ಮತದಾರರು ನೀಡಿದ ಪಂಚರಾಜ್ಯ ಚುನಾವಣೆಯ ಫಲಿತಾಂಶಕ್ಕೆ ತಲೆಬಾಗುತ್ತೇವೆ – ಮಂಜುನಾಥ ಭಂಡಾರಿ

Spread the love

ಮತದಾರರು ನೀಡಿದ ಪಂಚರಾಜ್ಯ ಚುನಾವಣೆಯ ಫಲಿತಾಂಶಕ್ಕೆ ತಲೆಬಾಗುತ್ತೇವೆ – ಮಂಜುನಾಥ ಭಂಡಾರಿ

ಉಡುಪಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಧಾನ. ತೆಲಂಗಾಣದ ಮತದಾರರಿಗೆ ವ್ಯಯಕ್ತಿಕ ಅಭಿನಂದನೆಗಳನ್ನು ಸಲ್ಲಿಸುತ್ತಾ ಇತರೆ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತವನ್ನು ನೀಡಿದ ಪ್ರತಿಯೊರ್ವ ಮತದಾರರಿಗೆ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಪ್ರತಿಕ್ರಿಯಿಸಿದ್ದಾರೆ.

ಚುನಾವಣಾ ವ್ಯವಸ್ಥೆಯಲ್ಲಿ ಸೋಲು-ಗೆಲವು ಕ್ಷಣಿಕ . ಗೆದ್ದಾಗ ಹಿಗ್ಗದೇ ಸೋತಾಗ ಕುಗ್ಗದೇ ರಾಜಕೀಯ ಮಾಡುತ್ತಾ ಬಂದಿರುವ ಪಕ್ಷ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ . ಕರ್ನಾಟಕ ರಾಜ್ಯದಲ್ಲಿ ಬಡವರ್ಗದ ಹಾಗೂ ದಲಿತರ ಪರವಾಗಿ ಆಶ್ವಾಸನೆ ನೀಡಿದ ಗ್ಯಾರಂಟಿಗಳನ್ನು ಚುನಾವಣೆಯಲ್ಲಿ ಗೆದ್ದ 100 ದಿನಗಳಲ್ಲಿ ಅನುಷ್ಟಾನಕ್ಕೆ ತಂದಿರುವುದು ಇತಿಹಾಸದ ಪುಟಗಳಲ್ಲಿ ಅಚ್ಚಳಿಯದ ಉಳಿಯುವ ವ್ಯವಸ್ಥೆಯಾಗಿದ್ದನ್ನು ಮನಗಂಡ ರಾಷ್ಟ್ರ ಬಿಜೆಪಿ ಮದ್ಯ ಪ್ರದೇಶ ಹಾಗೂ ರಾಜಸ್ಥಾನದಲ್ಲಿ ನಮ್ಮ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಯ ಹೆಸರನ್ನು ಬದಲಾಯಿಸಿದವರೇ ಲಾಡ್ಲಿ ಬೆಹ್ನಾ ಹೆಸರಿನಲ್ಲಿ ಗ್ಯಾರಂಟಿಗಳನ್ನು ಘೋಷಿಸಿ ಗೆಲುವು ದಾಖಲಿಸಲೆಂಬ ಎಕಮಾತೃ ದೃಷ್ಟಿಯಿಂದ ನಮ್ಮ ಗ್ಯಾರಂಟಿಗಳ ಹೆಸರು ಬದಲಾಯಿಸುವಷ್ಟು ಮಟ್ಟಕ್ಕೆ ಕರ್ನಾಟಕ ಕಾಂಗ್ರೆಸ್ ನ ಗ್ಯಾರಂಟಿಗಳು ಕಾರಣವಾದವು ಎಂದರೆ ತಪ್ಪಾಗಲಾರದು.

ರಾಜ್ಯ ಕಾಂಗ್ರೆಸ್, ನ ಗ್ಯಾರಂಟಿ ಯೋಜನೆಗಳು ರಾಷ್ಟ್ರೀಯ ಬಿಜೆಪಿಯ ನಿದ್ದಿಗೆಡಿಸಿದ್ದಂತೂ ಸತ್ಯ… ಕಾಂಗ್ರೆಸ್ ಪಕ್ಷ ಗ್ಯಾರಂಟಿ ಯೋಜನೆಗಳನ್ನು ನೀಡುವಾಗ ದೇಶ ದಿವಾಳಿಯಾಗುತ್ತೆ ಎಂದು ಟೀಕೆ ಮಾಡಿದ ಬಿಜೆಪಿ ಈಗ ಸ್ವತಃ ಮೋದಿ ಕಿ ಗ್ಯಾರಂಟಿ ಎನ್ನುವ ಹೆಸರಿನಲ್ಲಿ ನಮ್ಮ ಯೋಜನೆಗಳನ್ನು ಹೆಸರು ಬದಲಾವಣೆ ಮಾಡಿ ಚುನಾವಣೆಯಲ್ಲಿ ಪ್ರಯೋಗ ಮಾಡಿರುವುದು ಜಗಜ್ಜಾಹಿರಾಗಿದೆ. ಇನ್ನು ಮುಂದೆ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಟೀಕಿಸುವ ಯಾವುದೇ ನೈತಿಕತೆಯನ್ನು ಬಿಜೆಪಿ ಹೊಂದಿಲ್ಲ.

ಅದೇನೆ ಇರಲಿ ನಮ್ಮ ಪಕ್ಷದ ಸೋಲಿನ ಬಗ್ಗೆ ಪರಾಮರ್ಶೆ ಮಾಡಿ ನಮ್ಮಲ್ಲಿನ ನೂನ್ಯತೆಗಳನ್ನು ತಿದ್ದಿಕೊಂಡು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಯವರ ನೇತೃತ್ವದಲ್ಲಿ ನಡೆಯಲಿದೆ. ಮುಂದಿನ ದಿನಗಳಲ್ಲಿ ಹಿರಿಯ ಹಾಗೂ ಕಿರಿಯ ನಾಯಕರುಗಳ ಒಗ್ಗಟ್ಟು ಹಾಗೂ ಕೊಟ್ಯಾಂತರ ಕಾರ್ಯಕರ್ತರ ಒಕ್ಕೊರಲ ಶ್ರಮದಿಂದ ಲೋಕಸಭಾ ಚುನಾವಣೆಯಲ್ಲಿ INDIA ಒಕ್ಕೂಟ ಅಧಿಕಾರಕ್ಕೆ ಏರುವ ವಿಶ್ವಾಸವನ್ನು ಮಾಧ್ಯಮ ಪ್ರಕಟಣೆಯಲ್ಲಿ ವ್ಯಕ್ತಪಡಿಸಿದ್ದಾರೆ.


Spread the love