ಮರಳು ವಾಹನಗಳಿಗೆ ಜಿ.ಪಿ.ಎಸ್: 12 ರಂದು ತಾಂತ್ರಿಕ ಬಿಡ್
ಉಡುಪಿ: ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಸಾಮಾನ್ಯ ಮರಳು ಸಾಗಾಣಿಕೆ ಮಾಡುವ ವಾಹನಗಳಿಗೆ ಮತ್ತು ಮರಳು ತೆಗೆಯುವ ದೋಣಿಗಳಿಗೆ ಈಗಾಗಲೇ ಅಳವಡಿಸಲಾಗಿರುವ ಜಿ.ಪಿ.ಎಸ್ ಸಾಧನಗಳ ವಾರ್ಷಿಕ ನಿರ್ವಹಣೆ, ವಾಹನ ಮತ್ತು ಚಲನ ವಲನ ಸಂಪೂರ್ಣ ವರದಿ ಮಾಡುವುದು ಮತ್ತು ನಿಯಂತ್ರಿಸುವುದು.
ಜಿಯೋ ಪೆನ್ಸಿಂಗ್ ಹಾಗೂ ಜಿ.ಪಿ.ಎಸ್. ಪ್ಲಾಟ್ ಫಾರಂ ಮೂಲಕ ಪರವಾನಿಗೆಯನ್ನು ಸೃಜಿಸುವ ಸಂಬಂಧ ಸೇವೆಗಳನ್ನು (ಸರ್ವೀಸ್) ನೀಡಲು ಆಸಕ್ತ ಸಂಸ್ಥೆಗಳು ಭಾಗವಹಿಸುವ ಬಗ್ಗೆ ನವೆಂಬರ್ 9 ರಂದು ತಾಂತ್ರಿಕ ಬಿಡ್ ತೆರೆಯಲು ದಿನಾಂಕ ನಿಗಧಿಪಡಿಸಲಾಗಿದ್ದು, ಕಾರಣಾಂತರಗಳಿಂದ ನವೆಂಬರ್ 12 ರಂದು ಬೆಳಿಗ್ಗೆ 11 ಗಂಟೆಗೆ ತಾಂತ್ರಿಕ ಬಿಡ್ ತೆರೆಯಲು ನಿಗಧಿಪಡಿಸಲಾಗಿರುತ್ತದೆ ಎಂದು ಹಿರಿಯ ಭೂವಿಜ್ಞಾನಿ/ ಸದಸ್ಯ ಕಾರ್ಯದರ್ಶಿ, ಜಿಲ್ಲಾ ಮರಳು ಉಸ್ತುವಾರಿ ಸಮಿತಿ, ಉಡುಪಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.