನ ವಿಳಾಸಕ್ಕೆ ತರಿಸಿದ್ದು, ಅವುಗಳನ್ನು ಮಣಿಪಾಲದ ವಿದ್ಯಾರ್ಥಿಗಳಿಗೆ ಮಾರಾಟ ಮಾಡಲು ತಂದಿರುವುದಾಗಿ, ತಾನು ಫರಾನ್ ಹಾಗೂ ಸಫಾಳಿಗೆ ಇಲ್ಲಿ ನಿಂತು ಕಾಯುತ್ತಿರುವುದಾಗಿ ತಿಳಿಸಿದ್ದಾನೆ.
ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ