ಮಧ್ಯಪ್ರದೇಶದ 7 ವರ್ಷದ ಬಾಲಕಿಯ ಅತ್ಯಾಚಾರ; ಆರೋಪಿಗೆ ಗಲ್ಲು ಶಿಕ್ಷೆ ನೀಡಲು ಮೂಡಬಿದಿರೆ ಎನ್.ಎಸ್.ಯು.ಐ ಆಗ್ರಹ
ಮೂಡಬಿದಿರೆ: ಮಧ್ಯಪ್ರದೇಶದ 7 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಬಳಿಕ ಆಕೆಯ ಕತ್ತು ಸೀಳಿದ ಪ್ರಕರಣವನ್ನು ಮೂಡಬಿದಿರೆ ಎನ್.ಎಸ್.ಯು.ಐ ಘಟಕ ತ್ರೀವ್ರವಾಗಿ ಖಂಡಿಸಿದ್ದು ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದೆ.
ಹೀಗೆ ದೇಶದ ವಿವಿಧ ರಾಜ್ಯಗಳಲ್ಲಿ ಮಹಿಳೆ ಮತ್ತು ಬಾಲಕಿಯರ ಅತ್ಯಾಚಾರ ಘಟನೆ ನಡೆದು ಇಡೀ ಸಮಾಜವೇ ತಲೆ ತಗ್ಗಿಸುವಂತೆ ಮಾಡಿವೆ. ಇಂಥ ಕೃತ್ಯಗಳನ್ನು ಎಸುಗುವ ಆರೋಪಿಗಳಿಗೆ ಕೂಡಲೇ ಗಲ್ಲು ಶಿಕ್ಷೆಯಾಗಬೇಕು.
ಅದರಲ್ಲೂ ಮಧ್ಯಪ್ರದೇಶದಲ್ಲಿ ಆಡಳಿತ ನಡೆಸುತ್ತಿರುವ ಶಿವರಾಜ್ ಸಿಂಗ್ ನೇತೃತ್ವದ ಸರ್ಕಾರ ಮಹಿಳೆಯರಿಗೆ ಹಾಗೂ ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡುವಲ್ಲಿ ಸಂಪೂರ್ಣ ವಿಪಲವಾಗಿದೆ.
ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಾ ಸಾಗುತ್ತಿರುವದನ್ನು ಗಮಿನಿಸಿದರೆ ನಾವು ಬದಕುತ್ತಿರುವುದು ನಾಗರಿಕ ಸಮಾಜದಲ್ಲೋ? ಅಥವಾ ರಾಕ್ಷಸ ಸಮಾಜದಲ್ಲೋ? ಎಂಬ ಅನುಮಾನ ದೇಶದಲ್ಲಿರುವ ಮಹಿಳೆಯರಿಗೆ ಕಾಡಲಾರಂಭಿಸಿದೆ. ಮಹಿಳೆಯರ ಮೇಲೆ ಒಂದಿಲ್ಲೊಂದು ದೌರ್ಜನ್ಯ ನಡೆಯುತ್ತಿರುವುದು ಅತ್ಯಂತ ವಿಷಾದನಿಯವಾಗಿದೆ.
ಈ ರೀತಿಯ ಕೊಲೆ, ಅತ್ಯಾಚಾರ, ಲೆಂಗಿಕ ಕಿರುಕುಳ, ಬ್ಲ್ಯಾಕ್‌ಮೇಲ್, ಹಿಂಸೆ ಮೊದಲಾದ ಲೆಂಗಿಕ ಕ್ರೌರ್ಯಗಳಿಗೆ ಕೇಂದ್ರ ಸರಕಾರವೇ ಅಂತ್ಯ ಹೇಳಬೇಕಿದೆ. ಅಧೀವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಸಾಮಾಜಿಕ ಬದ್ಧತೆ ಕಾಪಾಡುವ ಚರ್ಚೆ ನಡೆಯಬೇಕಿದೆ. ಪ್ರಬಲ ಕಾನೂನು ರಚನೆಗೆ ಮುಂದಾಗಿ ಮಹಿಳೆಯರಿಗೆ ರಕ್ಷಣೆ ನೀಡಬೇಕೆಂದು ಮೂಡಬಿದಿರೆ ಎನ್.ಎಸ್.ಯು.ಐ ಘಟಕದ ಉಸ್ತುವಾರಿ ಸುಚಿನ್ ಸಾಲ್ಯಾನ್ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.