ಮನಸ್ಸು ಮಾಡಿದರೆ ಯಾವುದೇ ಸಾಧನೆ ಕಷ್ಟವಾಗಲಾರದು: ಶ್ರೀನಿವಾಸ್

Spread the love

ಮನಸ್ಸು ಮಾಡಿದರೆ ಯಾವುದೇ ಸಾಧನೆ ಕಷ್ಟವಾಗಲಾರದು: ಶ್ರೀನಿವಾಸ್

ಚಿಕ್ಕಮಗಳೂರು : ವಿದ್ಯಾರ್ಥಿ ಜೀವನದಲ್ಲಿ ಇರುವವರು ಯಾವುದೇ ಸಾಧನೆ ಮಾಡಬೇಕು ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎನ್ನುವುದಾದರೆ ಮೊದಲು ಸಾಧನೆಯ ಬಗ್ಗೆ ಗುರಿ ಇಟ್ಟುಕೊಂಡು ಮನಸ್ಸು ಮಾಡಬೇಕು. ಮನಸ್ಸಿದರೆ ನಾವು ಅಂದುಕೊಂಡಿದ್ದನ್ನು ಸಾಧಿಸಬಹುದು ಎಂದು ಜಿಲ್ಲಾ ಮುಖ್ಯೋಪದ್ಯಾಯರ ಸಂಘದ ಕಾರ್ಯದರ್ಶಿಗಳಾದ ಶ್ರೀ. ಶ್ರೀನಿವಾಸ್ ಅವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದ್ದರು.

ಅವರು ಇಂದು ನಗರದ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿರುವ ಶ್ರೀ ಆದಿಚುಂಚನಗಿರಿ ಟ್ರಸ್ಟ್ (ರಿ). ಶ್ರೀ ಮಂಜುನಾಥೇಶ್ವರ ಶಾಲೆಯ ಆವರಣದಲ್ಲಿ ನಡೆದ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ 74 ನೇ ಜಯಂತೋತ್ಸವ ಮತ್ತು ಆದಿಚುಂಚನಗಿರಿ ಪ್ರೌಢಶಾಲೆಗಳ ಕ್ರೀಡೋತ್ಸವದ ಸಮಾರೋಪ ಸಮಾರಂಭದಲ್ಲಿ ಉದ್ಘಾಟನಾ ಭಾಷಣವನ್ನು ಮಾಡಿದ್ದರು. ವಿದ್ಯಾರ್ಥಿಗಳಿಗೆ ವರ್ಷಕೊಮ್ಮೆ ನಡೆಯುವ ಈ ಕ್ರೀಡಾಕೂಟ ಸಮಾರೋಪ ಸಮಾರಂಭ ಸಂತೋಷ ಮತ್ತು ಮಹತ್ವದಾಗಿದೆ. ಏಕೆಂದರೆ ತಮ್ಮ ಸಾಧನೆಯನ್ನು ಗುರುತಿಸಿ ಬಹುಮಾನ ಪಡೆಯುವ ದಿನ. ಬಹುಮಾನ, ಪಾರಿತೋಷಕಗಳು ಮಾಡಿದ ಶ್ರಮಕ್ಕೆ ನೀಡುವ ಪ್ರತಿಫಲವಾಗಿದ್ದು ವಿದ್ಯಾರ್ಥಿಗಳಿಗೆ ಸಂತಸವನ್ನು ತರುತ್ತದೆ ಎಂದರು.

ಮನಸ್ಸು ಮಾಡಿದರೆ ಯಾವುದೇ ಸಾಧನೆ ಕಷ್ಟವಾಗಲಾರದು ಎಂದ ಅವರು ಕಾರ್ಯಕ್ರಮದಲ್ಲಿ ಎಸ್.ಪಿ ರವಿ. ಚನ್ನಣ್ಣನವರ ಅವರ ಹಿತನುಡಿಗಳನ್ನು ಜ್ಞಾಪಿಸಿದ್ದರು. ರವಿ ಚನ್ನಣ್ಣನವರು ಒಂದೆಡೆ ಹೇಳುತ್ತಾರೆ ಓದುವ ಸಮಯದಲ್ಲಿ 25 ವರ್ಷ ತಮಗೆ ಬೇಕಾದ ವಿಧ್ಯೆಯನ್ನು ಶ್ರದ್ದೆಯಿಂದ ಕಲಿಯಬೇಕು. 25 ವರ್ಷ ಕಲಿತುಬಿಟ್ಟರೆ ಇನ್ನು 75 ವರ್ಷ ಜೀವನದಲ್ಲಿ ಸುಖವಾಗಿ ಇರಬಹುದು ಎಂದು. ಈ ಮಾತನ್ನು ವಿದ್ಯಾರ್ಥಿಗಳು ಬದುಕಲ್ಲಿ ಅಳವಡಿಸಿಕೊಳ್ಳಬೇಕು ಎಂದು ನುಡಿದ್ದರು. ಇದೇ ಸಂದರ್ಭದಲ್ಲಿ ಮಾತನಾಡಿದ ಎ.ಐ.ಟಿ ಇಂಜಿನಿಯರಿಂಗ್ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಡಾ: ಜಯದೇವ್ ಅವರು ವಿಧ್ಯಾರ್ಥಿ ಜೀವನ ಎಂಬುದು ಬದುಕಲ್ಲಿ ಬರುವ ಅತ್ಯಂತ ಅಮೂಲ್ಯ ಮತ್ತು ಸುಂದರವಾದ ಸಮಯ. ಅದನ್ನು ಯಾರು ಜೀವನದಲ್ಲಿ ಉಪಯೋಗಿಸಿಕೊಳ್ಳದೆ ಹಾಳು ಮಾಡಿಕೊಳ್ಳುತ್ತಾರೋ ಅವರು ಮತ್ತೆ ಉತ್ತಮ ಸ್ಥಾನಕ್ಕೆ ಹೋಗುವುದು ಕಷ್ಟ ಸಾಧ್ಯ. ಮತ್ತೆ ಆ ಜೀವನ ಬರಲಾರದು. ಅದಕ್ಕಾಗಿ ಕಲಿಯುವ ಪ್ರತಿಯೊಬ್ಬ ವಿಧ್ಯಾರ್ಥಿಯು ಸಮಯವನ್ನು ಹಾಳು ಮಾಡದೆ ಆಧುನಿಕ ಜಗತ್ತಿನ ಇಂಟರ್‍ನೆಟ್. ಮೊಬೈಲ್. ಇವುಗಳೀಗೆ ಸಮಯ ಹಾಳುಮಾಡದೆ ಕಲಿಕೆ ಮತ್ತು ಜೀವನದ ಗುರಿ ಇಟ್ಟುಕೊಂಡು ಶ್ರದೆಯಿಂದ ಕೆಲಸ ಮಾಡುತ್ತ ಬಂದರೆ ಯಶಸ್ಸು ಸಿಗುತ್ತದೆ ಎಂದು ಹೇಳಿದ್ದರು.

ಇದೇ ಸಂದರ್ಭದಲ್ಲಿ ವಿಶೇಷ ಅತಿಥಿಗಳಾಗಿ ಆಗಮಿಸಿದ ಚಿತ್ರದುರ್ಗದ ಜೂನಿಯರ್ ವಿಜ್ಞಾನಿ ರವೀಶ್ ಅವರು ಮಾತನಾಡಿ ವಿಜ್ಞಾನ ಮತ್ತು ಜ್ಞಾನ ಇವುಗಳೀಗೆ ಸಂಬಂದಪಟ್ಟ ವಿಷಯಗಳ ಬಗ್ಗೆ ತಿಳಿಸಿ ಹೇಳಿದ್ದರು. ಬಿ.ಜಿ.ಎಸ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಜೆ.ಜಿ ಸುರೇಂದ್ರ ವಿಧ್ಯಾರ್ಥಿಗಳೀಗೆ ಕಿವಿ ಮಾತು ಹೇಳಿದ್ದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷರ ಭಾಷಣ ಮಾಡಿದ ಬಿ.ಜಿ.ಎಸ್ ಶಾಲೆಯ ಮುಖ್ಯೋಪಧ್ಯಾಯರಾದ ಡಾ: ಜಿ.ಆರ್. ಚಂದ್ರಶೇಖರ್ ಅವರು ಮಕ್ಕಳು ಓದು-ಬರಹದ ಜೊತೆಗೆ ಕ್ರೀಡೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಇಂದು ಬಹುಮಾನ ಪ್ರಶಸ್ತಿ ಪಡೆದಿದ್ದೀರಿ. ಹೀಗೆ ಕಲಿಕೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಪರೀಕ್ಷೆಗಳಲ್ಲಿ ಪಾಸಾದರೆ ನೀವು ಅಂದುಕೊಂಡ ಸಾಧನೆಗಳನ್ನು ಮಾಡಬಹುದು. ಮನೆಯಲ್ಲಿ ತಂದೆ, ತಾಯಿ ಶಾಲೆಯಲ್ಲಿ ಗುರುಗಳು ಹೇಳಿಕೊಡುವ ಪಾಠಗಳನ್ನು ಹಿರಿಯರ ಸಲಹೆಗಳನ್ನು ಪಾಲಿಸುತ್ತ ಬಂದರೆ ಜೀವನದಲ್ಲಿ ಯಶಸ್ಸು ಗಳಿಸಬಹುದು ಎಂದು ಹೇಳಿದರು.

ಕಾರ್ಯಕ್ರಮ ಆರಂಭಕ್ಕೂ ಮುನ್ನ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಜಯಂತೋತ್ಸವ ಅಂಗವಾಗಿ ಶಾಲಾ ಮಕ್ಕಳು ಮೆರವಣಿಗೆ ನಡೆಸಿದ್ದರು. ಕಾರ್ಯಕ್ರಮದಲ್ಲಿ ರಂಜಿತ ಮತ್ತು ತಂಡದವರು ಪ್ರಾರ್ಥನೆ ಮಾಡಿದರು. ಶಿಕ್ಷಕಿ ಪಲ್ಲವಿ ನಿರೂಪಣೆ ಮಾಡಿದರು. ನಾಡಗೀತೆ ಗಾಯನ . ಭರತ ನಾಟ್ಯ, ಬಹುಮಾನ ವಿತರಣೆ ಗಣ್ಯರೀಗೆ, ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮಗಳು ನಡೆದವು.

ಕಾರ್ಯಕ್ರಮದಲ್ಲಿ ಎನ್. ಎಮ್ ರವೀಶ್, ಬಿ.ಜಿಎಸ್. ಪಿಯುಸಿ ಕಾಲೇಜ್ ಪ್ರಾಂಶುಪಾಲರಾದ ಸುರೇಂದ್ರ, ಮಂಉನಾಥೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಜಿ.ಆರ್. ಚಂದ್ರಶೇಖರ್, ಡಾ: ಎಸ್.ಆರ್ ವೈದ್ಯ, ಪೋಷಕರು , ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.


Spread the love