ಮಣಿಪಾಲ : ಲಾಡ್ಜ್ ಮೇಲೆ ದಾಳಿ, ಮಾದಕ ವಸ್ತು ವಶ – ಮೂವರ ಬಂಧನ

Spread the love

ಮಣಿಪಾಲ : ಲಾಡ್ಜ್ ಮೇಲೆ ದಾಳಿ, ಮಾದಕ ವಸ್ತು ವಶ – ಮೂವರ ಬಂಧನ

ಮಣಿಪಾಲ: ಲಾಡ್ಜ್ ನಲ್ಲಿ ಮಾದಕ ವಸ್ತುಗಳನ್ನು ತೆಗೆದುಕೊಳ್ಳಲು ಬಳಸುವ ಸಿರಿಂಜ್ ಗಳನ್ನು ಹೊಂದಿದ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಮಣಿಪಾಲ ಠಾಣಾ ಪೊಲೀಸರು ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ಉಡುಪಿ ತಾಲೂಕು 80 ಬಡಗಬೆಟ್ಟು ಗ್ರಾಮದ ದಶರಥ ನಗರದ ಡೌನ್ ಟೌನ್ ಲಾಡ್ಜ್ ನಲ್ಲಿ ನಡೆದಿದೆ.

ಬಂಧಿತರನ್ನು ಮಹಮ್ಮದ್ ಅಜರುದ್ದೀನ್, ರಾಜೇಶ್ ಪ್ರಕಾಶ್ ಜಾದವ್, ನಾಜೀಲ್ ಮಲ್ಪೆ ಎಂದು ಗುರುತಿಸಲಾಗಿದೆ.

ಎಪ್ರಿಲ್22 ರಂದು ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಮಹೇಶ್ ಪ್ರಸಾದ್, ಠಾಣೆಯಲ್ಲಿದ್ದಾಗ ಉಡುಪಿ ತಾಲೂಕು 80 ಬಡಗಬೆಟ್ಟು ಗ್ರಾಮದ ಧಶರಥ ನಗರದ ಡೌನ್ ಟೌನ್ ಲಾಡ್ಜ್ನ ರೂಮ್ ನಂ 106 ರಲ್ಲಿ ಕೆಲವು ವ್ಯಕ್ತಿಗಳು ಮಾದಕವಸ್ತುವನ್ನು ತೆಗೆದುಕೊಳ್ಳಲು ಉಪಯೋಗಿಸುವ ಸಿರಿಂಜ್ಗಳನ್ನು ಹೊಂದಿದ ಬಗ್ಗೆ ಮಾಹಿತಿ ಬಂದಿದೆ.

ಅದರಂತೆ ತೆ ಸಿಬ್ಬಂದಿಯವರ ಹಾಗೂ ಪಂಚರುಗಳ ಸಮಕ್ಷಮ ಡೌನ್ ಟೌನ್ ಲಾಡ್ಜ್ನ ರೂಮ್ ನಂ 106 ಕ್ಕೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿ ಅವರ ವಶದಲ್ಲಿದ್ದ 40,000/- ರೂಪಾಯಿ ಮೌಲ್ಯದ ಒಟ್ಟು 13.70 ಗ್ರಾಂ ತೂಕದ MDMA ಮತ್ತು 10,500/- ರೂಪಾಯಿ ಮೌಲ್ಯದ 225 ಗ್ರಾಂ ಗಾಂಜಾ , ಪ್ಲಾಸ್ಟಿಕ್ ಸಣ್ಣ ಸಣ್ಣ ಕವರ್ 15 , 5 ಸಿರಿಂಜ್ಗಳು , Sterile water 5 ml ನ 3 ಪ್ಲಾಸ್ಟಿಕ್ ಸೀಸೆ ಹಾಗೂ 500 ಮೌಲ್ಯದ ACE ಕಂಪೆನಿಯ ಕೀಪ್ಯಾಡ್ ಮೊಬೈಲ್ ಮತ್ತು 5000 ರೂಪಾಯಿ ಮೌಲ್ಯದ REDMI ಕಂಪೆನಿಯ ಟಚ್ ಸ್ಕ್ರೀನ್ ಮೊಬೈಲ್ ನ್ನು ವಶಪಡಿಸಿಕೊಂಡಿರುತ್ತಾರೆ

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 70/2025 ಕಲಂ: 8(c), 20(b),22(b) NDPS ACT ರಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.


Spread the love
Subscribe
Notify of

0 Comments
Inline Feedbacks
View all comments