ಮನೆ ಕಳ್ಳತನ ಪ್ರಕರಣದ ಆರೋಪಿ ಬಂಧನ, ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳು ವಶಕ್ಕೆ 

Spread the love

ಮನೆ ಕಳ್ಳತನ ಪ್ರಕರಣದ ಆರೋಪಿ ಬಂಧನ, ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳು ವಶಕ್ಕೆ 

ಮಂಗಳೂರು: ನಗರದ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾರ್ನಾಡು ಗ್ರಾಮದ ಲಿಂಗಪ್ಪಯ್ಯಕಾಡು ಬಿಜಾಪುರ ಕಾಲನಿ ಎಂಬಲ್ಲಿ ಮನೆಯೊಂದರಿಂದ ಚಿನ್ನಾಭರಣ ಕಳ್ಳತನ ಮಾಡಿದ ಆರೋಪಿಯನ್ನು ಮುಲ್ಕಿ ಪೊಲೀಸರು ದಸ್ತಗಿರಿ ಮಾಡಿ ಕಳ್ಳತನ ಮಾಡಿದ ಲಕ್ಷಾಂತರ ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.

ಬಂಧಿತ ಆರೋಪಿಯನ್ನು ಬಿಜಾಪುರ ಜಿಲ್ಲೆ ದೇವರ ಹಿಪ್ಪರಗಿ ಗ್ರಾಮದ ಅರುಣ್ (20) ಎಂದು ಗುರುತಿಸಲಾಗಿದೆ.

ದಿನಾಂಕ:06-11-2024 ರಂದು ಹಗಲು ವೇಳೆ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾರ್ನಾಡು ಗ್ರಾಮದ ಲಿಂಗಪ್ಪಯ್ಯಕಾಡು ಬಿಜಾಪುರ ಕಾಲನಿ ಎಂಬಲ್ಲಿರುವ ಶ್ರೀಮತಿ ಮಲ್ಲಮ್ಮ ಎಂಬವರ ಮನೆಯ ಹಿಂಬಾಗಿಲಿನ ಬೀಗವನ್ನು ತೆರೆದು ಮನೆಯ ಒಳಗಿದ್ದ ಸುಮಾರು 64.200 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿದ ಬಗ್ಗೆ ಮುಲ್ಕಿ ಠಾಣೆಗೆ ದಿನಾಂಕ:07-11-2024 ರಂದು ಶ್ರೀಮತಿ ಮಲ್ಲಮ್ಮ ಎಂಬವರು ನೀಡಿದ ದೂರಿನಂತೆ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಈ ಪ್ರಕರಣದ ಆರೋಪಿಯನ್ನು ಮುಲ್ಕಿ ಶಾಣಾ ಪೊಲೀಸ್ ನಿರೀಕ್ಷಕ ವಿದ್ಯಾಧರ ಡಿ ಬಾಯ್ಕೆರಿಕರ್ ಮತ್ತು ಸಿಬ್ಬಂದಿಗಳು ಈ ದಿನ ದಿನಾಂಕ: 08-11-2024 ರಂದು ದಸ್ತಗಿರಿ ಮಾಡಿದ್ದು ಆರೋಪಿಯಿಂದ ಪ್ರಕರಣದ ಕಳವಿಗೆ ಸಂಬಂಧಿಸಿದ ಒಟ್ಟು 64.200 ಗ್ರಾಂ ಚಿನ್ನಾಭರಣಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.ಅದರ ಒಟ್ಟು ಮೌಲ್ಯ 2,56,000/- ರೂ ಆಗಿರುತ್ತದೆ.

ಈ ಪತ್ತೆ ಕಾರ್ಯವನ್ನು ಮಂಗಳೂರು ನಗರದ ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಅನುಪಮ್ ಅಗರವಾಲ್, ಐ.ಪಿ.ಎಸ್ ರವರ ಮಾರ್ಗದರ್ಶನದಂತೆ, ಕಾನೂನು & ಸುವ್ಯವಸ್ಥೆ ವಿಭಾಗದ ಡಿಸಿಪಿ ಶ್ರೀ ಸಿದ್ದಾರ್ಥ ಗೋಯಲ್ ಐ.ಪಿ.ಎಸ್ ಮತ್ತು ಅಪರಾಧ & ಸಂಚಾರ ವಿಭಾಗದ ಡಿಸಿಪಿ ಶ್ರೀ ದಿನೇಶ್ ಕುಮಾರ್ ನಿರ್ದೇಶನದಂತೆ, ಮಂಗಳೂರು ಉತ್ತರ ವಿಭಾಗದ ಎ.ಸಿ.ಪಿ. ಶ್ರೀ ಶ್ರೀಕಾಂತ್ ರವರ ನೇತೃತ್ವದಲ್ಲಿ ಮುಲ್ಕಿ ಠಾಣಾ ನಿರೀಕ್ಷಕರಾದ ವಿದ್ಯಾಧರ ಡಿ ಬಾಯ್ಕರಿಕರ್ ರವರು ಕಾರಚರಣೆ ನಡೆಸಿದ್ದು ಈ ಕಾರಚರಣೆಯಲ್ಲಿ ಮುಲ್ಕಿ ಪೊಲೀಸ್ ಠಾಣೆಯ ಪಿ.ಎಸ್.ಐ. ಅನಿತಾ ಹೆಚ್.ಬಿ, ಎ.ಎಸ್.ಐ ಹರಿಶೇಖರ್, ಹೆಡ್ ಕಾನ್ ಸ್ಟೇಬಲ್ ಶಶಿಧರ, ಚಂದ್ರಶೇಖರ್, ಜಾಯ್ಸ್ ಸುಚಿತಾ ಡಿ ಸೋಜ, ಕಾನ್ ಸ್ಟೇಬಲ್ ಗಳಾದ ಸುನೀಲ್ ಮತ್ತು ಮ.ಪಿ.ಸಿ. ಚಿತ್ರಾ ರವರು ಸಹಕರಿಸಿರುತ್ತಾರೆ.


Spread the love