ಮತದಾರರ ಧ್ರುವಿಕಕರಣಕ್ಕೆ ಬಿಜೆಪಿ ಪ್ರಯತ್ನ : ಮುಹಮ್ಮದ್ ಶಾಕಿಬ್

Spread the love

ಮತದಾರರ ಧ್ರುವಿಕಕರಣಕ್ಕೆ ಬಿಜೆಪಿ ಪ್ರಯತ್ನ : ಮುಹಮ್ಮದ್ ಶಾಕಿಬ್

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಮತದಾರರನ್ನು ಧ್ರುವೀಕರಿಸಲು ಬಿಜೆಪಿಯು ಹೂಡುತ್ತಿರುವ ದುಷ್ಟ ತಂತ್ರಗಳ ಕುರಿತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷರಾದ ಮುಹಮ್ಮದ್ ಶಾಕಿಬ್ ಜನರನ್ನು ಎಚ್ಚರಿಸಿದ್ದಾರೆ.

ಮಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಠಾತ್ ನಡೆದ ಘರ್ಷಣೆಗಳ ಹಿಂದೆ ಬಿಜೆಪಿ ಮತ್ತು ಆರ್‍ಎಸ್‍ಎಸ್ ಕೈವಾಡವಿದೆ. ರಾಜ್ಯ ಚುನಾವಣೆಗೆ ಮುಂಚಿತವಾಗಿ ಪಾಪ್ಯುಲರ್ ಫ್ರಂಟ್‍ನ್ನು ನಿಷೇಧಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ಕಾರ್ಯನಿರ್ವಹಿಸುತ್ತದೆ ಎಂಬುದಾಗಿ ಕೆಲವು ಮಾಧ್ಯಮಗಳಲ್ಲಿ ವರದಿಗಳೂ ಪ್ರಕಟವಾಗಿದೆ. ಬಿಜೆಪಿಯು ಕರ್ನಾಟಕದಲ್ಲಿ ಎಲ್ಲಾ ಸರಿ ಅಥವಾ ತಪ್ಪು ಹಾದಿಯಲ್ಲಿ ಅಧಿಕಾರವನ್ನು ಪಡೆದುಕೊಳ್ಳಲು ಉತ್ಸುಕವಾಗಿದೆ ಎಂಬುವುದಕ್ಕೆ ಇದು ಸಾಕ್ಷಿಯಾಗಿದೆ. ಧ್ರುವೀಕರಣಗೊಳಿಸಲು ಕ್ರಿಯಾಶೀ¯ ಫ್ಯಾಶಿಷ್ಟ್ ವಿರೋಧಿ, ಪ್ರಗತಿಪರ ಸಂಘಟನೆಯನ್ನು ಹಿಂದೂ ವಿರೋಧಿ ಸಂಘಟನೆ ಎಂದು ಬಿಂಬಿಸಿ ಯುಎಪಿಎಯಂತಹ ಕರಾಳ ಕಾನೂನುಗಳನ್ನು ಬಳಸಿಕೊಂಡು ಪಾಪ್ಯುಲರ್ ಫ್ರಂಟ್‍ನ ಕಾರ್ಯಚಟುವಟಿಕೆಗಳನ್ನು ದಮನಿಸುವುದು ಅವರ ಯೋಜನೆಯಾಗಿದೆ.

ಆದ್ಯಾಗೂ ಕಾನೂನನ್ನು ಪಾಲಿಸುವ ಸಂಘಟನೆಯಾಗಿ ಪಾಪ್ಯುಲರ್ ಫ್ರಂಟ್ ಈ ರೀತಿಯ ಕಾಯ್ದೆಗಳ ದುರುಪಯೋಗದ ವಿರುದ್ದ ಕಾನೂನು ಪರಿಹಾರವನ್ನು ಕಂಡುಕೊಳ್ಳಲಿದೆ ಮತ್ತು ರಾಜ್ಯದ ಜನತೆ ಈ ಜನಾಂದೋಲನಕ್ಕೆ ಸಂಪೂರ್ಣ ಬೆಂಬಲ ನೀಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ರಾಜ್ಯಾಧ್ಯಕ್ಷರು ತಿಳಿಸಿದರು. ಫ್ಯಾಶಿಸ್ಟ್ ಶಕ್ತಿಗಳ ವಂಚನೆಗಳನ್ನು ಸೋಲಿಸಲು ಕರ್ನಾಟಕದ ಜನತೆಯನ್ನು ಒತ್ತಾಯಿಸಿದರು.


Spread the love