Home Mangalorean News Kannada News ಮತ ಹಾಕಿ ಗೆಲ್ಲಿಸಿರುವ ಮತದಾರರ ಮುಂದೆ ಜನಪ್ರತಿನಿಧಿಗಳ ದರ್ಪದಿಂದ ಕೂಡಿದ ವರ್ತನೆ ಅಸಹನೀಯ – ಅನ್ಸಾರ್...

ಮತ ಹಾಕಿ ಗೆಲ್ಲಿಸಿರುವ ಮತದಾರರ ಮುಂದೆ ಜನಪ್ರತಿನಿಧಿಗಳ ದರ್ಪದಿಂದ ಕೂಡಿದ ವರ್ತನೆ ಅಸಹನೀಯ – ಅನ್ಸಾರ್ ಅಹ್ಮದ್

Spread the love

ಮತ ಹಾಕಿ ಗೆಲ್ಲಿಸಿರುವ ಮತದಾರರ ಮುಂದೆ ಜನಪ್ರತಿನಿಧಿಗಳ ದರ್ಪದಿಂದ ಕೂಡಿದ ವರ್ತನೆ ಅಸಹನೀಯ – ಅನ್ಸಾರ್ ಅಹ್ಮದ್

ಉಡುಪಿ: ಮತ ಹಾಕಿ ಗೆಲ್ಲಿಸಿರುವ ಮತದಾರರ ಮುಂದೆ ಜನಪ್ರತಿನಿಧಿಗಳ ದರ್ಪದಿಂದ ಕೂಡಿದ ವರ್ತನೆ ಅಸಹನೀಯ ವಾದುದು ಎಂದು ಸಾಮಾಜಿಕ ಕಾರ್ಯಕರ್ತ ಅನ್ಸಾರ್ ಅಹ್ಮದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಡುಪಿ ತಾಲೂಕು 76 ಬಡಗ ಬೆಟ್ಟು ಗ್ರಾಮದ ಇಂದಿರಾನಗರ ವಾರ್ಡಿನಲ್ಲಿ ಚರಂಡಿ ಸಮಸ್ಯೆ ಉದ್ಭವಿಸಿರುವುದನ್ನು ಸಾರ್ವಜನಿಕರು ಹಾಗೂ ಸ್ಥಳೀಯರು ನಗರಸಭೆ ಹಾಗೂ ನಗರಸಭಾ ಸದಸ್ಯರ ಗಮನಕ್ಕೆ ಹಲವಾರು ಬಾರಿ ತಂದಿರುತ್ತಾರೆ.

ಸಮಸ್ಯೆಗೆ ಯಾವುದೇ ಸೂಕ್ತ ಪರಿಹಾರ ಸಿಗದ ಕಾರಣ ಸಾಮಾಜಿಕ ಕಾರ್ಯಕರ್ತರಾದ ಅನ್ಸಾರ್ ಅಹಮದ್ ರವರ ನೇತೃತ್ವದಲ್ಲಿ ಕಳೆದ ಹತ್ತು ದಿನಗಳ ಹಿಂದೆ ಈ ಸಮಸ್ಯೆಯನ್ನು ಪರಿಹರಿಸುವಂತೆ ಆಗ್ರಹಿಸಿ ಬ್ಯಾನರ್ ಒಂದನ್ನು ಅಳವಡಿಸಲಾಗಿತ್ತು.

ಬ್ಯಾನರ್ ನಲ್ಲಿ ಜುಲೈ 18 ರೊಳಗೆ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಮನವಿ ಮಾಡಲಾಗಿತ್ತು. ತಪ್ಪಿದ್ದಲ್ಲಿ ಜುಲೈ 19 ರಂದು ಶ್ರಮದಾನದ ಮೂಲಕ ನಮ್ಮ ಊರಿನ ಸಮಸ್ಯೆಯನ್ನು ನಾವೇ ಬಗೆಹರಿಸಿ ಕೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಲಾಗಿತ್ತು.

ಆದರೆ ನಗರಸಭೆಯ ಅಧಿಕಾರಿಗಳಾಗಲಿ ಇಂದಿರಾ ನಗರ ವಾರ್ಡಿನ ನಗರಸಭಾ ಸದಸ್ಯರಾಗಲಿ ಯಾವುದೇ ರೀತಿಯ ಸ್ಪಂದನೆಯನ್ನು ನೀಡದಿರುವುದು ಅವರ ಬೇಜವಾಬ್ದಾರಿ ವರ್ತನೆಯನ್ನು ಎತ್ತಿ ತೋರಿಸುತ್ತಿದೆ. ಕನಿಷ್ಠಪಕ್ಷ ಸೌಜನ್ಯಕ್ಕಾದರೂ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಗಮನಿಸದಿರುವುದು ಅವರ ಅಹಂಕಾರ ವರ್ತನೆಯನ್ನು ಎತ್ತಿತೋರಿಸುತ್ತದೆ. ಅವರಿಂದ ಯಾವುದೇ ರೀತಿಯ ಸ್ಪಂದನೆ ಬಾರದಿರುವುದನ್ನು ಮನಗಂಡು ಸಾಮಾಜಿಕ ಕಾರ್ಯಕರ್ತರಾದ ಅನ್ಸಾರ್ ಅಹ್ಮದ್ ರವರು ಸುಮಾರು ಮೂವತ್ತು ಜನ ಸದಸ್ಯರ ತಂಡದೊಂದಿಗೆ ಇವತ್ತು ಶ್ರಮದಾನ ನಡೆಸಿ ನಮ್ಮ ಊರಿನ ಅಭಿವೃದ್ಧಿ ಗೋಸ್ಕರ ಯಾರ ಕೈ ಕಾಲು ಹಿಡಿಯುವ ಅಗತ್ಯವೂ ನಮಗಿಲ್ಲ, ನಮ್ಮ ಊರಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ನಾವು ಸಧೃಡರಾಗಿದ್ದೇವೆ ಎಂಬುದನ್ನು ತೋರಿಸಿ ಕೊಟ್ಟಿರುತ್ತಾರೆ.

ಶ್ರಮದಾನದ ಸಂದರ್ಭದಲ್ಲಿ ಸುಮಾರು 120 ಅಡಿ ಉದ್ದದ ಚರಂಡಿಯನ್ನು ಸ್ವಚ್ಛಗೊಳಿಸಿದ್ದು ಅದರಿಂದ ಸುಮಾರು 3 ಯೂನಿಟ್ ಗಳಷ್ಟು ಮಣ್ಣು ಸಿಕ್ಕಿರುತ್ತದೆ. ಇವತ್ತು ಬೆಳಿಗ್ಗೆ ಸುಮಾರು 9:00 ಗಂಟೆಯಿಂದ ಸಂಜೆ 6.30 ರವರೆಗೆ ಮಾಡಿದ ಶ್ರಮದಾನ ಕೆಲಸದಿಂದ ಸಮಸ್ಯೆ ಸಂಪೂರ್ಣವಾಗಿ ಮುಗಿದಿರುವುದಿಲ್ಲ.. ಇನ್ನೂ ಅರ್ಧ ದಿನದ ಕೆಲಸ ಬಾಕಿ ಇರುವುದರಿಂದ ಅದನ್ನು ಮುಂದಿನ ಆದಿತ್ಯವಾರ ಪೂರ್ಣ ಗೊಳಿಸಲಾಗುವುದು ಎಂದು ತಿಳಿಸಿರುತ್ತಾರೆ.

ಚರಂಡಿಯ ಮಣ್ಣನ್ನು ತೆರವುಗೊಳಿಸಿದ ನಂತರ ಇಲ್ಲಿ ನೀರು ಹರಿಯಲು ರಸ್ತೆಗೆ ಅಡ್ಡಲಾಗಿ ಹಾಕಿರುವ ದೊಡ್ಡ ಸಿಮೆಂಟ್ ಪೈಪ್ ಗಳು ಹಾನಿಗೀಡಾಗಿ ನೀರು ಸರಾಗವಾಗಿ ಸಾಗಲು ಸಾಧ್ಯವಾಗುತ್ತಿಲ್ಲ. ಈ ಕಾಮಗಾರಿಯನ್ನು ಪಿ ಡಬ್ಲ್ಯು ಡಿ ಇಲಾಖೆ ಮಾಡಬೇಕಾಗಿರುತ್ತದೆ. ನಾಳೆ ಪಿಡಬ್ಲ್ಯುಡಿ ಇಲಾಖೆಗೆ ಮನವಿ ಯನ್ನು ನೀಡಿ ವರ್ಷಗಳಿಂದ ಇರುವ ಸಮಸ್ಯೆಯನ್ನು ಬಗೆಹರಿಸಲು ಕೇವಲ 20 ದಿನದ ಗಡು ನೀಡಲಾಗುವುದು ಅದರೊಳಗೆ ರಸ್ತೆಗೆ ಅಡ್ಡಲಾಗಿ ಹಾಕಿರುವ ಹಾನಿಗೊಂಡ ಪೈಪನ್ನು ತೆರವುಗೊಳಿಸಿ ಪರ್ಯಾಯ ವ್ಯವಸ್ಥೆ ಮಾಡದಿದ್ದಲ್ಲಿ ಆ ಕೆಲಸವನ್ನು ನಾವೇ ಶ್ರಮದಾನ ಮಾಡುವ ಮೂಲಕ ಮಾಡಬೇಕಾಗುತ್ತದೆ ಎನ್ನುವಂತಹ ಎಚ್ಚರಿಕೆಯನ್ನು ಸಾಮಾಜಿಕ ಕಾರ್ಯಕರ್ತರಾದ ಅನ್ಸಾರ್ ಅಹಮದ್ ರವರು ಈ ಸಂದರ್ಭದಲ್ಲಿ ನೀಡಿರುತ್ತಾರೆ.


Spread the love

Exit mobile version