ಮರಳು ಸಾಗಾಟದ ಲಾರಿ ಢಿಕ್ಕಿ: ಬೈಕ್ ಸಹಸವಾರ ಮೃತ್ಯು

Spread the love

ಮರಳು ಸಾಗಾಟದ ಲಾರಿ ಢಿಕ್ಕಿ: ಬೈಕ್ ಸಹಸವಾರ ಮೃತ್ಯು

ಮಣಿಪಾಲ: ಟಿಪ್ಪರೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸಹಸವಾರರೊಬ್ಬರು ಮೃತಪಟ್ಟ ಘಟನೆ ಡಿ.13ರಂದು ರಾತ್ರಿ 80 ಬಡಗುಬೆಟ್ಟು ಗ್ರಾಮದ ಶಾಂತಿನಗರದ ಕ್ರಾಸ್‌ನ ಬಳಿ ನಡೆದಿದೆ.

ಮೃತರನ್ನು ಬೈಕ್ ಸಹಸವಾರ ಜನಾರ್ದನ್ ಎಂದು ಗುರುತಿಸಲಾಗಿದೆ. ಸವಾರ ಸಂತೋಷ್ ಎಂಬವರು ತೀವ್ರವಾಗಿ ಗಾಯಗೊಂಡಿದ್ದಾರೆ. ಅಲೆವೂರು ಕಡೆಯಿಂದ ಮಣಿಪಾಲ ಕಡೆಗೆ ಹೋಗುತ್ತಿದ್ದ ಮರಳು ಸಾಗಾಟದ ಟಿಪ್ಪರ್, ಅಲೆವೂರು ಕಡೆಯಿಂದ ಮಣಿಪಾಲ ಕಡೆಗೆ ಬರುತ್ತಿದ್ದ ಬೈಕಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.

ಇದರಿಂದ ಬೈಕಿನಲ್ಲಿದ್ದ ಸವಾರರು ರಸ್ತೆಗೆ ಬಿದ್ದರೆನ್ನಲಾಗಿದೆ. ಇದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಜನಾರ್ದನ್ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಪ್ರಕರಣದಲ್ಲಿ ಪೊಲೀಸರು ಮಹಜರು ನಡೆಸುವಾಗ ಟಿಪ್ಪರ್‌ನಲ್ಲಿ ಸುಮಾರು ಎರಡೂವರೆ ಯುನಿಟ್ ಮರಳು ಕಂಡು ಬಂದಿದ್ದು, ಚಾಲಕ ಹಾಗೂ ಮಾಲಿಕನು ಸೇರಿಕೊಂಡು ಮರಳನ್ನು ಕಳವು ಮಾಡಿ, ಅಕ್ರಮವಾಗಿ ಸಾಗಾಟ ಮಾಡಿರುವುದಾಗಿ ಮಣಿಪಾಲ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.


Spread the love
Subscribe
Notify of

0 Comments
Inline Feedbacks
View all comments