Home Mangalorean News Kannada News ಮರಳು ಸಮಸ್ಯೆ : ಬುಧವಾರದಿಂದ ಜಿಲ್ಲೆಯಲ್ಲಿ 158 ಜನರಿಗೆ ಲೀಸ್ ನೀಡುವ ಪ್ರಕ್ರಿಯೆ ಆರಂಭ –...

ಮರಳು ಸಮಸ್ಯೆ : ಬುಧವಾರದಿಂದ ಜಿಲ್ಲೆಯಲ್ಲಿ 158 ಜನರಿಗೆ ಲೀಸ್ ನೀಡುವ ಪ್ರಕ್ರಿಯೆ ಆರಂಭ – ಶಾಸಕ ರಘುಪತಿ ಭಟ್

Spread the love

ಮರಳು ಸಮಸ್ಯೆ : ಬುಧವಾರದಿಂದ ಜಿಲ್ಲೆಯಲ್ಲಿ 158 ಜನರಿಗೆ ಲೀಸ್ ನೀಡುವ ಪ್ರಕ್ರಿಯೆ ಆರಂಭ – ಶಾಸಕ ರಘುಪತಿ ಭಟ್

ಉಡುಪಿ: ಕಳೆದ ಎರಡು ವರ್ಷಗಳಿಂದ ಉಡುಪಿ ಜಿಲ್ಲೆಯಲ್ಲಿ ಮರಿಚಿಕೆ ಆಗಿದ್ದ ಮರಳಿನ ಸಮಸ್ಯೆ ಕೊನೆಗೂ ಮುಕ್ತಿ ಸಿಕ್ಕಿದ್ದು ಸೆ. 18 ಬುಧವಾರದಿಂದ ಗಣಿ ಇಲಾಖೆ ಪರವಾನಿಗೆದಾರರಿಗೆ ಲೀಸ್ ನೀಡುವ ಪ್ರಕ್ರಿಯೆ ಆರಂಭಿಸಲಿದ್ದಾರೆ ಎಂದು ಉಡುಪಿ ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಶಾಸಕರು, ಮಂಗಳವಾರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ 7 ಜನರ ಸಮಿತಿಯ ಸಭೆ ಸೇರಿ ಉಡುಪಿ ಜಿಲ್ಲೆಯ ಸಿ.ಆರ್.ಝಡ್ ವ್ಯಾಪ್ತಿಯಲ್ಲಿ ಮರಳು ದಿಬ್ಬ ತೆರವುಗೊಳಿಸುವ ಬಗ್ಗೆ ನಿರ್ಣಯ ತೆಗೆದುಕೊಂಡಿದ್ದು, ಈ ಮೂಲಕ 158 ಜನ ಪರವಾನಿಗೆ ದಾರರಿಗೆ ಅನುಮತಿ ಸಿಕ್ಕಿದೆ. ಬುಧವಾರದಿಂದ ಗಣಿ ಇಲಾಖೆ ಯ ಅಧಿಕಾರಿಗಳು ಈ ಲೀಸ್ ನೀಡುವ ಪ್ರಕ್ರಿಯೆಯನ್ನು ಪ್ರಾರಂಭಿಸಲಿರುವರು ಎಂದು ಅವರು ತಿಳಿಸಿದ್ದಾರೆ.


Spread the love

Exit mobile version