ಮಣಿಪಾಲ -ಶಿಂಬ್ರ ಪರಾರಿ-ಕೊಳಲಗಿರಿ ಸೇತುವೆ ಕಾಮಗಾರಿ ಆರಂಭ
ಉಡುಪಿ: ಉಡುಪಿ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ರವರ ಸತತ ಪ್ರಯತ್ನದಿಂದ ಸುಮಾರು 10 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸೇತುವೆಯ ಕಾಮಗಾರಿಯು ಬರದಿಂದ ಸಾಗಿದೆ.
ಈ ಸೇತುವೆಯು ಶಿಂಬ್ರ -ಪೆರಂಪಳ್ಳಿ, ಶಿವಳ್ಳಿ – ಪರಾರಿ ಕೊಳಲುಗಿರಿ ಜಂಕ್ಷನ್, ಉಪ್ಪೂರು- ನೀಲಾವಾರ -ಮಂದರ್ತಿ -ಕೊಕ್ಕರ್ಣಿ ಉಪ್ಪೂರು- ಬಹ್ಮಾವರ, ಹಾವಂಜೆ – ಪೆರ್ಡೂರು, ಶಿವಳ್ಳಿ-ಪೆರಂಪಳ್ಳಿ-ಡಿಸಿ ಆಫೀಸ್- ಮಣಿಪಾಲ-ಉಡುಪಿ ಸಂಪರ್ಕಿಸುವ ಬಹುದಿನಗಳ ಕನಸು ನನಸಾಗುವ ಕಾಮಗಾರಿ ಭರದಿಂದ ಸಾಗಿದೆ ಎಂದು ಸಮಾಜ ಸೇವಕ ಹಾಗೂ ಸ್ಥಳೀಯ ಉಪ್ಪೂರು ಗ್ರಾ.ಪ. ಸದಸ್ಯ ಫ್ರಾಂಕಿ ಡಿಸೋಜ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳೀಯರಾದ ಕಾಂಗ್ರೆಸ್ ಮುಖಂಡ ಜಯಶೆಟ್ಟಿ ಬನ್ನಂಜೆ, ವಾಲ್ಟರ್ ಡಿಸೋಜ ಕೊಳಲಗಿರಿ,ರಮೇಶ್ ಪೂಜಾರಿ ಕೀಳಿಂಜೆ ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು, ಗಣೇಶ್ ಶೆಟ್ಟಿ ಕೀಳಿಂಜೆ ಮತ್ತಿತರರು ಉಪಸ್ಥಿತರಿದ್ದರು.