ಮತ್ಸ್ಯೋದ್ಯಮಿಗಳ ಮನೆಗೆ ಐಟಿ ದಾಳಿ ಖಂಡನೀಯ ; ಕಿರಣ್ ಕುಮಾರ್ ಉದ್ಯಾವರ

Spread the love

ಮತ್ಸ್ಯೋದ್ಯಮಿಗಳ ಮನೆಗೆ ಐಟಿ ದಾಳಿ ಖಂಡನೀಯ ; ಕಿರಣ್ ಕುಮಾರ್ ಉದ್ಯಾವರ

ಉಡುಪಿ: ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾದ ಅಮೀತ್ ಷಾ ಆಗಮಿಸುವ ಸಂದರ್ಭದಲ್ಲಿ ಪೂರ್ವಭಾವಿಯಾಗಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮತ್ಸ್ಯೋದ್ಯಮಿಗಳನ್ನು ಗುರಿಯಾಗಿಸಿಕೊಂಡು ಅವರ ಮನೆ ಹಾಗೂ ವ್ಯಾಪಾರ ಸ್ಥಳಗಳಿಗೆ ಕೇಂದ್ರ ಸರಕಾರ ಐಟಿ ದಾಳಿ ನಡೆಸುತ್ತಿರುವುದನ್ನು ಅಖಿಲ ಭಾರತ ರಾಷ್ಟ್ರೀಯ ಮೀನುಗಾ ಕಾಂಗ್ರೆಸಿನ ಕಾರ್ಯದರ್ಶಿಯವರಾದ ಕಿರಣ್ ಕುಮಾರ್ ಉದ್ಯಾವರ ಖಂಡಿಸಿದ್ದಾರೆ.

ಮೀನುಗಾರಿಕಾ ಉದ್ಯಮವು ತೆರಿಗೆ ವ್ಯಾಪ್ತಿಯಿಂದ ಹೊರಗಿರುವುದರಿಂದ, ಈಗ ಕೇಂದ್ರದ ಮೋದಿ ಸರಕಾರವು ಮೀನುಗಾರಿಕಾ ಉದ್ಯಮವು ತೀರಾ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಮೀನುಗಾರಿಕಾ ಉದ್ಯಮವನ್ನು ತೆರಿಗೆ ವ್ಯಾಪ್ತಿಗೆ ತರುವ ಹುನ್ನಾರವನ್ನು ಮಾಡುತ್ತಿದೆ. ಇದರಿಂದ ಮತ್ಸ್ಯೊದ್ಯಮ ವ್ಯಾಪಾರ ನಡೆಸಲು ತುಂಬಾ ತೊಂದರೆಯಾಗುವುದಲ್ಲದೆ, ದೇಶದಲ್ಲಿ ಮೋದಿ ಸರಕಾರ ಬಂದ ನಂತರ ದೇಶದ ಎಲ್ಲಾ ವ್ಯಾಪರಗಳು ಅಧೋಗತಿಗೆ ಸಾಗುತ್ತಿದ್ದು, ಮೀನು ವ್ಯಾಪಾರವನ್ನು ಸಂಕಷ್ಟಕ್ಕೀಡು ಮಾಡುತ್ತಿದ್ದಾರೆ. ಇದರಿಂದ ಮೀನುಗಾರಿಕೆ ನಡೆಸುವ ಎಲ್ಲಾ ಮೀನುಗಾರರಿಗೆ ಸರಿಯಾದ ಲಾಭಾಂಶ ಪಡೆಯಲು ತೊಂದರೆಯಾಗುತ್ತಿದೆ ಅಲ್ಲದೆ ಬದುಕು ನಡೆಸಲು ಕಷ್ಟವಾಗುತ್ತಿದೆ.

ಮತ್ಸ್ಯೋದ್ಯಮಿಗಳೂ ತಮ್ಮ ಆದಾಯದ ಲಾಭಂಶದಲ್ಲಿ ಉಡುಪಿ ಹಾಗೂ ದಕ ಜಿಲ್ಲೆಯ ಎಲ್ಲಾ ಭಜನಾ ಮಂದಿರಗಳೀಗೆ ಹಾಗೂ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಹಾಗೂ ಸಮಾಜದ ಬಡವರಿಗೆ ಆಶ್ರಯದಾತರಾಗಿರುತ್ತಾರೆ. ಇವರನ್ನು ಗುರಿಯಾಗಿಸಿ ಕೇಂದ್ರ ಸರಕಾರವು ಐಟಿ ದಾಳಿ ನಡೆಸುತ್ತಿರುವುದು ಖಂಡನೀಯ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love
1 Comment
Inline Feedbacks
View all comments
6 years ago

Mr Udyavar, are you implying that IT raid can not and should not be happening on certain sections of the society? Can you clarify? For those who do not know people like Udyavar, be informed that he is a future MLA candidate making his presence felt. Ivan, watch our.