Home Mangalorean News Kannada News ಮತ ಚಲಾಯಿಸಿ ಮದುವೆಗೆ ತೆರಳಿದ ಮದುಮಗಳು

ಮತ ಚಲಾಯಿಸಿ ಮದುವೆಗೆ ತೆರಳಿದ ಮದುಮಗಳು

Spread the love

ಮತ ಚಲಾಯಿಸಿ ಮದುವೆಗೆ ತೆರಳಿದ ಮದುಮಗಳು

ಮಂಗಳೂರು: ರಾಜ್ಯಾದ್ಯಂತ ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಬಿರುಸಿನಿಂದ ನಡೆಯುತ್ತಿದ್ದು, ಮದುವೆಗೂ ಮುನ್ನ ಮದುಮಗಳು ಮತದಾನ ಮಾಡಿದ ಪ್ರಸಂಗವೊಂದು ಮಂಗಳೂರಿನಲ್ಲಿ ನಡೆದಿದೆ.

 

ನಗರದ ಬೋಂದೆಲ್ ಸೇಂಟ್ ಲಾರೆನ್ಸ್ ಶಾಲೆಯಲ್ಲಿ ಮತದಾನ ನಡೆಯುತ್ತಿದೆ. ಪಚ್ಚನಾಡಿಯ ಮದುಮಗಳು ವಿಯೋಲಾ ಮಾರಿಯಾ ಫೆರ್ನಾಂಡೀಸ್ ಮತದಾನ ಮಾಡಿದ್ದಾರೆ.

7 ಗಂಟೆಗೆ ಮತದಾನ ಮಾಡಿ ಬಳಿಕ ಬೆಳ್ತಂಗಡಿಯಲ್ಲಿ ನಡೆಯೋ ಮದುವೆಗೆ ಮದುಮಗಳು ತೆರಳಿದ್ದಾರೆ. ಮಂಗಳೂರಿನ ಬೆಳ್ತಂಗಡಿಯ ವರ ಸಿಲ್ವೆಸ್ಟರ್ ರೋಡ್ರಿಗಸ್ ಜತೆ ಯುವತಿಯ ಮದುವೆ ಇಂದು ನಡೆಯುತ್ತಿದೆ.

ಒಟ್ಟಿನಲ್ಲಿ ವಿಯೋಲಾ ಅವರು ಮದುವೆಗೂ ಮುನ್ನ ಮತದಾನ ಮಾಡಿ ಮಾದರಿಯಾಗಿದ್ದಾರೆ.


Spread the love

Exit mobile version