ಮಲ್ಪೆಯಲ್ಲಿ ಮಹಿಳೆ ಮೇಲೆ ಹಲ್ಲೆ: ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ – ಅರುಣ್ ಕುಂದರ್ ಕಲ್ಗದ್ದೆ
ಉಡುಪಿ: ಕಾನೂನು ಯಾರಿಗೂ ಯಾವತ್ತೂ ಕೂಡ ಹಲ್ಲೆ ಮಾಡಲು ಅನುಮತಿ ನೀಡುವುದಿಲ್ಲ ಹಲ್ಲೇ ನಡೆಸಿರುವುದು ಖಂಡನಾರ್ಹ ಎಂದು ನ್ಯಾಯವಾದಿ ಅರುಣ್ ಕುಂದರ್ ಕಲ್ಗದ್ದೆ ಆಗ್ರಹಿಸಿದ್ದಾರೆ.
ಸುಶಿಕ್ಷಿತರ ಜಿಲ್ಲೆ ಉಡುಪಿಯಲ್ಲಿ ನಡೆದ ಎರಡು ಹಲ್ಲೆ ಪ್ರಕರಣಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಾನವೀಯತೆ ಮರೆತು ಮೃಗಗಳಂತೆ ಹಲ್ಲೆ ಮಾಡಿದ್ದಾರೆ. ಒಂದು ಮಲ್ಪೆಯಲ್ಲಿ ಮೀನು ಕದ್ದ ಆರೋಪ ಹಿನ್ನೆಲೆಯಲ್ಲಿ ಮಹಿಳೆಯರನ್ನ ಮರಕ್ಕೆ ಕಟ್ಟಿ ಥಳಿಸಿರುವ ವಿಡಿಯೋ, ಇನ್ನೊಂದು ಜಿಲ್ಲೆಯ ಹೆಸರಾಂತ ಯಕ್ಷಗಾನ ಮೇಳದ ಚೌಕಿಯಲ್ಲಿ ಯಕ್ಷಗಾನ ಕಲಾವಿದರು ಓರ್ವರು ಇನ್ನುರುವ ನಿತ್ಯ ಕಲಾವಿದನಿಗೆ ಮಾಡಿದ ಹಲ್ಲೆಯ ವಿಡಿಯೋ. ಈ ಎರಡು ಪ್ರಕರಣಗಳು ಕಾನೂನು ರೀತಿಯಲ್ಲಿ ಅಪರಾಧ ಎಂದೆನಿಸಿಕೊಳ್ಳುತ್ತದೆ. ನಮ್ಮ ವ್ಯವಸ್ಥೆ ಯಾರಿಗೂ ಯಾವ ಕಾರಣಕ್ಕೂ ಹಲ್ಲೆ ಮಾಡುವ ವಿಚಾರದಲ್ಲಿ ಅನುಮತಿಯನ್ನು ನೀಡುವುದಿಲ್ಲ.
ಸರಿ ತಪ್ಪು ಪ್ರಶ್ನಿಸಲು ಪೊಲೀಸ್ ಇಲಾಖೆ ಕಾನೂನು ವ್ಯವಸ್ಥೆ ರಾಜ್ಯದಲ್ಲಿ ಇಂದಿಗೂ ಸದೃಢವಾಗಿದೆ. ಶಿಕ್ಷಿತರಾದ ನಮ್ಮ ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕಾದ ಅಗತ್ಯತೆ ಇದೆ. ಎರಡು ಪ್ರಕರಣಗಳಲ್ಲಿ ಹಲ್ಲೆಗೆ ಒಳಗಾದವರ ಪರ ನ್ಯಾಯ ವ್ಯವಸ್ಥೆ ನಿಲ್ಲಬೇಕಾದ ಅಗತ್ಯತೆ ಇದ್ದು ತಕ್ಷಣ ಈ ಕುರಿತು ಇಲಾಖೆ ಕ್ರಮ ಕೈಗೊಂಡು ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎನ್ನುವುದು ನನ್ನ ಮನವಿ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ನ್ಯಾಯವಾದಿ ಅರುಣ್ ಕುಂದರ್ ಕಲ್ಗದ್ದೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.