Home Mangalorean News Kannada News ಮಧ್ವಸಿದ್ಧಾಂತ ಪ್ರಸಾರ ವ್ಯಾಪಕವಾಗಬೇಕು,ಮಧ್ವಸಪ್ತ ಶತಮಾನೋತ್ಸವ ಸಮಾರೋಪದಲ್ಲಿ ಪುತ್ತಿಗೆ ಶ್ರೀ

ಮಧ್ವಸಿದ್ಧಾಂತ ಪ್ರಸಾರ ವ್ಯಾಪಕವಾಗಬೇಕು,ಮಧ್ವಸಪ್ತ ಶತಮಾನೋತ್ಸವ ಸಮಾರೋಪದಲ್ಲಿ ಪುತ್ತಿಗೆ ಶ್ರೀ

Spread the love

ಮಧ್ವಸಿದ್ಧಾಂತ ಪ್ರಸಾರ ವ್ಯಾಪಕವಾಗಬೇಕು.ಮಧ್ವಸಪ್ತ ಶತಮಾನೋತ್ಸವ ಸಮಾರೋಪದಲ್ಲಿ ಪುತ್ತಿಗೆ ಶ್ರೀ

ಭಾರತದಲ್ಲಿ ಮಧ್ವಾಚಾರ್ಯರು ಅವತರಿಸುವುದಕ್ಕೆ ಮೊದಲು ದೇಶದಲ್ಲಿ 21ಮತಾಚಾರ್ಯರು ಬಂದುಹೋಗಿದ್ದಾರೆ.ಆದರೆ ಭಗವಂತ ,ಪ್ರಪಂಚದ ವಿಚಾರದಲ್ಲಿ  ಅವರೆಲ್ಲ ಬಿಟ್ಟು ಹೋದ  ಅಸಂಖ್ಯ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದ್ದು ಮಾತ್ರವಲ್ಲ  ಇಂದು ಅತ್ಯಂತ  ವೈಜ್ಞಾನಿಕವಾದ ರೀತಿಯಲ್ಲಿ ದ್ವೈತ ಸಿದ್ಧಾಂತವನ್ನು ಮಂಡಿಸಿ ಶ್ರೇಷ್ಠ ದಾರ್ಶನಿಕರೆನಿಸಿದವರು ಮಧ್ವಾಚಾರ್ಯರು .

ಬಹಳ ಅಚ್ಚರಿಯ ಸಂಗತಿಯೆಂದರೆ ಇಂದು ಜಗತ್ತಿನ ಬಹುತೇಕ ಭೌತವಿಜ್ಞಾನಿಗಳು ತಮ್ಮಸಂಶೋಧನೆಗಳಲ್ಲಿ ಮಧ್ವರ ಸಿಧ್ದಾಂತದ ಸತ್ಯವನ್ನು ಕಂಡುಕೊಳ್ಳುತ್ತಿದ್ದಾರೆ. ಆದರೆ ಅಂಥಹ ಶ್ರೇಷ್ಠವೂ ಸರಳವೂ ಆದ ಸಿದ್ಧಾಂತವನ್ನು ದೇಶ ಮತ್ತು ಜಾಗತಿಕವಾಗಿ ಪ್ರಸಾರಮಾಡುವಲ್ಲಿ ನಾವು ಸ್ವಲ್ಪ ಹಿಂದೆ ಬಿದ್ದಿದ್ದೇವೆ.ಎಲ್ಲ ಮಾಧ್ವ ಮಠಾಧೀಶರು ವಿದ್ವಾಂಸರು ಗಮನ ಹರಿಸಿ ಕಾರ್ಯಪ್ರವೃತ್ತರಾಗಬೇಕ ಎಂದು ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥರು ಹೇಳಿದ್ದಾರೆ.

ಮಧಮಧ್ವ ಸಪ್ತಶತಮಾನೋತ್ಸವ ಹಾಗೂ ಶ್ರೀ ಮನ್ನ್ಯಾಯ ಸುಧಾ ಮಂಗಲೋತ್ಸವದ ಸಮಾರೋಪದಲ್ಲಿ ಅವರು ಸಂದೇಶ ನೀಡಿದರು .

ಮಂತ್ರಾಲಯ ಶ್ರೀ ಸುಬುಧೇಂದ್ರತೀರ್ಥರು ,ಪೇಜಾವರ ಶ್ರೀಗಳು ಸಂದೇಶ ನೀಡಿದರು .ಬನ್ನಂಜೆ ಶ್ರೀಗಳು ಪೇಜಾವರ ಕಿರಿಯ ಶ್ರೀಗಳು ಉಪಸ್ಥಿತರಿದ್ದರು . ವಿದ್ವಾಂಸರಾದ ವ್ಯಾಸನಕೆರೆ ಪ್ರಭಂಜನಾಚಾರ್ಯ ,ರಾಜಾ ಎಸ್ ಗಿರಿ ಆಚಾರ್ಯ ವಾದಿರಾಜಾಚಾರ್ಯರು ಉಪನ್ಯಾಸ ನೀಡಿದರು.

ಬದರೀನಾಥ ಆಚಾರ್ಯ ನಿರೂಪಿಸಿದರು.ದಿವಾನರಾದ ಎಂಎಂ ರಘುರಾಮಾಚಾರ್ಯ  ಉಪಸ್ಥಿತರಿದ್ದರು.


Spread the love

Exit mobile version