Home Mangalorean News Kannada News ಮಣಿಪಾಲ: ವೇಶ್ಯಾವಾಟಿಕೆ ನಡೆಸುತ್ತಿದ್ದ ಲಾಡ್ಜಿಗೆ ದಾಳಿ – ನಾಲ್ವರ ಬಂಧನ

ಮಣಿಪಾಲ: ವೇಶ್ಯಾವಾಟಿಕೆ ನಡೆಸುತ್ತಿದ್ದ ಲಾಡ್ಜಿಗೆ ದಾಳಿ – ನಾಲ್ವರ ಬಂಧನ

Spread the love
RedditLinkedinYoutubeEmailFacebook MessengerTelegramWhatsapp

ಮಣಿಪಾಲ: ವೇಶ್ಯಾವಾಟಿಕೆ ನಡೆಸುತ್ತಿದ್ದ ಲಾಡ್ಜಿಗೆ ದಾಳಿ – ನಾಲ್ವರ ಬಂಧನ

ಮಣಿಪಾಲ: ಹೆರ್ಗ ಬಳಿಯ ಲಾಡ್ಜ್ ವೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಿ ನಾಲ್ವರನ್ನು ಪೊಲೀಸರು ಭಾನುವಾರ ಸಂಜೆ ಬಂಧಿಸಿದ್ದಾರೆ.

ಬಂಧಿತರನ್ನು ಉತ್ತರಕನ್ನಡ ಜಿಲ್ಲೆ ಹೊನ್ನಾವರ ನಿವಾಸಿ ವಿವೇಕಾನಂದ ಕಾಮತ್(34), ಕಾಪೂ ಮೂಳೂರು ನಿವಾಸಿ ರಾಜೇಶ್ ಪೂಜಾರಿ (30), ಭಟ್ಕಳ ಮಾರುಕೆರೆ ನಿವಾಸಿ ಈಶ್ವರ ಗೊಂಡ (30) ಮತ್ತು ಸಿದ್ದಾಪುರ ನಿವಾಸಿ ಶೇಖರ ಶೆಟ್ಟಿ (56) ಎಂದು ಗುರುತಿಸಲಾಗಿದೆ.

ಭಾನುವಾರ ಸಂಜೆ ಖಚಿತ ವರ್ತಮಾನದ ಮೇರೆಗೆ ಸಿ.ಕಿರಣ್ ಪೊಲೀಸ್ ನಿರೀಕ್ಷಕರು, ಡಿ.ಸಿ.ಐ.ಸಿ ರವರು ಮಾನ್ಯ ಪೊಲೀಸ್ ಉಪಾಧೀಕ್ಷಕರು ಉಡುಪಿ ಉಪ ವಿಭಾಗ ಇವರಿಂದ ಶೋಧನಾ ವಾರೆಂಟ್ ಪಡೆದು ಸಿಬ್ಬಂದಿಯವರ ಜೊತೆಯಲ್ಲಿ ಉಡುಪಿ ತಾಲೂಕು ಹೆರ್ಗಾ ಗ್ರಾಮದ ಸುಷ್ಮಾ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದು ಆರೋಪಿಗಳನ್ನು ಬಂಧೀಸಿದ್ದು ಬಂಧಿತರಿಂದ ರೂ. 32700/-, 7 ಮೊಬೈಲ್ ಫೋನ್ , 3 ಪರ್ಸ್ ಹಾಗೂ ಒಂದು ಲೆಡ್ಜರ್ ಪುಸ್ತಕವನ್ನು ವಶಪಡಿಸಿಕೊಂಡಿದ್ದಾರೆ.

ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love
RedditLinkedinYoutubeEmailFacebook MessengerTelegramWhatsapp

Exit mobile version