ಮದರ್ & ಡಾಟರ್ ಎ-ಲೈಕ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಥೆರೆಸಿಯಾ ಮತ್ತು ಶರಲ್ ನೊರೊನ್ಹಾ
ಮಂಗಳೂರು: ಸತತ ನಾಲ್ಕನೇ ವರ್ಷ ಮ್ಯಾಂಗಲೋರಿಯನ್ ಡಾಟ್ ಕಾಮ್ ತಾಯಂದಿರ ದಿನವನ್ನು ವಿಶೀತಿಷ್ಟವಾಗಿ ಆಚರಿಸಿಕೊಂಡು ಬರುತ್ತಿದ್ದು ಈ ವರ್ಷವೂ ಕೂಡ ತನ್ನ ಒದುಗರಿಂದ ತಾಯಿ ಮತ್ತು ಮಗಳು ಸಮಾನವಾಗಿ ಕಾಣುವ ಚಿತ್ರಗಳನ್ನು ಕಳುಹಿಸಿ ಬಹುಮಾನಗಳನ್ನು ಗೆಲ್ಲುವ ವಿಶಿಷ್ಟ ಸ್ಪರ್ಧೆಯನ್ನು ಐಡಿಯಲ್ ಐಸ್ ಕ್ರೀಮ್ ಹಾಗೂ ವಿ4 ನ್ಯೂಸ್ ಜಂಟಿ ಆಶ್ರಯದಲ್ಲಿ ಆಯೋಜಿಸಿತ್ತು.
ಸ್ಪರ್ಧೆಗೆ ಒದುಗರಿಂದ ವಿಶೇಷವಾದ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೇವಲ ಸ್ಥಳೀಯ ಒದುಗರು ಮಾತ್ರವಲ್ಲದೆ ದಕ್ಷಿಣ ಆಫ್ರಿಕಾ, ಅಮೇರಿಕ, ಲಂಡನ್, ಆಸ್ಟ್ರೇಲಿಯ, ಜರ್ಮನಿ, ಕೆನಾಡಾ ಹಾಗೂ ಇತರ ಗಲ್ಫ್ ದೇಶಗಳಿಂದ ಕೂಡ ಸ್ಪರ್ಧೆಗೆ ಪ್ರವೇಶಗಳು ಬಂದಿರುವುದು ಅಭಿಮಾನದ ಸಂಗತಿಯಾಗಿತ್ತು. ಸ್ಪರ್ಧೆಗೆ ಭಾಗವಹಿಸಿದ ಪ್ರವೇಶಾರ್ಥಿಗಳು ಪ್ರತಿಯೊಂದು ಕೂಡ ವಿಶಿಷ್ಟವಾಗಿದ್ದು ಪ್ರತಿಯೊಬ್ಬರೂ ಕೂಡ ಬಹುಮಾನಕ್ಕೆ ಅರ್ಹರಾಗಿದ್ದರು ಎಂದರೆ ತಪ್ಪಾಗಲಾರದು. ಆದರೆ ನಿಯಮ ಪ್ರಕಾರ ನಾಡಿನ ಹೆಸರಾಂತ ತೀರ್ಪುಗಾರರಿಂದ ಸ್ಪರ್ಧೆಯ ವಿಜೇತರನ್ನು ಆಯ್ಕೆ ಮಾಡಲಾಗಿದ್ದು ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಮಂಗಳವಾರ ಐಡಿಯಲ್ ಐಸ್ ಕ್ರೀಮ್ ಪಾರ್ಲರ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಬಹುಮಾನ ವಿತರಣಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಐಡಿಯಲ್ ಐಸ್ ಕ್ರೀಮ್ ಇದರ ಕಾರ್ಯನಿರ್ವಾಹಕ ನಿರ್ದೇಶಕ ಮುಕುಂದ್ ಕಾಮತ್ ಹಾಗೂ ಅವರ ಮಾತೃಶ್ರೀಯವರಾದ ಜಯಕಾಮತ್, ಹಾಗೂ ಮಗ ಮೋಹಿತ್ ಅವರೊಂದಿಗೆ ಮ್ಯಾಂಗಲೋರಿಯನ್ ಡಾಟ್ ಕಾಮ್ ಇದರ ಮ್ಹಾಲಕರು, ಮುಖ್ಯ ಸಂಪಾದಕರು ಆಗಿರುವ ವಾಯ್ಲೆಟ್ ಪಿರೇರಾ ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ಮುಕುಂದ್ ಕಾಮತ್ ಅವರು ಐಡಿಯಲ್ ಐಸ್ ಕ್ರೀಮ್ ವಿವಿಧ ಸಂಸ್ಥೆಗಳೊಂದಿಗೆ ಸೇರಿಕೊಂಡು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಅದರಲ್ಲೂ ಮ್ಯಾಂಗಲೋರಿಯನ್ ಡಾಟ್ ಕಾಮ್ ಆಯೋಜಿಸಿರುವ ಮದರ್ & ಡಾಟರ್ ಎ-ಲೈಕ್ ಸ್ಪರ್ಧೆ ವಿಶೇಷತೆಯಿಂದ ಕೂಡಿದೆ ಇಂತಹ ಸ್ಪರ್ಧೇಯನ್ನು ಆಯೋಜಿಸಿರುವ ಸಂಘಟಕರಿಗೆ ಅಭಿನಂದನೆಗಳು. ಇಂತಹ ಕಾರ್ಯಕ್ರಮದಲ್ಲಿ ನಮ್ಮ ಸಂಸ್ಥೆ ಕೂಡ ಭಾಗಿಯಾಗಿರುವುದು ನಮಗೆ ಹೆಮ್ಮೆಯ ಸಂಗತಿಯಾಗಿದ್ದು ಮುಂದೆಯೂ ಕೂಡ ತಮ್ಮ ಸಹಕಾರ ನೀಡುವುದಾಗಿ ಆಶ್ವಾಸನೆ ನೀಡಿದರು.
ಮದರ್ & ಡಾಟರ್ ಎ-ಲೈಕ್ ಸ್ಪರ್ಧೆಯ ವಿಜೇತರು
ಪ್ರಥಮ ಬಹುಮಾನ – ಥೆರೆಸಿಯಾ ಮತ್ತು ಶರಲ್ ನೊರೊನ್ಹಾ
ದ್ವಿತೀಯ ಬಹುಮಾನ – ಮಮತ ಮತ್ತು ಅನನ್ಯ ಐತಾಳ್
ತೃತೀಯ ಬಹುಮಾನ- ಚಂದ್ರಿಕಾ ಎಸ್ ನಾಯಕ್ ಮತ್ತು ಐಶ್ವರ್ಯಾ ಕೆ
ಇದೇ ವೇಳೆ ಮುಕುಂದ್ ಕಾಮತ್ ಹಾಗೂ 103 ವರ್ಷದ ಮೈಕಲ್ ಡಿಸೋಜಾ, ಮಂಗಳೂರು ಇವರುಗಳ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಸ್ಪರ್ಧೆಗೆ ಐಡಿಯಲ್ ಐಸ್ ಕ್ರೀಮ್, ವಿ4 ನ್ಯೂಸ್, ಹೋಟೇಲ್ ತಾಜ್ ಗೇಟ್ ವೆ, ಜೆರೋಸಾ ಕಂಪೆನಿ, ಬ್ರೈಡಲ್ & ಪಾರ್ಟಿ ಶಾಪ್, ರಿವರ್ ರೋಸ್ಟ್ ರಿಸೋರ್ಟ್ಸ್ ವಾಮಂಜೂರು, ಅರ್ಲಿ ಲರ್ನಿಂಗ್ ಸೆಂಟರ್, ಎಜೆ ಹಾಸ್ಪಿಟಲ್, ಕೆಎಮ್ ಸಿ ಆಸ್ಪತ್ರೆ, ಸಿಟಿ ಆಸ್ಪತ್ರೆ, ಸೋನಿ ಬ್ಯೂಟಿ ಪಾರ್ಲರ್, ಮರ್ಸಿ ಸೆಲೂನ್ & ಸ್ಪಾ, ಸಿಂಬ್ಲಿ ಸೌತ್ ರೆಸ್ಟೋರೆಂಟ್, ವಾಸ್ & ವಾಸ್ ಬೇಕರಿ, ಎಮ್ ಪಾಯಸ್ & ಸನ್ಸ್, ಕ್ರೇವ್ ಡೆಸರ್ಟ್ಸ್ & ಬೇಕ್ಸ್, ಡೆನಿಸ್ ಸ್ಪೋರ್ಟ್ಸ್, ಎ ಆರ್ ಡಿಸೋಜಾ & ಸನ್ಸ್, ದ ಲಾಸ್ಟ್ ಸ್ಟಾಪ್ ಮತ್ತು ರೆಟೊಕ್ಸ್ ಬಾರ್ & ಲೋಂಜ್ ತಮ್ಮ ಪ್ರಾಯೋಜಕತ್ವ ನೀಡಿ ಸಹಕರಿಸಿದ್ದವು.