Home Mangalorean News Kannada News ‘ಮನೆ ಮನೆಗೆ ಮದ್ಯ : ಸಚಿವರು ಬಾಯಿ ತಪ್ಪಿ ಹೇಳಿಕೆ ನೀಡಿದ್ದಾರೆ – ಸಂಸದ ಎಸ್.ಮುನಿಸ್ವಾಮಿ

‘ಮನೆ ಮನೆಗೆ ಮದ್ಯ : ಸಚಿವರು ಬಾಯಿ ತಪ್ಪಿ ಹೇಳಿಕೆ ನೀಡಿದ್ದಾರೆ – ಸಂಸದ ಎಸ್.ಮುನಿಸ್ವಾಮಿ

Spread the love

‘ಮನೆ ಮನೆಗೆ ಮದ್ಯ : ಸಚಿವರು ಬಾಯಿ ತಪ್ಪಿ ಹೇಳಿಕೆ ನೀಡಿದ್ದಾರೆ – ಸಂಸದ ಎಸ್.ಮುನಿಸ್ವಾಮಿ

ಕೋಲಾರ: ‘ಅಬಕಾರಿ ಸಚಿವ ಎಚ್.ನಾಗೇಶ್ ಮನೆ ಮನೆಗೆ ಮದ್ಯ ಕಲ್ಪಿಸುವ ಮೂಲಕ ಸರ್ಕಾರದ ಅದಾಯ ಹೆಚ್ಚಿಸಲಾಗುವುದು ಎಂದು ಬಾಯಿ ತಪ್ಪಿ ಹೇಳಿಕೆ ನೀಡಿದ್ದಾರೆ’ ಎಂದು ಸಂಸದ ಎಸ್.ಮುನಿಸ್ವಾಮಿ ಸಚಿವರನ್ನು ಸಮರ್ಥಿಸಿಕೊಂಡರು.

ಇಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸಚಿವರು ಹೇಳಿಕೆ ನೀಡುವಾಗ ಅಚಾತುರ್ಯವಾಗಿದೆ. ಹೀಗಾಗಿ ಹೇಳಿಕೆ ತಿದ್ದಿಕೊಳ್ಳಬೇಕು. ಸರ್ಕಾರಕ್ಕೆ ಆದಾಯ ಬರುವಂತೆ ಮಾಡಲು ಬೇಕಾದಷ್ಟು ಮಾರ್ಗಗಳಿವೆ’ ಎಂದರು.

‘ಮನೆ ಮನೆಗೆ ಮದ್ಯ ಪೂರೈಸುವ ವರ್ಗದ ಪಕ್ಷ ನಮ್ಮದಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ರೈತ ನಾಯಕರು. ಮದ್ಯ ಬಳಕೆ ಕಡಿಮೆ ಮಾಡುವ ದೃಷ್ಟಿಯಲ್ಲಿ ಬಿಜೆಪಿ, ಪ್ರಧಾನಿ ಮೋದಿ ಮತ್ತು ಯಡಿಯೂರಪ್ಪ ಸರ್ಕಾರ ಯೋಚನೆ ಮಾಡುತ್ತದೆ’ ಎಂದು ಹೇಳಿದರು.

‘ಮದ್ಯ ವ್ಯಸನಿಗಳ ಮನೆ ಬಾಗಿಲಿಗೆ ಮದ್ಯ ಸರಬರಾಜು ಮಾಡಿದರೆ ಅವರು ಮನೆಯಿಂದ ಹೊರ ಬರುವುದೇ ಇಲ್ಲ. ಅಲ್ಲಿಯೇ ಕುಡಿದುಕೊಂಡು ಕುಡುಕರ ಸಂಖ್ಯೆ ಹೆಚ್ಚಾಗುತ್ತದೆ. ತಪ್ಪುಹೇಳಿಕೆ ಬಗ್ಗೆ ಅಬಕಾರಿ ಸಚಿವರೇ ಸ್ಪಷ್ಟನೆ ನೀಡುತ್ತಾರೆ’ ಎಂದು ವಿವರಿಸಿದರು.


Spread the love

Exit mobile version