ಮಣಿಪಾಲ: ಸಂವಹನ ಕ್ಷೇತ್ರವು ಸಂಪೂರ್ಣ ವಿಶ್ವವನ್ನೇ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದು ಇದರಲ್ಲಿ ಮಾಧ್ಯಮ ಮಿತ್ರರು ಹೆಚ್ಚು ಹೆಚ್ಚು ಸಮಾಜ ಸಂವೇದಿಗಳಾಗುತ್ತಿರುವುದು ವಿಶೇಷವಾಗಿದೆ ಎಂದು ಕೆಎಂಸಿಯ ಡೀನ್ ಡಾ| ಪ್ರದೀಪ್ ಕುಮಾರ್ ಹೇಳಿದರು.
ಅವರು ಎ. 24ರಂದು ಇಲ್ಲಿನ ಫಾರ್ಚ್ಯೂನ್ ಇನ್ ವ್ಯಾಲಿವ್ಯೂನಲ್ಲಿ ಜರಗಿದ ಮಣಿಪಾಲ ಸ್ಕೂಲ್ ಆಫ್ ಕಮ್ಯುನಿಕೇಶನ್ನಿನ ವಾರ್ಶಿಕೋತ್ಸವದಲ್ಲಿ ವಿವಿಧ ವಿದ್ಯಾಥರ್ಿಗಳಿಗೆ ವಾರ್ಶಿಕ ಪ್ರಶಸ್ತಿ ನೀಡಿ ಮಾತನಾಡಿದರು.
ಸಾಮಾಜಿಕ ಸಮಸ್ಯೆಗಳೊಂದಿಗೆ ಸ್ಪಂದಿಸಿ, ಪರಿಣಾಮಕಾರಿಯಾಗಿ ವರದಿಗಳನ್ನು ಮಾಡಿ ಜನರ-ಸರಕಾರಗಳ ಗಮನ ಸೆಳೆಯುವ ಜವಬ್ದಾರಿ ಬಹು ದೊಡ್ಡದು. ಆದರೆ ಈ ಪ್ರಕ್ರಿಯೆ ಇನ್ನಷ್ಟು ತೀವ್ರಗೊಳ್ಳಬೇಕು ಎಂದು ಅವರು ಆಶಿಸಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿಯ 2014ನೇ ಪ್ರಶಸ್ತಿಗೆ ಪುರಸ್ಕೃತರಾದ ಉದಯವಾಣಿಯ ಹಿರಿಯ ಛಾಯಾಚಿತ್ರ ಪತ್ರಕರ್ತ ಆಸ್ಟ್ರೋ ಮೋಹನ್ ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.
ಸಮ್ಮಾನಕ್ಕೆ ಪ್ರತಿಕ್ರಿಯಿಸಿದ ಆಸ್ಟ್ರೋ ಮೋಹನ್ ಅವರು ಅನೇಕ ದೈನಿಕಗಳಲ್ಲಿ ಇಂದು ಸುದ್ದಿ ಕಥೆಯನ್ನು ಹೇಳದ, ತಾಂತ್ರಿಕವಾಗಿ ಕಳಪೆಯಾಗಿರುವ ಚಿತ್ರಗಳನ್ನು ಬಳಸಿಕೊಳ್ಳಲಾಗುತ್ತಿದೆ. ಕೆಲವುಕಡೆಗಳಲ್ಲಿ ವಿಡಿಯೋ ಗ್ರಾಬ್ನಿಂದಲೂ ಪತ್ರಿಕಾ ಚಿತ್ರಗಳನ್ನು ನಿಮರ್ಿಸಲಾಗುತ್ತಿದೆ. ಇದು ಪತ್ರಿಕಾ ಛಾಯಾಗ್ರಹಕರಿಗೆ ಭವಿಷ್ಯದಲ್ಲಿ ಭಾರಿ ದೊಡ್ಡ ಸವಾಲನ್ನು ತಂದೊಡ್ಡಲಿದೆ ಎಂದು ಹೇಳಿದರು.
ಮಣಿಪಾಲ ಸ್ಕೂಲ್ ಆಫ್ ಕಮ್ಯುನಿಕೇಶನ್ನಿನ ನಿರ್ದೇಶಕರಾದ ಡಾ| ನಂದಿನಿ ಲಕ್ಷ್ಮೀಕಾಂತ, ಅಸೋಸಿಯೇಟ್ ಪ್ರೊಫೇಸರ್ ಡಾ| ಪದ್ಮಾರಾಣಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಧ್ಯಾಪಕಿ ಶುಭಾ ರಾವ್ ಸಮ್ಮಾನಿತರನ್ನು ಪರಿಚಯಿಸಿದರು.