ಮಧ್ಯಪ್ರದೇಶ: ಕೊರೋನಾ ಪರಿಹಾರ ನಿಧಿಗೆ ಪಾಕೆಟ್ ಮನಿ ಹಣ ನೀಡಿದ ಮಕ್ಕಳು
ಮಧ್ಯಪ್ರದೇಶ: ದೇಶವ್ಯಾಪಿ ಮಹಾಮಾರಿ ಕೊರೋನಾ ವೈರಸ್ ತನ್ನ ಕಬಂದ ಬಾಹುಗಳನ್ನು ವಿಸ್ತರಿಸಿದ್ದು ಇದರಿಂದ ದೇಶದ ಜನತೆ ತತ್ತರಿಸಿ ಹೋಗಿದ್ದಾರೆ. ಕೋರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ತಮ್ಮದೇ ರೀತಿಯಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿಕೊಂಡಿದ್ದು ಸರಕಾರಗಳು ವಿವಿಧ ರೂಪದಲ್ಲಿ ತಮ್ಮ ದೇಣಿಗೆಯನ್ನು ನೀಡುವಂತೆ ಮನವಿ ಮಾಡಿವೆ.
ಅದರಂತೆ ಮಧ್ಯಪ್ರದೇಶದ ನೀಮಾ ಜಿಲ್ಲೆಯ ಖೇಲಡಿ ಗ್ರಾಮದ ಇಬ್ಬರು ಪುಟಾಣಿ ಮಕ್ಕಳಾದ ಕೇಶವ್ ಮತ್ತು ದೇವ್ ರಾಜ್ ಪರಿಹಾರ್ ತಮ್ಮ ತಂದೆ ನೀಡಿದ ಪಾಕೆಟ್ ಮನಿ ಯನ್ನು ಕೊರೋನಾ ವೈರಸ್ ನಿಯಂತ್ರಣಕ್ಕೆ ಕೈಗೊಳ್ಳುವ ಪರಿಹಾರಕ್ಕೆ ದೇಣಿಗೆಯಾಗಿ ಸ್ಥಳೀಯ ಪೊಲೀಸ್ ಠಾಣೆಯ ಠಾಣಾಧಿಕಾರಿಗೆ ನೀಡಿದ್ದಾರೆ. ಮಕ್ಕಳ ಮಾದರಿ ಕಾರ್ಯವನ್ನು ಪೊಲೀಸರು ಶ್ಲಾಘಿಸಿದ್ದಾರೆ.