ಮರಳು ಲಾರಿಗಳಿಗೆ ಜಿ.ಪಿ.ಎಸ್. ಕಡ್ಡಾಯ

Spread the love

ಮರಳು ಲಾರಿಗಳಿಗೆ ಜಿ.ಪಿ.ಎಸ್. ಕಡ್ಡಾಯ

ಮಂಗಳೂರು : ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಾವಳಿ 1994 ರ ನಿಯಮಗಳಂತೆ ಮರಳು ಸಾಗಾಟ ಮಾಡುವ ವಾಹನಗಳಿಗೆ ಕಡ್ಡಾಯವಾಗಿ ಜಿ.ಪಿ.ಎಸ್. ಸಾಧನ ಅಳವಡಿಸಬೇಕಾಗಿರುತ್ತದೆ. ಅದರಂತೆ ಜಿಲ್ಲಾಧಿಕಾರಿಗಳು ಫೆಬ್ರವರಿ 08 ರಂದು ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆಯನ್ನು ನಡೆಸಿದ್ದು, ಜಿಲ್ಲೆಯಲ್ಲಿ ಮರಳು ಸಾಗಾಟ ಮಾಡುವ ವಾಹನಗಳಿಗೆ ಕಡ್ಡಾಯವಾಗಿ ಜಿ.ಪಿ.ಎಸ್. ಸಾಧನ ಅಳವಡಿಸಲು ಮತ್ತೊಮ್ಮೆ ಕಾಲಾವಕಾಶ ನೀಡಲಾಗಿರುತ್ತದೆ. ಜಿ.ಪಿ.ಎಸ್. ಸಾಧನ ಅಳವಡಿಸದೆ ಮರಳು ಸಾಗಾಟ ಮಾಡುವ ವಾಹನಗಳು ಕಂಡುಬಂದಲ್ಲಿ ಅಂತಹ ವಾಹನಗಳನ್ನು ನಿಯಮಾವಳಿಯಂತೆ ಮುಟ್ಟುಗೋಲು ಹಾಕಿಕೊಂಡು ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು.

ಜಿ.ಪಿ.ಎಸ್. ಅಳವಡಿಸುವ ಸಂಬಂಧ ಈಗಾಗಲೇ ಟೆಲಿಮ್ಯಾಟಿಕ್ಸ್4ಯು ಸರ್ವೀಸಸ್ ಪ್ರೈ. ಲಿಮಿಟೆಡ್ ಸಂಸ್ಥೆಗೆ ಕಾರ್ಯಾದೇಶ ನೀಡಲಾಗಿದ್ದು, ಪತ್ರಿಕೆಯಲ್ಲಿ ಪ್ರಕಟಗೊಂಡ ದಿನಾಂಕದಿಂದ ಒಂದು ವಾರದೊಳಗೆ ಜಿಲ್ಲೆಯಲ್ಲಿ ಮರಳು ಸಾಗಾಟ ಮಾಡುವ ವಾಹನಗಳಿಗೆ ಜಿ.ಪಿ.ಎಸ್. ಸಾಧನವನ್ನು ಅಳವಡಿಸಲು ಟೆಲಿಮ್ಯಾಟಿಕ್ಸ್4ಯು ಸರ್ವೀಸಸ್ ಪ್ರೈ. ಲಿಮಿಟೆಡ್, ಆದಿ ಶಾಹಶಾ ಕಾಂಪ್ಲೆಕ್ಸ್, ಬಿಕರ್ನಕಟ್ಟೆ, ನಿಯರ್ ಕೈಕಂಬ ಪೆಟ್ರೋಲ್ ಪಂಪು, ಮಂಗಳೂರು-575005. ಮೊಬೈಲ್ ನಂಬ್ರ: 9743862000, 7975660747, 8722141689 ವಿಳಾಸವನ್ನು ಸಂಪರ್ಕಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಛೇರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಮಂಗಳೂರು ದೂರವಾಣಿ ಸಂಖ್ಯೆ 0824-2429932 ನ್ನು ಸಂಪರ್ಕಿಸಲು ಉಪನಿರ್ದೇಶಕರು ಹಾಗೂ ಸದಸ್ಯ ಕಾರ್ಯದರ್ಶಿ, ಜಿಲ್ಲಾ ಮರಳು ಉಸ್ತುವಾರಿ ಸಮಿತಿ, ದ.ಕ ಜಿಲ್ಲೆ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.


Spread the love