Home Mangalorean News Kannada News ಮನಪಾ ಅಧಿಕಾರಿಗಳಿಂದ ನಿಷೇಧಿತ ಕಾರ್ಯಾಚರಣೆ – 425 ಕೆಜಿ ಪ್ಲಾಸ್ಟಿಕ್ ವಶ

ಮನಪಾ ಅಧಿಕಾರಿಗಳಿಂದ ನಿಷೇಧಿತ ಕಾರ್ಯಾಚರಣೆ – 425 ಕೆಜಿ ಪ್ಲಾಸ್ಟಿಕ್ ವಶ

Spread the love

ಮನಪಾ ಅಧಿಕಾರಿಗಳಿಂದ ನಿಷೇಧಿತ ಕಾರ್ಯಾಚರಣೆ – 425 ಕೆಜಿ ಪ್ಲಾಸ್ಟಿಕ್ ವಶ

ಮಂಗಳೂರು : ಮಂಗಳೂರು ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ನಿಷೇಧಿತ ಪ್ಲಾಸ್ಟಿಕ್ ಬಳಕೆಯ ಪ್ರಮಾಣ ಹೆಚ್ಚಾಗಿರುವುದರಿಂದ, ಜೂನ್ 25 ರಂದು ಸೆಂಟ್ರಲ್ ಮಾರುಕಟ್ಟೆ ಬೀಬಿ ಆಲಾಬಿ ರಸ್ತೆ ಹಾಗೂ ಮೈದಾನ್ ಅಡ್ಡ ರಸ್ತೆಗಳಲ್ಲಿ ಸುಮಾರು 82 ಉದ್ದಿಮೆಗಳಿಗೆ ಭೇಟಿ ನೀಡಿ ನಿಷೇಧಿತ ಪ್ಲಾಸ್ಟಿಕ್ ಬಳಕೆ ಹಾಗೂ ಮಾರಾಟ ಬಗ್ಗೆ ಪರಿಶೀಲಿಸಲಾಯಿತು.

ಪರಿಶೀಲನೆಯ ಸಮಯದಲ್ಲಿ ಅಂದಾಜು 425 ಕೆಜಿ ನಿಷೇಧಿತ ಪ್ಲಾಸ್ಟಿಕ್ ಮಾರಾಟ ಮಾಡಲು ಉಪಯೋಗಿಸುತ್ತಿರುವುದು ಕಂಡು ಬಂದಿದ್ದು, ಸ್ಥಳದಲ್ಲಿಯೇ ಸದರಿ ನಿಷೇಧಿತ ಪ್ಲಾಸ್ಟಿಕ್ ಗಳನ್ನು ವಶಕ್ಕೆ ಪಡೆಯಲಾಯಿತು ಹಾಗೂ ಉದ್ದಿಮೆದಾರರಿಗೆ ನೋಟಿಸು ನೀಡಿ ದಂಡ ವಸೂಲಿ ಮಾಡಲಾಯಿತು.

ಸದರಿ ಕಾರ್ಯಾಚರಣೆಯನ್ನು ಉಪ ಆಯುಕ್ತರು (ಆಡಳಿತ) ಹಾಗೂ ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ನಡೆಸಲಾಯಿತು. ಪರಿಸರ ಅಭಿಯಂತರರು, ಆರೋಗ್ಯ ನೀರಿಕ್ಷಕರು ಹಾಗೂ ಮನಾಪಾ ಸಿಬಂದಿಗಳು ಕಾರ್ಯಾಚರಣೆಯಲ್ಲಿ ಕೈ ಜೋಡಿಸಿದರು.


Spread the love

Exit mobile version