Spread the love
ಮನೆಯೊಂದು ಶಾಂತಿಧಾಮವಾಗಿರಬೇಕು: ರವಿ.ಎಂ. ನಾಯ್ಕ್
ಮ0ಗಳೂರು : ಮನೆಯಲ್ಲಿ ಶಾಂತಿ ನೆಲೆಸಿದ್ದಾರೆ ಮಾತ್ರ ನಾವು ಮಾಡುವ ಕಛೇರಿ ಕೆಲಸದಲ್ಲಿ ದಕ್ಷತೆ,ಉತ್ಪಾದಕತೆ ಸಾಧಿಸಲು ಸಾಧ್ಯ ಎಂದು ಮಂಗಳೂರಿನ ಕೌಟುಂಬಿಕ ನ್ಯಾಯಧೀಶ ರವಿ.ಎಂ.ನಾಯ್ಕ್ ಅಭಿಪ್ರಾಯ ಪಟ್ಟಿದ್ದಾರೆ.
ನಗರದ ಸರ್ಕಾರಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ನಡೆದ “ವಿಶ್ವಮಾನಸಿಕ ಆರೋಗ್ಯ ದಿನಾಚರಣೆ” ಕಾರ್ಯಕ್ರ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ‘ಅಧಿಕಾರವನ್ನು ಸೇವಾ ಸಂಸ್ಕತಿಯಿಂದ ಬಳಸಬೇಕು. ಮನುಕುಲದ ಸೇವೆಯೇ ಉತ್ತಮ ಸೇವೆ ಎಂದು ಅಧಿಕಾರಿಗಳು ಅರಿತಿರಬೇಕು. ಸೇವಾ ಮನೋಭಾವದಿಂದ ಕೆಲಸ ಮಾಡಬೇಕು. ಅಧಿಕಾರ ದರ್ಪದಿಂದ ಕೆಲಸಮಾಡಬಾರದು’ ಎಂದು ಹೇಳಿದರು.
ಕೆಲಸ ನಿರ್ವಹಿಸುವ ಸ್ಥಳದಲ್ಲಿ ಮಾನಸಿಕ ಆರೋಗ್ಯ ಬಹಳ ಮುಖ್ಯ.ಕೆಲಸ ಮಾಡುವ ಸ್ಥಳದಲ್ಲಿ ಸಿಬ್ಬಂದಿಗಳು ತಪ್ಪು ಮಾಡಿದಲ್ಲಿ ಎಲ್ಲರ ಮುಂದೆ ಕರೆದು ಬಯ್ಯುವುದು ಸರಿಯಲ್ಲ.ಇದರಿಂದ ಸಿಬ್ಬಂದಿ ಮನಸ್ಸಿಗೂ ನೋವಾಗುವ ಸಾಧ್ಯತೆ ಇದೆ.ಗಡಿ ಬಿಡಿಯಿಂದ ಕೆಲಸಮಾಡುವುದು, ಸಿಬ್ಬಂದಿ ಮೇಲೆ ರೇಗಾಡುವುದು ಸರಿಯಲ್ಲ.ಇದರಿಂದ ಅಧಿಕಾರಿಯು ಮಾನಸಿಕ ಅಸಮತೋಲಕ್ಕೆ ಒಳಗಾಗುತ್ತಾನೆ. ಅಧಿಕಾರಿಗಳಲ್ಲಿ ತಾಳ್ಮೆ, ಸಂಹಿಷ್ಣುತೆ ಇರಬೇಕು. ಎಂದು ರವಿ.ಎಂ. ನಾಯ್ಕ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಎಂ.ಆರ್.ರವಿ ಮಾತನಾಡುತ್ತಾ ‘ಮಾನಸಿಕ ಸಮಸ್ಯೆ ಎನ್ನುವುದು ಸ್ವಯಂಕೃತ ಅಪರಾಧ. ನಾವು ಇಂದು ಮಾನವೀಯ ಸಂಬಂಧಗಳಿಂದ, ಪ್ರಕೃತಿಯಿಂದ ದೂರವಾಗುತ್ತಿರುವುದು ಸಮಸ್ಯೆಗಳಿಗೆ ಮುಖ್ಯ ಕಾರಣವಾಗಿದೆ. ಇಂದಿನ ಶಿಕ್ಷಣ ವ್ಯವಸ್ಥೆಯು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ತುಂಬುವಲ್ಲಿ ವಿಫಲವಾಗಿದೆ.ಇಂದು ಎಲ್ಲರು ಕೀರ್ತಿ, ಹಣ ಸಂಪಾಧನೆಯ ಹಿಂದೆ ಬಿದ್ದಿದ್ದಾರೆ.ಹೆತ್ತವರು ಮಕ್ಕಳ ಜೊತೆಗೆ ಒಳ್ಳೆಯ ಸಮಯವನ್ನು ಕಳೆಯುವುದಿಲ್ಲ. ಮಕ್ಕಳ ಮೇಲೆ ಪ್ರೀತಿ ಇದ್ದರೆ ಸಾಲದು ಕಾಳಜಿನೂ ಇರಬೇಕು.ಮಾನಸಿಕ ಖಿನ್ನತೆಯಿಂದ ಬಳಲುವವರು ಆತ್ಮಹತ್ಯೆಗೆ ಶರಣಾಗುತ್ತಾರೆ.
ನಮ್ಮ ಜೀವನ ಶೈಲಿಯನ್ನು ಬದಲಾಯಿಸಬೇಕು.ಜೀವನವನ್ನು ನೋಡುವ ರೀತಿ ಬದಲಾಗಬೇಕು.ಸರಳ ಜೀವಂತ ಚಿಂತನೆ ಸೂತ್ರವನ್ನು ಪಾಲಿಸಬೇಕು.ಸೋಲನ್ನು ಸ್ವೀಕರಿಸ ಬೇಕು, ಪ್ರೀತಿಸೋದನ್ನು ಕಲಿಬೇಕು, ಬಿಟ್ಟುಕೊಡುವುದನ್ನು ಕಲಿಬೇಕು, ಇನ್ನೊಬ್ಬರನ್ನು ನೋಡಿ ಸಂತೋಷ ಪಡಬೇಕು. ಎಂದು ಡಾ. ರವಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ.ಕೆ.ಬಿ.ಜಗದೀಶ ಮಾತನಾಡುತ್ತಾ ಆಧುನಿಕ ತಂತ್ರಜ್ಞಾನದಿಂದ ಮಾನಸಿಕ ಕಾಯಿಲೆ ಹೆಚ್ಚಾಗಿದೆ.ಮಾನಸಿಕ ರೋಗಿಗಳಿಗೆ ವೈದ್ಯರು ಕೇವಲ 25 ಶೇಕಡರಷ್ಟು ಮಾತ್ರ ಚಿಕಿತ್ಸೆ ನೀಡುತ್ತಾರೆ, ಬಾಕಿ 75 ಶೇಕಡ ರಷ್ಟು ಮನೆಯವರ ಆರೈಕೆಯಿಂದ ಗುಣಮುಖವಾಗಲು ಸಾಧ್ಯ. ಇಂದು ಸಮಾಜದಲ್ಲಿ ದೈಹಿಕ ಆರೋಗ್ಯ,ಮಾನಸಿಕ ಆರೋಗ್ಯ,ಆಧ್ಯಾತ್ಮಿಕ ಆರೋಗ್ಯ ಇಲ್ಲದಾಗಿದೆ.ಸಮಾಜಿಕ ಆರೋಗ್ಯ ಚೆನ್ನಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವೆನ್ಲಾಕ್ ಅಧೀಕ್ಷಕಿ ಡಾ.ರಾಜೇಶ್ವರಿ ದೇವಿ, ವಕೀಲರ ಸಂಘದ ಆಧ್ಯಕ್ಷ ಎಂ,ಆರ್,ಬಲ್ಲಾಳ್, ಎಸ್,ಡಿ.ಎಂ ಕಾನೂನು ಕಾಲೇಜು, ಕಾನೂನು ನೆರವು ವಿಭಾಗ ಉಪ ಪ್ರಾಂಶುಪಾಲರು ಮತ್ತು ಮುಖ್ಯಸ್ಥರು ಡಾ.ಬಾಲಿಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಲ್ಲನಗೌಡ ಮತ್ತು ಡಾ.ಶರೀಫ್ ಉಪಸ್ಥಿತರಿದ್ದರು.
Spread the love