ಮಲ್ಪೆಯ ಘಟನೆ ಉಡುಪಿ ಜಿಲ್ಲೆಗೆ ಮಾಡಿದ ಅವಮಾನ : ಗಿರೀಶ್ ಗುಡ್ಡೆಯoಗಡಿ ತೀವ್ರ ಖoಡನೆ

Spread the love

ಮಲ್ಪೆಯ ಘಟನೆ ಉಡುಪಿ ಜಿಲ್ಲೆಗೆ ಮಾಡಿದ ಅವಮಾನ : ಗಿರೀಶ್ ಗುಡ್ಡೆಯoಗಡಿ ತೀವ್ರ ಖoಡನೆ

ಕಾಪು: ಪ್ರಖ್ಯಾತ ಪ್ರವಾಸೋದ್ಯಮ ತಾಣವಾಗಿರುವ ಮಲ್ಪೆ ಬಂದರಿನಲ್ಲಿ ಮೀನು ಕದ್ದ ಆರೋಪದಲ್ಲಿ ದಲಿತ ಮಹಿಳೆಯನ್ನು ಮರಕ್ಕೆ ಕಟ್ಟಿ ಹಲ್ಲೆ ಮಾಡಿರುವ ಘಟನೆಯನ್ನು ಕಾಪು ಬ್ಲಾಕ್ ಕಾಂಗ್ರೆಸ್ ಉತ್ತರ ವಲಯ ಎಸ್ಸಿ ಎಸ್ಟಿ ಘಟಕದ ಅಧ್ಯಕ್ಷ ಗಿರೀಶ್ ಗುಡ್ಡೆಯoಗಡಿ ತೀವ್ರವಾಗಿ ಖಂಡಿಸಿದ್ದಾರೆ.

ರಾಜ್ಯ ಮಾತ್ರವಲ್ಲದೆ ದೇಶ ವಿದೇಶಗಳಿಂದ ಮಲ್ಪೆ ಪ್ರವಾಸೋದ್ಯಮ ತಾಣಕ್ಕೆ ದಿನ ಪ್ರತಿ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದು, ಇಂತಹ ಸಮಯದಲ್ಲಿಯೇ, ಮಲ್ಪೆಯಲ್ಲಿ ಈ ಘಟನೆ ನಡೆದಿರುವುದು ಅತ್ಯಂತ ಕಳವಳಕಾರಿ ಮತ್ತು ನೋವಿನ ಸಂಗತಿ. ದೂರದ ಊರಿನಿಂದ ಉದ್ಯೋಗ ಆರಸಿ ಬಂದಿರುವ ಈ ಮಹಿಳೆಗೆ, ಮಾನವೀಯತೆ ಮರೆತು ಮೃಗಗಳಂತೆ ಹಲ್ಲೆ ಮಾಡಿದ್ದಾರೆ. ಶಿಕ್ಷಿತರಾದ ನಮ್ಮ ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕಾದ ಅಗತ್ಯತೆ ಇದೆ. ಈ ಘಟನೆ ಉಡುಪಿ ಜಿಲ್ಲೆಗೆ ಮಾಡಿದ ಅವಮಾನ. ಪೊಲೀಸ್ ಇಲಾಖೆ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.


Spread the love