Home Mangalorean News Kannada News ಮರಳುಗಾರಿಕೆ ಕಥಾಹಂದರದ ಕಿರುಚಿತ್ರ ‘ಸಂಚಲನ’ ಬಿಡುಗಡೆ

ಮರಳುಗಾರಿಕೆ ಕಥಾಹಂದರದ ಕಿರುಚಿತ್ರ ‘ಸಂಚಲನ’ ಬಿಡುಗಡೆ

Spread the love

ಮರಳುಗಾರಿಕೆ ಕಥಾಹಂದರದ ಕಿರುಚಿತ್ರ ‘ಸಂಚಲನ’ ಬಿಡುಗಡೆ

ಕುಂದಾಪುರ: ಮರಳುಗಾರಿಕೆ ಕಥಾ ಹಂದರವನ್ನು ಒಳಗೊಂಡ ಕಿರುಚಿತ್ರ ಸಂಚಲನ ಸಪ್ಟೆಂಬರ್ 2 ರಂದು ಕುಂದಾಪುರದ ಭಂಡಾಕಾರ್ಸ್ ಕಾಲೇಜಿನಲ್ಲಿ ಬಿಡುಗಡೆಗೊಂಡಿತು.

ಮಣಿಪಾಲ ಎಜ್ಯುಕೇಶನ್ ಇದರ ಎಚ್ ಶಾಂತಾರಾಮ್, ಉದ್ಯಮಿ ಹಾಗೂ ಉಡುಪಿ ಜಿಲ್ಲಾ ವಿಶ್ವ  ಹಿಂದೂ ಪರಿಷತ್ ಇದರ ಅಧ್ಯಕ್ಷ ವಿಲಾಸ್ ನಾಯಕ್, ಹೆಸರಾಂತ ನ್ಯಾಯವಾದಿ ಎ.ಎಸ್ ಎನ್ ಹೆಬ್ಬಾರ್, ಉದ್ಯಮಿ ಕಾರ್ತಿಕೇಯ ಮಧ್ಯಸ್ಥ ಹಾಗೂ ಇತರರ ಉಪಸ್ಥಿತಿಯಲ್ಲಿ ಸಂಚಲನ ಕಿರುಚಿತ್ರ ಬಿಡುಗಡೆಗೊಳಿಸಿದರು.

ಕುಂದಾಪುರ ಉಡುಪಿ ಸುತ್ತಮುತ್ತಲಿನ ಮರಳು ಸಮಸ್ಯೆ ಅದರಲ್ಲೂ ಅಕ್ರಮ ಮರಳುಗಾರಿಕೆಯಿಂದ ಚಿತ್ರದ ನಾಯಕಿ ಹೇಗೆ ಮರಳು ಮಾಫಿಯಾದವರ ಬಲೆಗೆ ಸಿಲುಕಿ ಸಾವನಪ್ಪುತ್ತಾಳೆ ಎನ್ನುವ ಕುರಿತು ಚಿತ್ರವನ್ನು ರಚಿಸಲಾಗಿದೆ. ಚಿತ್ರದ ನಾಯಕಿ ಒರ್ವ ಪತ್ರಕರ್ತ ವಿದ್ಯಾರ್ಥಿನಿಯಾಗಿ ಮರಳುಗಾರಿಕೆಯ ಬಗ್ಗೆ ಅನ್ವೇಷಣೆಗೆ ತೊಡಗಿದಾಗ ಅದರ ಬಲೆಗೆ ಬಿದ್ದು ಸಾವನಪ್ಪಿದಾಗ ಆಕೆಯ ಸಾವಿನ ರಹಸ್ಯವನ್ನು ಚಿತ್ರದ ನಾಯಕ ಯಾವ ರೀತಿಯಲ್ಲಿ ಪತ್ತೆ ಹಚ್ಚುತ್ತಾನೆ ಎನ್ನುವುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಇಡೀ ಚಿತ್ರವನ್ನ ಕರಾವಳಿಯಲ್ಲಿ ಕಳೆದ ಒಂದುವರೆ ವರ್ಷದಿಂದ ಅನುಭವಿಸಿಕೊಂಡು ಬಂದಿರುವ ಮರಳುಗಾರಿಕೆ ಸಮಸ್ಯೆ ಬಡವರ ಕಷ್ಟ, ಅದೇ ರೀತಿ ಹಣವಂತಿರಿಗೆ ಎಷ್ಟೇ ಹಣಕ್ಕೂ ಮರಳು ಸಿಗುವ ವ್ಯವಸ್ಥೆ ಈ ಎಲ್ಲಾ ನೈಜ ಘಟನೆಯ ಸುತ್ತ ಚಿತ್ರ ಕಥೆಯನ್ನು ರಚಿಸಲಾಗಿದೆ.

ಸಂಚಲನ ಕಿರುಚಿತ್ರವು 32 ನಿಮಿಷಗಳಿಗೆ ಸೀಮೀತವಾಗಿದ್ದು,  ಚಿತ್ರವು ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ನಿರ್ಮಿಸಲಾಗಿದ್ದು, ಯೂಟ್ಯೂಬ್ ಮೂಲಕ ಜನರು ಅದನ್ನು ವೀಕ್ಷಿಸಬಹುದಾಗಿದೆ.  ಚಿತ್ರವನ್ನು 7 ದಿನಗಳು ಸತತ ಚಿತ್ರೀಕರಣ ಮಾಡಿದ್ದು, ಕುಂದಾಪುರ, ಬೈಂದೂರು, ತೂದಳ್ಳಿ ಪ್ರದೇಶದಲ್ಲಿ ಚಿತ್ತೀಕರಿಸಲಾಗಿದೆ.

ಕೆಲವು ತಿಂಗಳುಗಳ ಹಿಂದೆ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಗಳ ಮೇಲೆ ಮರಳು ಮಾಫಿಯಾದವರು ನಡೆಸಿದ ಧಾಳಿಯಿಂದ ಪ್ರೇರಿತರಾಗಿ ಈ ಚಿತ್ರಕ್ಕೆ ಕಥೆಯನ್ನು ಬರೆದಿದ್ದು, ಇದರಲ್ಲಿ ಜಿಲ್ಲಾಧಿಕಾರಿಗಳ ಬದಲಾಗಿ ಸದಾ ಮರಳು ಮಾಫಿಯಾದ ವಿರುದ್ದ ಧೈರ್ಯದಿಂದ ಸುದ್ದಿಯನ್ನು ಸಮಾಜಕ್ಕೆ ತಲುಪಿಸಿವ ಪತ್ರಕರ್ತರನ್ನು ಕೇಂದ್ರಿಕರಿಸಿ ನಿರ್ಮಿಸಲಾಗಿದೆ.

ಚಿತ್ರವು ರಾಘವೇಂದ್ರ ಶೇರಿಗಾರ್ ನೇತೃತ್ವದ ಇಂಪನಾ ಪ್ರೋಡಕ್ಷನ್ ಮೂಲಕ ನಿರ್ಮಾಣಗೊಂಡಿದ್ದು, ರಥಿಕ್ ಮುರ್ಡೇಶ್ವರ ನಾಯಕ ನಟನಾಗಿ, ಶ್ರೀನಿಧಿ ಶೆಟ್ಟಿ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ನಿರ್ದೇಶನ, ಸಂಭಾಷಣೆ, ಚಿತ್ರಕಥೆಯನ್ನು ಅರ್ಜುನ್ ದಾಸ್ ಮಾಡಿದ್ದು, ಸುನಿಲ್, ನಾಗರಾಜ್ ಆಚಾರ್ಯ, ರಾಘವ್ ಸಹನಿರ್ದೇಶನ ನೀಡಿದ್ದಾರೆ. ಚಿತ್ರಕ್ಕೆ ಸಂಗೀತವನ್ನು ಸಂದೇಶ್ ಮಂಗಳೂರು ಮತ್ತು ಜಯಂತ್ ಐತಾಳ್ ನೀಡಿದ್ದು, ಧ್ವನಿಯನ್ನು ಡ್ಯಾನಿ ಶೆಲ್ ಡನ್ ಒದಗಿಸಿದ್ದಾರೆ. ಧ್ವನಿಗ್ರಹಣವನ್ನು ರಿದ್ದಿ ಕ್ರಿಯೇಶನ್ನಸ್ ಉಡುಪಿ, ಸಂಕಲನ ವಿನಾಯಕ್ ಮಲ್ಯ, ಕಲೆ ಮತ್ತು ವಿನ್ಯಾಸವನ್ನು, ಸಿರಾಜ್ ಕೋಟೆಶ್ವರ್, ರಾಧಾಕೃಷ್ಣ, ಛಾಯಗ್ರಹಣ ಅಕ್ಷಯ್ ಕುಮಾರ್ ಮಾಡಿದ್ದಾರೆ. ಚಿತ್ರಕ್ಕೆ ಹಿನ್ನಲೆ ಗಾಯಕರಾಗಿ ಜ್ಯೋತಿ ಕಾಮತ್ ಕುಂಭಾಶಿ, ದೀಪಿಕಾ ರಾಘವೇಂದ್ರ, ಸಾಹಸದಲ್ಲಿ ಮಂಜುನಾಥ ಕೋಟೇಶ್ವರ ಸಹಕರಸಿದ್ದಾರೆ.

 


Spread the love

Exit mobile version