ಮಧುಕರ ಶೆಟ್ಟಿಯವರನ್ನು ಮರೆತರೆ ದೇವರು ಕ್ಷಮಿಸಲ್ಲ- ಶಾಸಕ ಕಾಮತ್

Spread the love

ಮಧುಕರ ಶೆಟ್ಟಿಯವರನ್ನು ಮರೆತರೆ ದೇವರು ಕ್ಷಮಿಸಲ್ಲ- ಶಾಸಕ ಕಾಮತ್

ಮಧುಕರ್ ಶೆಟ್ಟಿಯವರು ತಮ್ಮ ಜೀವಿತಾವಧಿಯಲ್ಲಿ ಸೇವೆ ಸಲ್ಲಿಸುವಾಗ ಭ್ರಷ್ಟಾತಿಭ್ರಷ್ಟರನ್ನು ಬಯಲಿಗೆ ಎಳೆದು ತಮ್ಮ ಕರ್ತವ್ಯಕ್ಕೆ ನ್ಯಾಯ ಒದಗಿಸಿದ್ದಾರೆ. ಅವರು ಲೋಕಾಯುಕ್ತದಲ್ಲಿ ಎಸ್ಪಿಯಾಗಿದ್ದಾಗ ಅನೇಕ ಹಗರಣಗಳನ್ನು ಬಯಲಿಗೆ ತಂದಿದ್ದಾರೆ. ಅವರ ಹೆಸರನ್ನು ಜನ ಯಾವತ್ತೂ ಸ್ಮರಿಸಬೇಕು ಎನ್ನುವ ಕಾರಣಕ್ಕೆ ಅವರ ಹೆಸರನ್ನು ಮಂಗಳೂರಿನ ಪ್ರಮುಖ ರಸ್ತೆಗೆ ಇಡಬೇಕು ಎನ್ನುವುದು ನಮ್ಮ ಆಶಯ. ಇದರಲ್ಲಿ ಜೆಡಿಎಸ್ ನವರು ರಾಜಕೀಯ ಹುಡುಕುತ್ತಿದ್ದಾರೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಗೂ, ಮಧುಕರ ಶೆಟ್ಟಿಯವರ ಹೆಸರು ರಸ್ತೆಗೆ ಇಡುವುದಕ್ಕೂ ಯಾವುದೇ ಸಂಬಂಧವಿಲ್ಲ. ಮಧುಕರ ಶೆಟ್ಟಿಯವರು ರಾಜಕೀಯರಹಿತವಾಗಿ ಬದುಕಿದವರು. ಅವರ ಹೆಸರನ್ನು ರಸ್ತೆಗೆ ಇಡುವ ಮೂಲಕ ನಾವು ನಮ್ಮ ಕೈಲಾದ ಪ್ರಯತ್ನವನ್ನು ಮಾಡುತ್ತೇವೆ. ಜೆಡಿಎಸ್ ನವರಿಗೆ ಈ ಬಗ್ಗೆ ಆಕ್ಷೇಪ ಇದ್ದರೆ ಹೇಳಲಿ. ಮೂಲ್ಕಿ ಸುಂದರರಾಮ ಶೆಟ್ಟಿಯವರ ಹೆಸರನ್ನು ಒಂದು ರಸ್ತೆಗೆ ಇಡಲು ಯೋಗ್ಯತೆ ಇಲ್ಲದವರ ವಿರುದ್ಧ ಮಾತನಾಡದ ಜೆಡಿಎಸ್ ನವರು ದಕ್ಷ, ಪ್ರಾಮಾಣಿಕ ಪೊಲೀಸ್ ಅಧಿಕಾರಿ ಮಧುಕರ್ ಶೆಟ್ಟಿಯವರ ಹೆಸರನ್ನು ರಸ್ತೆಗೆ ಇಡಲು ಆಕ್ಷೇಪ ಎತ್ತಿರುವುದು ಅವರ ಮಾನಸಿಕತೆ ತೋರಿಸುತ್ತದೆ ಎಂದು ಶಾಸಕ ಕಾಮತ್ ಹೇಳಿದ್ದಾರೆ


Spread the love